Advertisement

ಜೀವನದ ಸಂಭ್ರಮದ ಕ್ಷಣಗಳನ್ನು ಅನುಭವಿಸಿ

11:43 PM Mar 08, 2020 | Sriram |

ಬದುಕು ಅಂದಷ್ಟು ಸುಲಭವಲ್ಲ. ಪ್ರತಿ ದಿನ ಒಂದಲ್ಲ ಒಂದು ವಿಷಯದಲ್ಲಿ ಏಳು ಬೀಳುಗಳು ಇದ್ದೇ ಇರುತ್ತವೆ. ಇವುಗಳನ್ನು ಸಮಜಾಯಿಸಿ, ಸರಿದೂಗಿಸಿಕೊಂಡು ಸಂತೋಷವಾಗಿರುವುದೇ ಜೀವನ.

Advertisement

ಕಳೆದು ಹೋದ ದಿನಗಳನ್ನು ನೆನೆಯುತ್ತ, ಅದೇ ಗುಂಗಿನಲ್ಲಿರುವುದರಿಂದ ಸಂತೋಷದ ಜೀವನ ಸಾಧ್ಯವಿಲ್ಲ. ನಕಾರಾತ್ಮಕ ಚಿಂತನೆಗಳನ್ನು ಮಾಡುವುದರಿಂದ ಸುಮ್ಮನೆ ಸಮಯದ ವ್ಯರ್ಥ ಮಾತ್ರ. ಇದರಿಂದ ಜೀವನದಲ್ಲಿ ಯಾವುದೇ ಉತ್ತಮ ಲಾಭವಿಲ್ಲ. ಯಾವಾಗಲೂ ನಾವು ಧನಾತ್ಮಕ ಚಿಂತನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷವಾಗಿರಲು ಸಹಾಯ ಮಾಡುತ್ತದೆ.

ಜೀವನದಲ್ಲಿ ಪ್ರತಿಯೊಂದು ಸಣ್ಣ ಸಣ್ಣ ಕ್ಷಣಗಳನ್ನೂ ಸಂಭ್ರಮಿಸಲು ರೂಢಿಸಿಕೊಳ್ಳಬೇಕು. ಸಣ್ಣ ಪುಟ್ಟ ವಿಷಯಗಳಿಗೆ ಮನಸ್ತಾಪಗಳು, ಜಗಳ, ವಾದ ವಿವಾದಗಳ ಬದಲು. ಪ್ರತಿಯೊಂದು ವಿಷಯದಲ್ಲೂ ಒಳ್ಳೆಯದನ್ನು ಕಾಣಲು ಕಲಿಯಬೇಕು. ಇಂತಹ ಮನಸ್ಥಿತಿಯಿದ್ದರೆ ಜೀವನದಲ್ಲಿ ಮುನ್ನುಗ್ಗಲು ಸಾಧ್ಯ. ಜೀವನದಲ್ಲಿ ಒಬ್ಬರನ್ನೊಬ್ಬರು ಅರಿತು ಮುನ್ನಡೆದರೆ ಉತ್ತಮ ಸ್ನೇಹ ಸಂಬಂಧ ಬೆಳೆಯುತ್ತದೆ. ನಮ್ಮಲ್ಲಿ ಯಾವುದೇ ಸಮಸ್ಯೆಗಳಿದ್ದರೂ ನಾವು ಮುಖದಲ್ಲಿ ಒಂದು ಸಣ್ಣ ನಗು ಇಟ್ಟುಕೊಳ್ಳಬೇಕು. ಮುಖದಲ್ಲಿ ನಗುವಿದ್ದರೆ ಮುಖದ ಸೌಂದರ್ಯದ ಜತೆ ಮನಸ್ಸಿನ ನೆಮ್ಮದಿ ಸಹ ಅಧಿಕವಾಗುತ್ತದೆ. ನಾವು ಯಾವುದೇ ಸಮಸ್ಯೆಯ ಕೂಪದಲ್ಲಿದ್ದರೂ ಸಣ್ಣ ಮಕ್ಕಳ ಜತೆ ಒಂದಷ್ಟು ಸಮಯ ಕಳೆದರೆ, ಮಗುವಿನ ನಗು, ಕೀಟಲೆ ನಮ್ಮ ಸಮಸ್ಯೆಯನ್ನು ಮರೆಯುವಂತೆ ಮಾಡುತ್ತದೆ. ಮಗುವಿನ ಜತೆ ಕಳೆದ ಆ ಸಮಯ ಯಾವುದೋ ಬೇರೆ ಲೋಕಕ್ಕೆ ಹೋದಂತಿರುತ್ತದೆ. ಅದೇ ರೀತಿ ನಮ್ಮ ಒಂದು ಸಣ್ಣ ನಗುವಿಗೆ ನಮ್ಮ ನಮ್ಮ ಸುತ್ತಮುತ್ತಲಿನವರ ಮನಸ್ಸುಗಳನ್ನು ಖುಷಿಪಡಿಸುವ ಶಕ್ತಿ ಹೊಂದಿದೆ.

-ವಿರಾಜ್‌ ಹೆಗ್ಡೆ ಕಾಸನಮಕ್ಕಿ

Advertisement

Udayavani is now on Telegram. Click here to join our channel and stay updated with the latest news.

Next