Advertisement

ಉನ್ನತ ಶಿಕ್ಷಣ ಕ್ಷೇತ್ರದ ನಿರೀಕ್ಷೆ ಹುಸಿ 

08:15 AM Feb 17, 2018 | Team Udayavani |

ವಿದೇಶಿ ವಿದ್ಯಾರ್ಥಿಗಳು ಕರ್ನಾಟಕ ಸೇರಿದಂತೆ ಭಾರತದ ವಿಶ್ವವಿದ್ಯಾಲಯಕ್ಕೆ ಬರುವಂತಹ ಶೈಕ್ಷಣಿಕ ಗುಣಮಟ್ಟ ಮತ್ತು ವಾತಾವರಣವನ್ನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಬೇಕು. ಇಂತಹ ಕ್ರಮಕ್ಕೆ ಪೂರಕವಾದ ಅನುದಾನ ಮತ್ತು ಕಾರ್ಯಯೋಜನೆಯನ್ನು ಬಜೆಟ್‌ನಲ್ಲಿ ಮೀಸಲಿಡಬೇಕಿತ್ತು. ಇದೊಂದು ವಾರ್ಷಿಕ ಬಜೆಟ್‌ ಅಷ್ಟೇ, ಉನ್ನತ ಶಿಕ್ಷಣ ಕ್ಷೇತ್ರದ ನಿರೀಕ್ಷೆಯನ್ನು ಹುಸಿ ಮಾಡಿದೆ.
ವಿಶ್ವವಿದ್ಯಾಯದ ಕುಲಪತಿಗಳ ನೇಮಕಾತಿ ಸಂಬಂಧ ಬಜೆಟ್‌ನಲ್ಲಿ ಪ್ರಸ್ತಾಪಿಸಿಯೂ ಇಲ್ಲ.

Advertisement

ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಇನ್ನಷ್ಟು ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ. ರಾಜ್ಯ ವಿಶ್ವವಿದ್ಯಾಲಯದಲ್ಲಿ ಹೊಸ ಸಂಶೋಧನೆಗೆ ಉತ್ತೇಜನ ನೀಡುವ ಒಂದೆರೆಡು ಯೋಜನೆಗಳನ್ನಾದರೂ ಘೋಷಣೆ ಮಾಡಬೇಕಿತ್ತು. ವಿವಿಯಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು ತೆರೆಯುವ ಬಗ್ಗೆಯೂ ಉಲ್ಲೇಖೀಸಿಲ್ಲ. ಮೈಸೂರು ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಕೇಂದ್ರ, ಚಿಕ್ಕಮಗಳೂರಿನಲ್ಲಿ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರ ಹಾಗೂ ಜಮಖಂಡಿಯಲ್ಲಿ ರಾಣಿಚೆನ್ನಮ್ಮ ವಿವಿ ಸ್ನಾತಕೋತ್ತರ ಕೇಂದ್ರ, ಧಾರವಾಡ ವಿವಿಯಲ್ಲಿ ಕೊಂಕಣಿ ಅಧ್ಯಯನ ಕೇಂದ್ರ ನಿರ್ಮಾಣದ ಕ್ರಮ ಚೆನ್ನಾಗಿದೆ. ಪದವಿ ಪಡೆಯುವ ಹೆಣ್ಣು ಮಕ್ಕಳ ಶುಲ್ಕ ವಿನಾಯ್ತಿ ಯೋಜನೆ ಉತ್ತಮವಾಗಿದೆ. ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟಿರುವ 4,514 ಕೋಟಿ ರೂ.ಗಳನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.

ಡಾ.ಎನ್‌.ಆರ್‌.ಶೆಟ್ಟಿ ವಿಶ್ರಾಂತ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next