Advertisement

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

01:41 PM Sep 19, 2024 | Team Udayavani |

ಒಂದು ರಾಷ್ಟ್ರ ಒಂದು ಚುನಾವಣೆಯ ವರದಿಯನ್ನು ಮಾಜಿ ರಾಷ್ಟ್ರಪತಿ ಕೇೂವಿಂದ್ ಅವರ ಸಮಿತಿ ರಾಷ್ಟ್ರಪತಿಗಳಿಗೆ ಒಪ್ಪಿಸಿದ್ದರು. ಈಗ ಕೇಂದ್ರ ಸಂಪುಟ ಇದಕ್ಕೆ ಸಮ್ಮತಿಯನ್ನು ನೀಡಿದೆ. ಕೇಂದ್ರ ಸರ್ಕಾರ ಇದೊಂದು ಕ್ರಾಂತಿಕಾರಿ ಹೆಜ್ಜೆ ಎಂದೇ ಬಿಂಬಿಸುವ ಪ್ರಯತ್ನ ನಡೆದಿದೆ. ಆದರೆ ಈ ಸುಧಾರಣೆಯ ಹೆಜ್ಜೆಯಲ್ಲಿ ಹತ್ತು ಹಲವು ತೊಡಕುಗಳನ್ನು ಕೂಡಾ ಗಮನಿಸಲಾಗಿದೆ.

Advertisement

ಈ ಸವಾಲುಗಳಿಗೆ ಉತ್ತರ ನೀಡುವ ಸಂದರ್ಭದಲ್ಲಿ ಕೊಟ್ಟ ಪರಿಹಾರಗಳೆಲ್ಲವೂ ರಾಜಕೀಯ ಪಕ್ಷಗಳ ಆಸಕ್ತಿಗೆ ಪೂರಕವಾಗಿದೆ ಬಿಟ್ಟರೆ ಜನರ ಆಶಯಗಳಿಗೆ ಸ್ವಲ್ಪವೂ ಸ್ಪಂದಿಸಿಲ್ಲ ಅನ್ನುವುದು ಸ್ವಷ್ಟವಾಗಿ ಕಾಣುತ್ತದೆ. ಉದಾ: ಯಾವುದೇ ಒಂದು ಸರ್ಕಾರ ಎರಡು ವರುಷ ಆಡಳಿತ ನಡೆಸಿ ಬಿದ್ದು ಹೇೂದರೆ ಉಳಿದ ಮೂರು ವರುಷಗಳಿಗೆ ಚುನಾವಣೆ ನಡೆಸ ಬೇಕಂತೆ ಅಂದರೆ ಈ ಮಧ್ಯಾವಧಿ ಚುನಾವಣೆ ನಡೆಸುವುದು ಯಾರ ಖರ್ಚಿನಲ್ಲಿ ನಮ್ಮ ಖರ್ಚಿನಲ್ಲಿ ತಾನೇ? ಹಾಗಾದರೆ ಮತ್ತೆ ಯಾಕೆ ಒಂದು ರಾಷ್ಟ್ರ ಒಂದು ಚುನಾವಣೆಯ ಉಸಾಬರಿ. ಮಾತ್ರವಲ್ಲ ಇಲ್ಲಿ ನಾವು ಗಂಭೀರವಾಗಿ ಗಮನಿಸಬೇಕಾದ ಪ್ರಮುಖ ಸಂಗತಿ ಅಂದರೆ ಈ ಎರಡೇ ವರುಷಗಳಲ್ಲಿ ಈ ಚುನಾಯಿತ ಸರಕಾರ ಬಿದ್ದು ಹೇೂಗಲುಕಾರಣ ಯಾರು? ಇದೇ ರಾಜಕಾರಣಿಗಳು ತಾನೇ.ಅವರ ಅಧಿಕಾರದ ದಾಹ ತೀರಿಸಿಕೊಳ್ಳುವುದಕೋಸ್ಕರ ಶಾಸಕರನ್ನು ಖರೀದಿಸುವುದು ಆಮಿಷ ಒಡ್ಡುವುದು..ಇದರಿಂದಾಗಿ ಸರ್ಕಾರ ಉರುಳಿ ಮತ್ತೆ ಚುನಾವಣೆಗೆ ಸಿದ್ಧತೆ ನಡೆಸುವುದು.

