Advertisement
ಪ್ರಸ್ತುತ ಭಂಡಾರಿಬೆಟ್ಟುವಿನಲ್ಲಿ ಪಂಪಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಭಂಡಾರಿಬೆಟ್ಟುವಿನಲ್ಲಿ 1 ಬೋಟ್,ಪುತ್ತಿಗೆ ಸೇತುವೆ ಬಳಿ 3 ಬೋಟ್, ಭಂಡಾರಿಬೆಟ್ಟು-ಪುತ್ತಿಗೆ ನಡುವೆ 2 ಬೋಟ್ ಸಹಿತ ಒಟ್ಟು 6 ಬೋಟ್‌ಗಳಲ್ಲಿ ಪಂಪ್ ಅಳವಡಿಸಿ ನೀರೆತ್ತುವ ಕೆಲಸ ನಡೆಯುತ್ತಿದೆ.
Related Articles
Advertisement
ಪುತ್ತಿಗೆ ಸೇತುವೆ ಮೇಲ್ಭಾಗದಲ್ಲಿ 2ದಿನಗಳಿಗಾಗುವಷ್ಟು ನೀರಿದೆ. ಪುತ್ತಿಗೆಸೇತುವೆ ಕೆಳಭಾಗ ಹಾಗೂ ಪುತ್ತಿಗೆಮಠದ ಬಳಿ 8ರಿಂದ 10 ದಿನಗಳಿಗೆ ಸಾಕಾಗುವಷ್ಟು ನೀರು ಲಭ್ಯವಿದೆ. ದಿನಕ್ಕೆ 10 ಗಂಟೆಯಷ್ಟು ಕಾಲ ನೀರು ತೆಗೆದರೆ 15 ದಿನಗಳಿಗೆ ನೀರು ಸಾಕಾಗಬಹುದು. 20 ಗಂಟೆಗಳ ಕಾಲ ನೀರು ತೆಗೆಯಲು ಆರಂಭಿಸಿದರೆ 5-6 ದಿನಗಳಿಗಾಗುವಷ್ಟು ಮಾತ್ರ ನೀರು ಲಭ್ಯವಿದೆ.
10 ಎಂಎಲ್ಡಿ ನೀರು ಪೂರೈಕೆ
ನೀರಿನ ಲಭ್ಯತೆಗೆ ಅನುಗುಣವಾಗಿ ನಗರಸಭೆಯು ಆಯ್ದ ವಾರ್ಡ್‌ಗಳಿಗೆ ನೀರು ಪೂರೈಸುವ ಕೆಲಸ ಮಾಡುತ್ತಿದೆ. ನಗರಕ್ಕೆ 24 ಎಂಎಲ್ಡಿ ನೀರು ಆವಶ್ಯಕತೆಯಿದ್ದು, ಪ್ರಸ್ತುತ 10 ಎಂಎಲ್ಡಿಗಳಷ್ಟು ಪೂರೈಕೆ ಮಾಡಲಾಗುತ್ತಿದೆ. ನೀರಿನ ಮಟ್ಟ 1.80 ಮೀ. ಇದೆ.
ಹೂಳೆತ್ತಲು ಯೋಜನೆ
ಸ್ವರ್ಣಾ ನದಿಯ ಸುಮಾರು 7 ಕಿ.ಮೀ. ಉದ್ದದ ನದಿ ಪಾತ್ರದಿಂದ ಹೂಳೆತ್ತಲು ಯೋಜನೆ ರೂಪಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಒಪ್ಪಿಗೆ ಸಿಕ್ಕಿದ ತತ್‌ಕ್ಷಣ ಹೂಳೆತ್ತುವ ಕಾಮಗಾರಿ ಆರಂಭಗೊಳ್ಳಲಿದೆ. ಮಳೆ ಸುರಿದರೂ ಹೂಳೆತ್ತಲು ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.