ರಾಮನಗರ: ರೈತರು ಸರ್ಕಾರಿ ಸೌಲಭ್ಯಗಳನ್ನುಬಳಸಿಕೊಂಡು ಅಧಿಕಾರಿಗಳ ಸಲಹೆ ಪಡೆದು, ಕೃಷಿಪದ್ಧತಿಯಲ್ಲಿ ಹೊಸತನದ ಪ್ರಯೋಗ ಮಾಡಬಹುದು ಎಂದು ಶಾಸಕಿ ಅನಿತಾ ಕುಮಾರಸ್ವಾಮಿಹೇಳಿದರು.
ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆಮತ್ತು ಮೀನುಗಾರಿಕೆ ಇಲಾಖೆ ವತಿಯಿಂದ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮ ಮತ್ತುಕೃಷಿ ಮಾಹಿತಿ ರಥಕ್ಕೆ ತಾಲೂಕಿನ ಹುಣಸನಹಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ಚಾಲನೆನೀಡಿ ಮಾತನಾಡಿ, ಅಧಿಕಾರಿಗಳು ಸರ್ಕಾರದಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ,ರೈತರು ಅವುಗಳನ್ನು ಉಪಯೋಗಿಸಿಕೊಳ್ಳುವಂತೆಮಾಡಬೇಕಾಗಿದೆ ಎಂದರು.
ನರೇಗಾ ಬಗ್ಗೆ ಅರಿವು ಮೂಡಿಸಿ: ಕೃಷಿ ಜೊತೆಗೆರೈತರು ಮೀನುಗಾರಿಕೆ, ರೇಷ್ಮೆ, ಹಸು ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳಲು ಇರುವ ಸವಲತ್ತುಗಳಬಗ್ಗೆ ಮಾಹಿತಿ ಕೊಡುವುದಲ್ಲದೆ, ನರೇಗಾಯೋಜನೆ ಬಗ್ಗೆಯೂ ತಿಳುವಳಿಕೆ ಮೂಡಿಸಬೇಕು.ಸರ್ಕಾರಬಿತ್ತನೆಬೀಜ,ಕೃಷಿಯಂತ್ರೋಪಕರಣಗಳಖರೀದಿಗೆ ಸಹಾಯಧನ ನೀಡುತ್ತಿದೆ. ಜಮೀನುಅಭಿವೃದ್ಧಿ, ತೋಟದ ಬೆಳೆಗಳು, ರೇಷ್ಮೆ ತೋಟನಿರ್ವಹಣೆ, ತೋಟಗಾರಿಕಾ ಬೆಳೆಗಳಿಗೆ ಪ್ರೋತ್ಸಾಹನೀಡುತ್ತಿದೆ. ನರೇಗಾ ಯೋಜನೆಯಡಿ ವೈಯಕ್ತಿಕಕಾಮಗಾರಿಗಳಿಗೂ ಸಹಕಾರ ಸಿಗುತ್ತಿದೆ ಎಂದುತಿಳಿಸಿದರು.
ಕಚೇರಿಗೆ ಅಲೆದಾಡಿಸಬೇಡಿ: ರೈತರಿಗೆ ಸಿಗುವಸೌಲಭ್ಯಗಳನ್ನು ಅಧಿಕಾರಿಗಳು ಕಾಲಕಾಲಕ್ಕೆ ರೈತರಿಗೆ ಲಭ್ಯವಾಗಿಸಬೇಕು. ರೈತರನ್ನು ಪದೇ ಪದೆಕಚೇರಿಗೆ ಅಲೆದಾಡಿಸುವ ಕೆಲಸ ಮಾಡಬೇಡಿ,ಕಚೇರಿಯಲ್ಲೇ ಕೂರ ಬೇಡಿ, ಸರ್ಕಾರಿ ಸೌಲಭ್ಯ,ಪರಿಹಾರ ಇತ್ಯಾದಿಯನ್ನು ಮನೆ ಬಾಗಲಿಗೆ ತಲುಪಿಸಲು ಪ್ರಯತ್ನಿಸಬೇಕು. ಇಲಾಖೆಗಳ ಮಾನದಂಡಗಳ ಪ್ರಕಾರವೇ ಸೌಲಭ್ಯ, ಪರಿಹಾರವನ್ನುರೈತರಿಗೆ ಅಧಿಕಾರಿಗಳು ತಲುಪಿಸಬೇಕು. ರೈತರವಿಚಾರದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಗಳಿಗೆ ಒಳಗಾಗಬಾರದು. ಅರ್ಹರಿಗೆ ಸೌಲಭ್ಯಸಿಗುವ ರೀತಿಯಲ್ಲಿಕರ್ತವ್ಯ ನಿರ್ವಹಿಸಿ ಎಂದರು.
