Advertisement
ಚುನಾವಣೋತ್ತರ ಸಮೀಕ್ಷೆ ನಡೆಸಿದ ಬಹುತೇಕ ಎಲ್ಲ ಸಂಸ್ಥೆಗಳು ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (ಮಹಾಯುತಿ) ಮೇಲೆ ಮತ್ತೊಮ್ಮೆ ಮತದಾರ ಒಲವು ತೋರಿದ್ದಾನೆ ಎಂದರೆ ಮತ್ತೊಂದು ರಾಜ್ಯ ಜಾರ್ಖಂಡ್‌ನಲ್ಲೂ ಕಾಂಗ್ರೆಸ್-ಜೆಎಂಎಂ ಮೈತ್ರಿ ಸೋಲಿಸಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಏರಲಿದೆ ಎಂದು ಮತದಾನೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ.
* ಮತದಾನೋತ್ತರ ಸಮೀಕ್ಷೆ ನಡೆಸಿದ ಪಿ-ಮಾರ್ಕ್ ಪ್ರಕಾರ, ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟವು 137 ರಿಂದ 157 ಸ್ಥಾನಗಳ ಗೆಲ್ಲುತ್ತದೆ ಎಂದು ಅಂದಾಜಿಸಿದೆ. ಆದರೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 126 ರಿಂದ 146 ಸ್ಥಾನಗಳ ಗಳಿಸುವ ನಿರೀಕ್ಷೆಯಿದೆ. ಇತರರು 2 ರಿಂದ 8 ಸ್ಥಾನಗಳ ಪಡೆಯಬಹುದು ಎಂದಿದೆ. * ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡಿದ್ದು, 150 ರಿಂದ 170 ಸ್ಥಾನಗಳ ಗೆಲ್ಲುತ್ತದೆ ಎಂದರೆ, ಕಾಂಗ್ರೆಸ್ ನೇತೃತ್ವದ ಒಕ್ಕೂಟವು 110 ರಿಂದ 130 ಸ್ಥಾನಗಳ ಪಡೆಯುತ್ತದೆ ಮತ್ತು ಇತರರು 8 ರಿಂದ 10 ಸ್ಥಾನಗಳನ್ನು ಗಳಿಸುತ್ತಾರೆ ಎಂದು ಹೇಳಿದೆ.
Related Articles
Advertisement
ಜಾರ್ಖಂಡ್ ನಲ್ಲಿ ಎನ್ ಡಿಎ- ಜೆಎಂಎಂ ಮೈತ್ರಿ ಭಾರಿ ಪೈಪೋಟಿ?* ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ, ಪ್ರಮುಖ ರಾಜಕೀಯ ಪಕ್ಷಗಳ ನಡುವೆ ತೀವ್ರ ಸ್ಪರ್ಧೆ ಇದ್ದರೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 42 ರಿಂದ 48 ಸ್ಥಾನ ಗಳಿಸುವ ನಿರೀಕ್ಷೆಯಿದೆ. ಆದರೆ ಎಜೆಎಸ್‌ಯು 2 ರಿಂದ 5 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಮತ್ತೊಂದೆಡೆ, ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ 16 ರಿಂದ 23 ಸ್ಥಾನಗಳ ಗಳಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ 8 ರಿಂದ 14 ಸ್ಥಾನಗಳ ಗೆಲ್ಲುವ ನಿರೀಕ್ಷೆಯಿದೆ. *ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್ ಮೈತ್ರಿಯು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ಹೇಳಿದೆ. ಜೆಎಂಎಂ -ಕಾಂಗ್ರೆಸ್ 53 ಸ್ಥಾನಗಳ ಪಡೆಯಬಹುದು ಎಂದರೆ, ಎನ್‌ಡಿಎಗೆ 25 ಸ್ಥಾನಗಳಷ್ಟೇ ಗಳಿಸಬಹುದು ಎಂದಿದೆ. ಜಾರ್ಖಂಡ್ ನಲ್ಲಿ 81 ಕ್ಷೇತ್ರಗಳ ಪೈಕಿ ಬಹುಮತ ಪಡೆಯಲು 41 ಸ್ಥಾನ ಪಡೆಯಬೇಕು.