Advertisement

ಗುಜರಾತ್‌ : ಶಾಸಕತ್ವಕ್ಕೆ ರಾಜೀನಾಮೆ ನೀಡಿದ 7 ಕೈ ಶಾಸಕರು

03:09 PM Aug 11, 2017 | udayavani editorial |

ಅಹ್ಮದಾಬಾದ್‌ : ಗುಜರಾತ್‌ ನಲ್ಲಿ ಈಚೆಗೆ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ  ಪಕ್ಷದ ಅಭ್ಯರ್ಥಿ ಅಹ್ಮದ್‌ ಪಟೇಲ್‌ ವಿರುದ್ಧ ಮತ ಹಾಕಿದ್ದ  ಏಳು ಮಂದಿ ಕಾಂಗ್ರೆಸ್‌ ಶಾಸಕರು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವಿಧಾನಸಭಾ ಸ್ಪೀಕರ್‌ ರಮಣ್‌ಲಾಲ್‌ ವೋರಾ ಹೇಳಿದ್ದಾರೆ.  ಈ ಏಳೂ ಮಂದಿ ಶಾಸಕರು ಈಗಿನ್ನು ಬಿಜೆಪಿಗೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

Advertisement

ಮಾಜಿ ವಿಪಕ್ಷ ನಾಯಕ ಶಂಕರ್‌ಸಿಂಗ್‌ ವಘೇಲಾ ಮತ್ತು ಇತರ ಏಳು ಮಂದಿ ಕಾಂಗ್ರೆಸ್‌ ಶಾಸಕರು ಆ.8ರ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಕಾರಣಕ್ಕೆ ಪಕ್ಷ ಅವರನ್ನು ಆ.9ರಂದು ಪಕ್ಷದಿಂದ ಉಚ್ಚಾಟಿಸಿತ್ತು. 

“ನಿನ್ನೆ ಗುರುವಾರ ರಾತ್ರಿ ಏಳು ಮಂದಿ ಶಾಸಕರು ನನ್ನ ನಿವಾಸಕ್ಕೆ ಬಂದು ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು’ ಎಂದು ವೋರಾ ತಿಳಿಸಿದ್ದಾರೆ. 

ಇಬ್ಬರು ಬಂಡುಕೋರ ಶಾಸಕರಾದ ರಾಘವಜೀ ಪಟೇಲ್‌ ಮತ್ತು ಭೋಲಾಭಾಯಿ ಗೊಹೇಲ್‌ ಅವರ ಮತಗಳನ್ನು ಅಸಿಂಧು ಮಾಡಲಾಗಿತು. ಇವರು ಕೂಡ ಕಾಂಗ್ರೆಸ್‌ ಪಕ್ಷಕ್ಕೆ ತಮ್ಮ ರಾಜೀನಾಮೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next