ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಣ ನಿಟ್ಟಿನಲ್ಲಿ ಆರ್‌ಬಿಐ ಮತ್ತೆ ಬಡ್ಡಿ ದರ ಏರಿಸುವ ಸಾಧ್ಯತೆಗಳು ಇವೆ.
ಈ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮುನ್ಸೂಚನೆ ನೀಡಿದ್ದಾರೆ.
ಜೂ.6ರಿಂದ8ರ ವರೆಗೆ ನಡೆಯುವ ವಿತ್ತೀಯ ನೀತಿ ಪರಿಶೀಲನಾ ಸಭೆಯಲ್ಲಿ ಬಡ್ಡಿದರ ಇನ್ನೂ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.
ಇದರ ಜತೆಗೆ ಹಣದುಬ್ಬರ ತಡೆಗೆ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಹಲವು ತಿಂಗಳುಗಳಿಂದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಾ ಇವೆ. ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಮತ್ತೊಮ್ಮೆ ಜತೆಯಾಗಿ ಕೆಲಸ ಮಾಡುವ ಪ್ರಮುಖ ಘಟ್ಟದಲ್ಲಿವೆ.
2-3 ತಿಂಗಳ ಅವಧಿಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ತೈಲೋತ್ಪನ್ನಗಳ ದರ ಇಳಿಕೆಗೆ, ಗೋಧಿ ಸೇರಿದಂತೆ ಇತರ ಹಲವು ಅಗತ್ಯ ವಸ್ತುಗಳ ರಫ್ತಿನ ಮೇಲೆ ನಿಷೇಧ ಸೇರಿದಂತೆ ದರ ಸ್ಥಿರಗೊಳ್ಳಲು ಕ್ರಮ ಕೈಗೊಂಡಿದೆ ಎಂದೂ ದಾಸ್ ಹೇಳಿದ್ದಾರೆ.