ರೈತರಿಗೆ ಮಾರ್ಗದರ್ಶನ: ರಾಮನಗರತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಡಾ.ವನಿತಾ ಮಾತನಾಡಿ, ರೈತರಿಗೆ ಇಲಾಖೆಗಳಲ್ಲಿಸಿಗುವ ಕೃಷಿ ಯಂತ್ರ, ಬಿತ್ತನೆ ಬೀಜ ಮುಂತಾದಸೌಲಭ್ಯಗಳ ಮಾಹಿತಿ ಮತ್ತು ಮಾರ್ಗದರ್ಶನನೀಡುವುದು ಕೃಷಿ ರಥದ ಉದ್ದೇಶ. ಕೃಷಿ ರಥದಜೊತೆಯಲ್ಲಿ ಕೃಷಿ, ತೋಟಗಾರಿಕೆ, ಪಶುಪಾಲನೆ,ಮೀನುಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಅಧಿಕಾರಿಗಳು ಇದ್ದು ತಮ್ಮ ಇಲಾಖೆಗಳಿಂದಸಿಗುವ ಸೌಲಭ್ಯಗಳಬಗ್ಗೆ ಮಾಹಿತಿ ಒದಗಿಸಿಕೊಡುತ್ತಿದ್ದಾರೆ ಎಂದರು.
ರೈತರಿಗೆ ಕೃಷಿ ಇಲಾಖೆಯ ಪರವಾಗಿ ಶಾಸಕರುಬಿತ್ತನೆ ರಾಗಿ ವಿತರಿಸಿದÃು. ಮಾಹಿತಿ ಕರಪತ್ರಬಿಡುಗಡೆ ಮಾಡಿದರು. ತಾ±ಂ Ê Þಜಿ ಸದಸ್ಯಲಕ್ಷಿ ¾àಕಾಂತ, ಗ್ರಾಪಂ ಮಾಜಿ ಅಧ್ಯಕ್ಷ ಶಿವರಾಜು,ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇÍಕ ಪಿ.ಅÍಥ್, Ìಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸಾಮಿ, Ì ಜೆಡಿಎಸ್‌ಪ್ರಚಾರ ಸಮಿತಿ ಅಧ್ಯಕ್ಷ ಆರ್.ಪಾಂvುರಂ ಗ,ಕೃಷಿಅಧಿಕಾರಿ ಪಿ. ಪ್ರದೀಪ್, ರೇಷ್ಮೆ ಸಹಾಯಕನಿರ್ದೇಶಕ ಕುಮಾರ್ ಸುಬ್ರಹ್ಮಣ್ಯ, ಮುಖಂಡರಾದ ಶಂಕರ್ ರಾವ್, ಗೋವಿಂದರಾಜು,ಯಕ್ಷರಾಜು, ಮಹೇಶ್, ಗೂàಪಿ ೆ , ಗುನ್ನೂರುದೇವರಾಜು, ಕೆಂಪರಾಜು, ಪ್ರಕಾಶ್, ಮಲ್ಲೇಶ್,ಕಾಡನಕುಪ್ಪೆ ನವೀನ್, ಜಯಕುಮಾರ್, ರೇಷ್ಮೆಅಧಿಕಾರಿ ಆನಂದ್, ರಾಮಕೃಷ್ಣ, ಆತ್ಮಯೋಜನೆಅಧಿಕಾರಿ ಶುಭ ಹಾಜರಿದ್ದರು.