ಕೊ*ಲೆ, ಸುಲಿಗೆ, ಅತ್ಯಾ*ಚಾರ, ದರೋಡೆ, ಕಳ್ಳತನ ಹೀಗೆ ವಿವಿಧ ಅಪರಾಧ ಕೃತ್ಯಗಳಿಗೆ ಒಂದೊಂದು ದೇಶದಲ್ಲಿ ವಿವಿಧ ರೀತಿಯ ಶಿಕ್ಷೆ ನೀಡುವ ಕಾನೂನುಗಳಿವೆ. ಅದೇ ರೀತಿ ಸೌದಿ ಅರೇಬಿಯಾದಲ್ಲಿ ಮರಣದಂಡನೆ ಶಿಕ್ಷೆ ಹೆಚ್ಚು ಪ್ರಚಲಿತದಲ್ಲಿದೆ. ಹುಬ್ಬೇರಿಸುವಂತ ವಿಚಾರ ಯಾವುದೆಂದರೆ 2024ನೇ ಸಾಲಿನಲ್ಲಿ ಸೌದಿ ಅರೇಬಿಯಾ ಬರೋಬ್ಬರಿ 101 ವಿದೇಶಿ ಪ್ರಜೆಗಳನ್ನು ನೇಣಿಗೇರಿಸಿದೆ. ಇದು ಸೌದಿ ಇತಿಹಾಸದಲ್ಲೇ ಅತೀ ಹೆಚ್ಚು ಜನರನ್ನು ಗಲ್ಲಿಗೇರಿಸಿದ ಸಂಖ್ಯೆಯಾಗಿದೆ!
ಅಂಕಿ-ಅಂಶಗಳ ಪ್ರಕಾರ 2022ರಲ್ಲಿ ಸೌದಿ ಅರೇಬಿಯಾ 34 ವಿದೇಶಿಯರನ್ನು ಗಲ್ಲಿಗೇರಿಸಿತ್ತು. ಅದೇ ರೀತಿ 2023ರಲ್ಲಿಯೂ 34 ವಿದೇಶಿ ಜನರನ್ನು ನೇಣಿಗೇರಿಸಿತ್ತು. ಸೌದಿ ಅರೇಬಿಯಾ ಮರಣದಂಡನೆ ಶಿಕ್ಷೆಯನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ ಎಂದು ಮಾನವ ಹಕ್ಕು ಸಂಘಟನೆಗಳು ಆರೋಪಿಸಿವೆ.
ಗಲ್ಲಿಗೇರಿಸಿಲ್ಪಟ್ಟ 101 ವಿದೇಶಿಯರಲ್ಲಿ, 92 ಮಂದಿ ಡ್ರಗ್ ಅಪರಾಧದ ಆರೋಪಿಗಳು, ಇದರಲ್ಲಿ 69 ಜನರು ವಿದೇಶಿ ಪ್ರಜೆಗಳು ಇದ್ದಿರುವುದಾಗಿ ವರದಿ ತಿಳಿಸಿದೆ. ವಿದೇಶಿಯರೇ ಹೆಚ್ಚು ಗಲ್ಲುಶಿಕ್ಷೆಗೆ ಒಳಗಾಗುತ್ತಿರುವ ಗುಂಪಾಗಿದೆ ಎಂದು ಯುರೋಪಿಯನ್ ಸೌದಿಯ ಮಾನವ ಹಕ್ಕು ಸಂಘಟನೆಯ ಕಾನೂನು ನಿರ್ದೇಶಕ ಟಾಹಾ ಅಲ್ ಹಾಜಿ ತಿಳಿಸಿದ್ದಾರೆ.
ಇತ್ತೀಚೆಗಿನ ದಶಕಗಳಿಗೆ ಹೋಲಿಸಿದಲ್ಲಿ ಸೌದಿ ಅರೇಬಿಯಾದಲ್ಲಿ ಗಲ್ಲಿಗೇರಿಸುತ್ತಿರುವವರ ಸಂಖ್ಯೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಇದರಿಂದ ಆ ಕುಟುಂಬಗಳು ಕೂಡಾ ಭಯದಲ್ಲೇ ಬದುಕುವಂತಾಗಿದೆ.
ಎಎಫ್ ಪಿ ವರದಿ ಪ್ರಕಾರ, ಈ ವರ್ಷ ಸೌದಿಅರೇಬಿಯಾದಲ್ಲಿ ಪಾಕಿಸ್ತಾನದ 21, ಯೆಮೆನ್ ನ 20, ಸಿರಿಯಾದ 14, ನೈಜೀರಿಯಾ 10, ಈಜಿಪ್ಟ್ 09, ಜೋರ್ಡಾನ್ 08, ಇಥಿಯೋಪಿಯಾ 7, ಸುಡಾನ್ 03, ಭಾರತ 03, ಇಂಡೋನೇಷ್ಯಾ, ಅಫ್ಘಾನಿಸ್ತಾನ, ಶ್ರೀಲಂಕಾ 01, ಏರಿಟ್ರೆಯಾ ಮತ್ತು ಫಿಲಿಪ್ಪೈನ್ಸ್ ಸೇರಿದಂತೆ ಹಲವು ವಿದೇಶಯರನ್ನು ಗಲ್ಲಿಗೇರಿಸಲಾಗಿದೆ.
ಗಲ್ಲು ಶಿಕ್ಷೆಯ ಬಳಕೆ ಕುರಿತು ಹೆಚ್ಚಿನ ಪರಿಶೀಲನೆ ನಡೆಸಬೇಕಾಗಿದೆ. ಇಡೀ ಜಗತ್ತಿನಾದ್ಯಂತ ಆರೋಪಿಗಳನ್ನು ಗಲ್ಲಿಗೇರಿಸುವ ಮೂರನೇ ಅತೀ ದೊಡ್ಡ ದೇಶಗಳಲ್ಲಿ ಸೌರದಿ ಅರೇಬಿಯಾ ಒಂದಾಗಿದೆ. ಚೀನಾ ಮತ್ತು ಇರಾನ್ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ.
2024ರ ಅತೀ ಹೆಚ್ಚಿನ ಗಲ್ಲುಶಿಕ್ಷೆ ಜಾರಿಗೊಳಿಸಿರುವುದು ಸೌದಿ ಅರೇಬಿಯಾ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಇಚ್ಛೆಯ ವಿರುದ್ಧವಾಗಿದೆ. 2022ರ ದ ಅಟ್ಲಾಂಟಿಕ್ ಗೆ ನೀಡಿದ್ದ ಸಂದರ್ಶನದಲ್ಲಿ, ಕೊ*ಲೆ ಅಥವಾ ಹಲವರ ಜೀವಗಳಿಗೆ ಅಪಾಯಕಾರಿಯಾಗಿದ್ದ ವ್ಯಕ್ತಿಗಳನ್ನು ಹೊರತುಪಡಿಸಿ, ಇನ್ನುಳಿದಂತೆ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸುವುದಾಗಿ ತಿಳಿಸಿದ್ದರು.