ಹಾಗಾದರೆ ಒಂದು ರಾಷ್ಟ್ರ ಒಂದು ಚುನಾವಣೆ ವರದಿಯಲ್ಲಿ ಇದಕ್ಕೇನಾದರೂ ಪರಿಹಾರವಿದೆಯಾ ಖಂಡಿತವಾಗಿಯೂ ಇಲ್ಲ. ಇನ್ನೂ ಕೇಳಿ ಒಬ್ಬ ಶಾಸಕನಾಗಿ ಚುನಾಯಿತನಾಗಿದ್ದಾನೆ. ಅವನಿಗೆ ಮತ್ತೆ ಲೇೂಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ.. ಹಾಗಾದರೆ ಇಲ್ಲಿ ಖಾಲಿ ಬಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲು ಯಾರು ಹಣ ಖರ್ಚು ಮಾಡಬೇಕು.?ಸರ್ಕಾರ ಅಂದ್ರೆ ಜನರೇ ತಾನೇ?ಈ ಸಮಸ್ಯೆಗೇನಾದರೂ ಪರಿಹಾರ ಉಂಟಾ ಇದು ಇಲ್ಲ. ಒಬ್ಬ ಅಭ್ಯರ್ಥಿಗೆ ಒಂದೇ ಕ್ಷೇತ್ರದಲ್ಲಿ ಚುನಾವಣೆ ಯಲ್ಲಿ ಸ್ಪಧೆ೯ ಮಾಡಲು ಅವಕಾಶ ಮಾಡಿಕೊಡ ಬೇಕು.ಇದಕ್ಕೆ ಇಲ್ಲಿ ಯಾವುದೇ ಉತ್ತರವಿಲ್ಲ. ಯಾಕೆಂದರೆ ಇದರಿಂದಾಗಿ ಅವರಿಗೆ ತೊಂದರೆ. ಇಂತಹ ಹಲವಾರು ಸಮಸ್ಯೆಗಳಿಗೆ ಜನರನ್ನೆ ಬಲಿಪಶು ಮಾಡಿ ರಾಜಕೀಯ ಪಕ್ಷದವರು ಅನುಭೇೂಗಿಸುವ ಸೌಕರ್ಯಗಳನ್ನು ಚುನಾವಣೆಯ ಕ್ರಾಂತಿಕಾರಿ ಸುಧಾರಣೆ ಅನ್ನುವುದು ಯಾವ ಬಯಲು ಸೀಮೆ ನ್ಯಾಯ.?

ಈ ವರದಿ ತಯಾರಿಕೆಯಲ್ಲಿ ಮಾಜಿ ರಾಷ್ಟ್ರಪತಿ ಕೇೂವಿಂದರ ತಂಡ ಹಲವು ದೇಶಗಳಿಗೆ ಭೇಟಿ ನೀಡಿದ್ದಾರಂತೆ . ಅವರು ಯಾವ ದೇಶವನ್ನು ಸುತ್ತ ಬೇಕಿತ್ತೊ ಅಲ್ಲಿಗೆ ಹೇೂಗಲೇ ಇಲ್ಲ.ನಮ್ಮ ದೇಶದಂತೆ ಸಂಸದೀಯ ಪ್ರಜಾಸತ್ತಾತ್ಮಕ ಸರ್ಕಾರವಿರುವ ಬಹುತ್ವದ ರಾಜಕೀಯ ಆರ್ಥಿಕ ಸಂಸ್ಕೃತಿ ಭಾಷೆ ಭೌಗೋಳಿಕತೆ ಇರುವ ದೇಶಗಳಲ್ಲಿ ಈ ವಿಷಯದ ಕುರಿತಾಗಿ ಅಧ್ಯಯನ ನಡೆಸಿದ್ದರೆ ಆ ಅಧ್ಯಯನಕ್ಕೊಂದು ಅಥ೯ ಬರುತ್ತಿತ್ತು.

