Advertisement

ವೃತ್ತಿಯಲ್ಲಿ ಪ್ರಾಯೋಗಿಕ ಜ್ಞಾನ ಮುಖ್ಯ: ಉಪಾಸ

03:00 PM Sep 15, 2018 | Team Udayavani |

ಯಾದಗಿರಿ: ಯಾವುದೇ ವೃತ್ತಿ ಜೀವನದಲ್ಲಿ ಪ್ರಾಯೋಗಿ ಜ್ಞಾನ ಮುಖ್ಯವಾಗಿದ್ದು, ಇಂಜಿನಿಯರ್‌ ವೃತ್ತಿಯಲ್ಲಿ ಸೇರುವ ವಿದ್ಯಾರ್ಥಿಗಳಿಗಾಗಿ ಸರ್ವೇ ಆಯೋಜನೆಯಿಂದ ಹೆಚ್ಚಿನ ಪರಿಣಿತಿ ಲಭಿಸುತ್ತದೆ ಎಂದು ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಹೇಳಿದರು.

Advertisement

ಸರ್‌.ಎಂ. ವಿಶ್ವೇಶ್ವರಯ್ಯ ಜನ್ಮದಿನ ಹಿನ್ನೆಲೆ ಆಚರಿಸಲ್ಪಡುವ ಇಂಜಿನಿಯರ್ ದಿನದ ಅಂಗವಾಗಿ ನಗರದ ಆರ್‌.ವಿ. ಕನ್ಸಲ್ಟಿಂಗ್‌ ಸಿವಿಲ್‌ ಇಂಜಿನಿಯರ್ ವತಿಯಿಂದ ನಗರದ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಟೇಷನ್‌ ರಸ್ತೆಯ ತ್ವರಿತ ಸರ್ವೇ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ನಗರದ ರಸ್ತೆಯೊಂದರಲ್ಲಿ ಸರ್ವೇ ಮಾಡುವ ಸ್ಪರ್ಧೆ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.

ನಂತರ ನಗರದ ಡಿಪ್ಲೋಮಾ ಕಾಲೇಜುಗಳ ಮೂರು ತಂಡಗಳಲ್ಲಿ ವಿದ್ಯಾರ್ಥಿಗಳು ಸ್ಟೇಷನ್‌ ರಸ್ತೆಯಿಂದ ಶಾಸ್ತ್ರಿ
ವೃತ್ತದವರೆಗಿನ ರಸ್ತೆಯನ್ನು ತ್ಯೂಡೊಲೈಟ್‌, ಡಂಪಿ ಲೇವಲ್‌ ಯಂತ್ರಗಳ ಸಹಾಯದಿಂದ ಸರ್ವೇ ಮಾಡಿದರು.

ಈ ಸಂದರ್ಭದಲ್ಲಿ ಆರ್‌.ವಿ. ಕನ್ಸಲ್ಟಿಂಗ್‌ ಸಂಸ್ಥೆಯ ಎಂಜಿನಿಯರ್‌ ರಾಜಕುಮಾರ ಗಣೇರ್‌, ರಮೇಶ, ಶರಣಪ್ಪ ನಾಯಕ ಸೇರಿದಂತೆ ಜವಹಾರ, ವೈಪಿವೈ ಮತ್ತು ನಿವೇದಿತಾ ಡಿಪ್ಲೋಮಾ ಕಾಲೇಜು ವಿದ್ಯಾರ್ಥಿ ತಂಡದ ನಾಯಕರಾದ ಭರತ, ಶಿವಕುಮಾರ ಮತ್ತು ಭಾಗ್ಯಶ್ರೀ ಮತ್ತು ನಿಕಿತಾ ಅವರ ನೇತೃತ್ವದಲ್ಲಿ ಪ್ರತಿ ತಂಡದಲ್ಲಿ ನಾಲ್ವರು ಭಾಗವಹಿಸಿದ್ದರು. ಅತ್ಯುತ್ತಮ ಸರ್ವೇ ಮಾಡಿದ ತಂಡಕ್ಕೆ ಇಂಜಿನಿಯರ್ದಿ ನಾಚರಣೆಯಂದು ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next