Advertisement
ಮಾರ್ಚ್ 8ರಂದು ಮುಖ್ಯ ಮಂತ್ರಿ ಯಡಿಯೂರಪ್ಪ ಮಂಡಿಸುವ ಬಜೆಟ್‌ನಲ್ಲಿ ಹನೂರು ತಾಲೂಕು ಜನತೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ರಾಜ್ಯದ ದಕ್ಷಿಣ ತುದಿಯ ಕಟ್ಟಕಡೆಯ ತಾಲೂಕಾ ಗಿರುವ ಹನೂರು ತಾಲೂಕು ಗುಡ್ಡಗಾಡು ಪ್ರದೇಶ, 80ಕ್ಕೂ ಹೆಚ್ಚು ಆದಿವಾಸಿ ಸೋಲಿಗರ ಪೋಡಿನಿಂದ ಕೂಡಿರುವ ವಿಶಿಷ್ಠವಾದ ತಾಲೂಕಾಗಿದೆ. ಆದರೆ, ಹನೂರು ತಾಲೂಕು ಕೇಂದ್ರವಾಗಿ ಘೋಷಣೆ ಯಾಗಿ 3 ವರ್ಷ ಕಳೆದಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನದ ಲಭ್ಯವಾಗಿಲ್ಲ ಮತ್ತು ಅಭಿವೃದ್ಧಿ ಕೂಡೂ ಆಗಿಲ್ಲ ಎಂಬ ಮಾತುಗಳಿವೆ.
Related Articles
Advertisement
ಹಳೇ ಮೈಸೂರು ಭಾಗದ ಆರಾಧ್ಯ ದೈವ ಮಲೆ ಮಹದೇಶ್ವರನ ಪುಣ್ಯಕ್ಷೇತ್ರವು ಹನೂರು ತಾಲೂಕಿಗೆ ಒಳಪಟ್ಟಿದ್ದು ಹನೂರು ತಾಲೂಕು ಕೇಂದ್ರದಿಂದ ಸುಮಾರು 47 ಕಿ.ಮೀ. ಅಂತರವಿದೆ. ಈ ಪುಣ್ಯಕ್ಷೇತ್ರಕ್ಕೆ ದೈನಂದಿನವಾಗಿ 15-20 ಸಾವಿರ ಭಕ್ತಾದಿಗಳು, ಅಮಾವಾಸ್ಯೆ, ವಿಶೇಷ ದಿನ ಮತ್ತು ಜಾತ್ರಾ ಮಹೋತ್ಸವದ ಸಂದರ್ಭಗಳಲ್ಲಿ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡುತ್ತಾರೆ. ಆದರೆ, ಶ್ರೀ ಕ್ಷೇತ್ರಕ್ಕೆ ಸಮರ್ಪಕವಾದ ರಸ್ತೆ ಸೌಕರ್ಯವಿಲ್ಲ. ಇದೀಗ ಕೊಳ್ಳೇಗಾಲ-ಹನೂರು ಮಾರ್ಗದ 22 ಕಿ.ಮೀ. ರಸ್ತೆಯು 118 ಕೋಟಿ ವೆಚ್ಚದಲ್ಲಿ ಕೆ-ಶಿಪ್ ಯೋಜನೆಯಡಿ ಅಭಿವೃದ್ಧಿಯಾಗುತ್ತಿದೆ. ಇನ್ನು ಹನೂರಿನಿಂದ ಮಲೆ ಮಹದೇಶ್ವ
ಆಸ್ಪತ್ರೆ ಮೇಲ್ದರ್ಜೆಗೇರಬೇಕಿದೆ
ಹನೂರು ತಾಲೂಕಿನಲ್ಲಿ ಇಂದಿನವರೆಗೂ ಪ್ರಾಥಮಿಕ ಆರೋಗ್ಯ ಕೇಂದ್ರವೇ ಕಾರ್ಯನಿರ್ವಹಿಸುತ್ತಿದ್ದು, ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕಿದೆ. ತಾಲೂಕು ಕೇಂದ್ರವಾಗಿದ್ದರೂ ಸಮರ್ಪಕ ಆರೋಗ್ಯ ಸೇವೆ ದೊರಕದ ಹಿನ್ನೆಲೆ ಈ ಭಾಗದ ಜನರು ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆ ಅಥವಾ ಮೈಸೂರಿನ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಇನ್ನು ಗಡಿಯಂಚಿನ ಕೆಲ ಗ್ರಾಮಸ್ಥರು ತಮ್ಮ ಆರೋಗ್ಯ ಸೇವೆಗಾಗಿ ನೆರೆಯ ತಮಿಳುನಾಡಿನ ಮೆಟ್ಟೂರು, ಸೇಲಂ ಅಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಈ ಹಿನ್ನೆಲೆ ಹನೂರು ಪಟ್ಟಣದ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಬೇಕು ಎಂಬ ಕೂಗು ಕೇಳಿಬರುತ್ತಿದ್ದು ಈ ಬಜೆಟ್‌ನಲ್ಲಿ ವಿಶೇಷ ಅನುದಾನ ದೊರೆಯಬಹುದೆಂಬ ನಿರೀಕ್ಷೆಯಿದೆ.
ವಿನೋದ್ ಎನ್. ಗೌಡ