Advertisement

ಉದಾ:ಜಪಾನ್. ಅಲ್ಲಿ ನಮ್ಮ ಹಾಗೆ ಸಂಸದೀಯ ಸರ್ಕಾರ ಬಹುಪಕ್ಷೀಯ ಪದ್ದತಿ ..ಹಲವು ವರುಷಗಳ ಕಾಲ ಸಮಿಶ್ರ ಸರ್ಕಾರ ; ಅತಂತ್ರ ಸರಕಾರ; ಪಕ್ಷಾಂತರ ಸಮಸ್ಯೆ ..ಈ ಎಲ್ಲಾ ಸವಾಲುಗಳನ್ನು ಅನುಭವಿಸಿದ ಜಪಾನ್ ಸರ್ಕಾರ..ಇದಕ್ಕಾಗಿಯೇ ಅವರು ಕಂಡು ಕೊಂಡ ಸುದೃಢ ಸರ್ಕಾರಕ್ಕೆ ಪರಿಹಾರವೆಂದರೆ..ಹೊಸ ಜಪಾನ್ ಮಾಡೆಲ್..

ಅಲ್ಲಿನ ಪ್ರಧಾನಿಯನ್ನು ಸಂಸತ್ತಿನ ಒಳಗೇನೆ ಚುನಾಯಿಸಲ್ಪಡುತ್ತಾರೆ. ನಮ್ಮಲ್ಲಿ ಪ್ರಧಾನಿ/ಮುಖ್ಯ ಮಂತ್ರಿಗಳು ಸದನದ ಹೊರಗಡೆ ಚುನಾಯಿತರಾಗಿ ಒಳಗೆ ಬಂದು ವಿಶ್ವಾಸವೊ? ಅವಿಶ್ವಾಸವೊ ತೇೂರಿಸ ಬೇಕು. ಒಂದು ವೇಳೆ ಸದನದ ಒಳಗೆ ಚುನಾಯಿತ ಪ್ರಧಾನಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸ ಬೇಕಾದರೆ ಮೊದಲು ಇನ್ನೊಬ್ಬ ಪ್ರಧಾನಿಯನ್ನು ಆಯ್ಕೆ ಮಾಡಿ ಮೊದಲಿನ ಸರ್ಕಾರದ ಮುಖ್ಯಸ್ಥನನ್ನು ಮನೆಗೆ ಕಳಹಿಸ ಬೇಕು. ನಮ್ಮಲ್ಲಿ ಹಾಗೆ ಅಲ್ಲ..ಮೊದಲು ಅವಿಶ್ವಾಸ ಮಂಡಿಸಿ.ಮನೆಗೆ ಕಳುಹಿಸಿ ಮತ್ತೆ ಹೊಸಬರನ್ನು ಹುಡುಕುವುದು..ಹುಡುಕುವಾಗ ಕುದುರೆ ವ್ಯಾಪಾರ ರೆಸಾರ್ಟ್ ಉಪಚಾರ.. ಎಲ್ಲವೂ ನಡೆದುಹೇೂಗುತ್ತದೆ. ಇಂತಹ ಯಾವುದೇ ಗಂಡಾಂತರಕಾರಿ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ “ಒಂದು ದೇಶ ಒಂದು ಚುನಾವಣೆ” ಕ್ರಾಂತಿಕಾರಿ ಬದಲಾವಣೆ ಸುಧಾರಣೆ ಅನ್ನುವುದು ಬರೇ ಭ್ರಾಂತಿಕಾರಿ ಹೆಜ್ಜೆ ಬಿಟ್ಟರೆ ಕ್ರಾಂತಿಕಾರಿ ಖಂಡಿತವಾಗಿಯೂ ಅಲ್ಲ..

*ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next