Advertisement

ರೈಲ್ವೆ ಪ್ರಯಾಣಿಕರಿಗೆ ದುಬಾರಿಯಾದ ಆಟೋ ಪ್ರಯಾಣ

11:10 AM Jun 15, 2019 | Suhan S |

ಗಂಗಾವತಿ: ಹುಬ್ಬಳ್ಳಿ ಮತ್ತು ಗಂಗಾವತಿ ಮಧ್ಯೆ ರೈಲು ಸಂಚಾರ ಆರಂಭವಾಗಿದ್ದು, ನಿತ್ಯ ಸಾವಿರಾರು ಜನ ರೈಲು ಪ್ರಯಾಣ ಮಾಡುತ್ತಿದ್ದಾರೆ. ನಗರದ ಹೊರ ವಲಯದಲ್ಲಿರುವ ರೈಲು ನಿಲ್ದಾಣಕ್ಕೆ ಪ್ರಯಾಣಿಕರು ತೆರಳು ಈಶಾನ್ಯ ಸಾರಿಗೆ ಸಂಸ್ಥೆ ಸಿಟಿ ಬಸ್‌ ವ್ಯವಸ್ಥೆ ಮಾಡದೇ ಇರುವ ಕಾರಣ ಪ್ರಯಾಣಿಕರು ಆಟೋದವರಿಗೆ ಅಧಿಕ ಹಣ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ಬಹು ವರ್ಷಗಳ ಬೇಡಿಕೆಯ ರೈಲು ಸಂಚಾರ ಗಂಗಾವತಿಯಿಂದ ಹುಬ್ಬಳ್ಳಿಗೆ ಪ್ರತಿದಿನ ಬೆಳಗ್ಗೆ 5:40ಕ್ಕೆ ಹಾಗೂ ಮಧ್ಯಾಹ್ನ 2:30ಕ್ಕೆ. ಹುಬ್ಬಳ್ಳಿಯಿಂದ ಗಂಗಾವತಿಗೆ ಬೆಳಗ್ಗೆ 10ಕ್ಕೆ, ಸಂಜೆ 5:10ಕ್ಕೆ ರೈಲು ಸಂಚಾರ ಆರಂಭವಾಗಿದೆ. ಸಾಮಾನ್ಯ ರೈಲಿಗೆ 35 ರೂ., ಎಕ್ಸಪ್ರಸ್‌ ರೈಲಿಗೆ 70 ರೂ. ಪ್ರಯಾಣ ದರ ನಿಗದಿಯಾಗಿದ್ದು ಪ್ರತಿ ದಿನ ಸಾವಿರಾರು ಜನ ಗದಗ, ಕೊಪ್ಪಳ ಮತ್ತು ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದಾರೆ.

ಸಿಟಿಬಸ್‌ ವ್ಯವಸ್ಥೆ ಇಲ್ಲ: ವಿಶೇಷ ವೇಳೆಯಲ್ಲಿ ನಗರದ ವಿವಿಧ ಭಾಗದಿಂದ ರೈಲ್ವೆ ನಿಲ್ದಾಣಕ್ಕೆ ಸಿಟಿ ಬಸ್‌ ಸಂಚಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ ಅವರು ರೈಲ್ವೆ ಆರಂಭದ ದಿನ ಭರವಸೆ ನೀಡಿದ್ದರು. ಆದರೆ ಇನ್ನೂ ಸಿಟಿ ಬಸ್‌ ಸಂಚಾರ ಆರಂಭವಾಗಿಲ್ಲ. ನಗರದಿಂದ ಸುಮಾರು ಎರಡರಿಂದ ಮೂರು ಕಿ.ಮೀ.ದೂರ ಇರುವುದರಿಂದ ಆಟೋದವರು ಪ್ರಯಾಣಿಕರಿಂದ 50ರಿಂದ 100 ರೂ. ವರೆಗೆ ಹಣ ಪಡೆಯುತ್ತಿದ್ದಾರೆ. ಕೂಡಲೇ ಶಾಸಕ ಪರಣ್ಣ ಮುನವಳ್ಳಿ ಮುತುವರ್ಜಿ ವಹಿಸಿ ರೈಲ್ವೆ ನಿಲ್ದಾಣದಿಂದ ವಡ್ಡರಹಟ್ಟಿ, ಸಂಗಾಪೂರ, ಜಯನಗರ, ಹೊಸಳ್ಳಿ, ಹೇರೂರು ಗ್ರಾಮಗಳಿಂದ ರೈಲ್ವೆ ಸಮಯಕ್ಕೆ ಸರಿಯಾಗಿ ಸಿಟಿ ಬಸ್‌ ಸಂಚಾರದ ವ್ಯವಸ್ಥೆ ಮಾಡಬೇಕಿದೆ. ಇಲ್ಲದಿದ್ದರೆ ಹುಬ್ಬಳ್ಳಿಯಿಂದ ಕೇವಲ 35 ಮತ್ತು 70 ರೂ.ಗಳಲ್ಲಿ ಗಂಗಾವತಿಗೆ ಆಗಮಿಸುವ ಜನರು ಮನೆ ಸೇರಲು ನೂರಾರು ರೂ. ಖರ್ಚು ಮಾಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next