ಸಕಲೇಶಪುರ: ಸಂಬಾರ ಪದಾರ್ಥಗಳ ರಾಣಿ ಎಂದು ಕರೆಸಿಕೊಳ್ಳುವ ಏಲಕ್ಕಿ ಧಾರಣೆ ಇತಿಹಾಸ ನಿರ್ಮಿಸಿದೆ. ರಾಜ್ಯದ ಏಕೈಕ ಏಲಕ್ಕಿ ಮಾರುಕಟ್ಟೆ ಇರುವ ಪಟ್ಟಣದಲ್ಲಿ ಇತಿಹಾಸದಲ್ಲಿ ಇದೆ ಪ್ರಥಮ ಬಾರಿಗೆ ಏಲಕ್ಕಿ ಧಾರಣೆ ಕೇಜಿಗೆ 3 ಸಾವಿರ ರೂ.ಗಳಿಂದ ನಾಲ್ಕು ಸಾವಿರಕ್ಕೇ ರಿದೆ. ಕಳೆದ 2 ದಶಕದಿಂದ 400 ರೂ. ನಿಂದ 1,200 ರೂ. ಆಸು ಪಾಸಿನಲ್ಲಿತ್ತು. ಕಳೆದ ಒಂದು ದಶಕದ ಹಿಂದೆ 1,800 ರೂ. ವರೆಗೆ ಮಾರಾಟ ವಾಗಿದೆ. ಇದುವರಗೆ ಮಾರುಕಟ್ಟೆ ಕಂಡ ಹೆಚ್ಚಿನ ಬೆಲೆಯಾ ಗಿತ್ತು ಆದರೆ ಕಳೆದ ಒಂದು ತಿಂಗಳ ಹಿಂದೆ 2,900 ರೂ. ವರೆಗೆ ಏರಿಕೆಯಾಗಿದ್ದ ಬೆಲೆ ಮತ್ತೆ ಕುಸಿತ ಕಂಡಿತ್ತು.
ಧಾರಣೆ ಕುಸಿತಕ್ಕೆ ಕಾರಣ: ಏಲಕ್ಕಿಯ ತವರು ತಾಲೂಕಿನ ಸಾಂಪ್ರದಾಯಿಕ ಬೆಳೆಯಾದ ಏಲಕ್ಕಿಗೆ 90 ರ ದಶಕದಲ್ಲಿ ಕಾಣಿಸಿಕೊಂಡ ಔಷಧವಿಲ್ಲದ ರೋಗಗಳಾದ ಕೊಳೆ ಹಾಗೂ ಬೆಲ್ಲದ ರೋಗ ಸಂಪೂರ್ಣ ನಾಶಮಾಡಿದೆ. ಈಗ ದೇಶದ ಪ್ರತಿಶತ ಶೇ. 90 ರಷ್ಟು ಏಲಕ್ಕಿ ಪೂರೈಸುತ್ತಿರುವುದು ಕೇರಳ ರಾಜ್ಯವಾಗಿದೆ. ಆದರೆ, ಕಳೆದ ಬಾರಿಯ ಅತಿವೃಷ್ಟಿಗೆ ಸಿಲುಕಿ ಬಹುತೇಕ ಏಲಕ್ಕಿ ಬೆಳೆ ಕೊಳೆತು ನಾಶ ವಾಗಿದ್ದರಿಂದ ಈಗ ಮಾರುಕಟ್ಟೆಯಲ್ಲಿ ಏಲಕ್ಕಿ ಕೊರತೆ ಕಾಣಿಸಿಕೊಂಡಿರು ವುದೆ ಬೆಲೆ ಏರಿಕೆಗೆ ಕಾರಣವಾಗಿದೆ.
