Advertisement
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ ಮತ್ತು ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಕುಂದಾಪುರ ತಾಲೂಕಿನ ವಿವಿಧೆಡೆ ಸಂಜೆ ವೇಳೆ ರಭಸವಾಗಿ ಗಾಳಿ ಬೀಸಿ ಸಿಡಿಲಿನ ಅಬ್ಬರದೊಂದಿಗೆ ಮಳೆಯಾಯಿತು. ಗಾಳಿಯಿಂದ ಅಲ್ಲಲ್ಲಿ ಮರ ಉರುಳಿ ಹಾನಿಯುಂಟಾಗಿದೆ. ಕೆಲವು ಕಡೆ ಹೆಂಚು ಹಾರಿ ಹೋಗಿವೆ.
ಉತ್ತರ ಒಳನಾಡಿನಲ್ಲಿ ಉಂಟಾದ ಕಡಿಮೆ ಒತ್ತಡದ ತಗ್ಗು (ಟ್ರಫ್) ಹಾಗೂ ಒಡಿಶಾದಿಂದ ಕರಾವಳಿಯವರೆಗಿನ ಮೇಲ್ಮೆ„ ಸುಳಿಗಾಳಿಯಿಂದಾಗಿ ಹಲವೆಡೆಗಳಲ್ಲಿ ಭಾರೀ ಮಳೆಯಾಗಿದೆ. ಬುಧವಾರದ ವೇಳೆಗೆ ಮೇಲ್ಮೆ„ ಸುಳಿಗಾಳಿಯ ತೀವ್ರತೆ ಕಡಿಮೆಯಾಗಲಿದ್ದು, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.