ಮಾರುಕಟ್ಟೆಗೆ ಬರುತ್ತಿ ರುವ ಏಲಕ್ಕಿ: ಕಳೆದ 40 ವರ್ಷಗಳ ಹಿಂದೆ ಪಟ್ಟಣ ದಲ್ಲಿ 30ಕ್ಕೂ ಅಧಿಕ ಏಲಕ್ಕಿ ಮಾರಾಟ ಕೇಂದ್ರಗಳಿದ್ದರೆ ಈಗ ಕೇವಲ ಮೂರು ಮಾರಾಟ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ಹಿಂದೆ ಮಾರುಕಟ್ಟೆಗಳಿಗೆ 6 ಸಾವಿರದಿಂದ ರಿಂದ 13 ಸಾವಿರ ಕೇಜಿ ವರೆಗೆ ಏಲಕ್ಕಿ ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗಿನಿಂದ ಮಾರಾಟಕ್ಕೆ ತರಲಾಗುತ್ತಿತ್ತು. ಆದರೆ, ಏಲಕ್ಕಿ ಬೆಳೆಗೆ ರೋಗ ಕಾಣಿಸಿಕೊಂಡ ನಂತರ ಪ್ರಸ್ತುತ ಸ್ಥಳೀಯ ಮಾರುಕಟ್ಟೆಗೆ 500ರಿಂದ ಸಾವಿರ ಕೇಜಿ ಏಲಕ್ಕಿ ಬರುತ್ತಿದೆ. ಇದಲ್ಲದೇ ರಾಜ್ಯ, ರಾಷ್ಟ್ರ ಹಾಗೂ ಅಂತಾ ರಾಷ್ಟ್ರೀಯ ಏಲಕ್ಕಿ ಪೂರೈಕೆ ಮಾಡುವ ಕೇರಳದ ಒಂದನ್ ಮೇಡು ಮಾರುಕಟ್ಟೆಗೆ ಈ ಹಿಂದೆ 1.5 ಲಕ್ಷ ಕೇಜಿಯಿಂದ 2 ಲಕ್ಷ ಕೇಜಿ ವರೆಗೆ ಏಲಕ್ಕಿ ಬರುತ್ತಿದ್ದರೆ ಪ್ರಸಕ್ತ 15 ಸಾವಿರದಿಂದ 20 ಸಾವಿರ ಕೇಜಿ ಮಾತ್ರ ಬರುತ್ತಿದೆ. ಇದರಿಂದಾಗಿ ಬೇಡಿಕೆಗೆ ತಕ್ಕಂತ ಪೊರೈಕೆ ಇಲ್ಲದೇ ಇರುವುದು ಧಾರಣೆ ಏರಿಕೆಗೆ ಕಾರಣವಾಗಿದೆ. ತಾಲೂಕಿನಲ್ಲಿ ಬೆಳೆದಿರುವ ಏಲಕ್ಕಿ ಬಹುತೇಕ ಮಾರುಕಟ್ಟೆಗೆ ಬಂದಿದ್ದು ಮುಂದಿನ ದಿನಗಳಲ್ಲಿ ಏಲಕ್ಕಿ ಮಾರು ಕಟ್ಟೆಗೆ ಬರುವುದು ಕಷ್ಟಕರ ಎಂದು ಹೇಳಲಾಗುತ್ತಿದೆ.
ಬೆಳೆಗಾರರಿಗೆ ದೊರಕದ ಲಾಭ: ಏಲಕ್ಕಿಯಿಂದಲೇ ಹೆಸರು ಮಾಡಿದ್ದ ತಾಲೂಕಿನಲ್ಲಿ ಈಗ ಏಲಕ್ಕಿ ಬೆಳೆ ಯುವವರು ಅಪರೂಪವಾಗಿದೆ. ಅಲ್ಲದೇ ಏಲಕ್ಕಿ ಬೆಳೆ ಅಗಸ್ಟ್ ತಿಂಗಳಿನಿಂದ ಜನವರಿವರೆಗೆ ಮಾತ್ರ ಇದ್ದು ಜೂನ್ ತಿಂಗಳವರಗೆ ಸಂಗ್ರಹಿಸಿಡುವ ಶಕ್ತಿ ಸಹ ಬೆಳೆಗಾರರಲ್ಲಿ ಇಲ್ಲದೇ ಇರುವುದು ಧಾರಣೆ ಲಾಭ ರೈತರಿಗೆ ದೊರಕದಿರಲು ಕಾರಣವಾಗಿದೆ.
● ಸುಧೀರ್ ಎಸ್.ಎಲ್.