Advertisement

ಆಫೀಸ್‌ನಲ್ಲೇ ಮಾಡಿ ವ್ಯಾಯಾಮ..

10:26 PM Aug 19, 2019 | mahesh |

ತಂತ್ರಜ್ಞಾನಗಳ ಬಳಕೆಯೂ ವ್ಯಕ್ತಿಗಳಲ್ಲಿ ಶಾರೀರಿಕ ವ್ಯಾಯಾಮ ಇಲ್ಲದಂತೆ ಮಾಡಿದೆ. ಹಿಂದೆ ಬೆವರು ಹರಿಸಿ ಕೆಲಸ ಮಾಡುತ್ತಿದ್ದ ಜನರು ಇಂದು ಎಸಿ. ರೂಮ್‌ನಲ್ಲಿ ಕುಳಿತಲ್ಲೇ 7 ರಿಂದ 8 ಗಂಟೆ ಕದಲದೆ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದು ಆ ಮೂಲಕ, ತೂಕ ಹೆಚ್ಚಳ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಂತಹ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಕೆಲಸದ ಮಧ್ಯೆ ಮಧ್ಯೆ ಕೆಲ ವ್ಯಾಯಾಮಗಳ ಅಭ್ಯಾಸ ರೂಢಿಸಿಕೊಳ್ಳುವುದು ಅಗತ್ಯ ಮತ್ತು ಆರೋಗ್ಯಕರ ಜೀವನ ನಡೆಸಲು ಸಾಧ್ಯ

Advertisement

ಕ್ಯಾಬಿನ್‌ ವ್ಯಾಯಾಮ
ಕ್ಯಾಬಿನ್‌ನೊಳಗೆ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕುಳಿತಲ್ಲೆ ಮಾಡುವ ಒಂದಿಷ್ಟು ವ್ಯಾಯಾಮಗಳನ್ನು ಕಲಿತುಕೊಂಡು ಸಮಯ ಸಿಕ್ಕಾಗ ಅಭ್ಯಾಸ ಮಾಡುವುದು ಒಳ್ಳೆಯದು. ಸದಾ ಕುಳಿತೇ ಕೆಲಸ ಮಾಡುವ ಬದಲು ಮಧ್ಯೆ ಮಧ್ಯೆ ನಿಲ್ಲುವ ಹಾಗೂ ನಿಂತು ಮಾಡಬಹುದಾದ ಕಾರ್ಯಗಳನ್ನು ಮಾಡಿ.

ಆರ್ಮ್ ಪಲ್ಸ್‌
ಸುಲಭವಾಗಿ ಕೈಗೊಳ್ಳಬಹುದಾದ ವ್ಯಾಯಾಮಗಳ ಪೈಕಿ ಆರ್ಮ್ ಪಲ್ಸ್‌ ವ್ಯಾಯಾಮ ಕೂಡ ಒಂದು. ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಎದ್ದು ನಿಂತು ಭುಜದ ವ್ಯಾಯಾಮ ಮಾಡಬಹುದು.

ನೆಕ್ಕ್ ರೋಲ್‌, ಶೋಲ್ಡರ್‌ ರೋಲ್‌
ನೆಕ್ಕ್ ರೋಲ್‌ ವ್ಯಾಯಾಮ ಒಮ್ಮೆ ಬಲ ಭಾಗಗಳಿಗೆ ನಿಧಾನವಾಗಿ ಮತ್ತೆ ಎಡ ಭಾಗಕ್ಕೆ ನಿಧಾನವಾಗಿ ತಲೆಯನ್ನು ರೊಲ್‌ ಮಾಡಿ ರಿಲಾಕ್ಸ್‌ ಮಾಡುವುದಾಗಿದೆ. ಭುಜವನ್ನು ಮೇಲ್ಮುಖವಾಗಿ ಕಿವಿಗೆ ತಾಗುವಂತೆ ಮತ್ತೆ ಹಿಮ್ಮುಖವಾಗಿ ಹಾಗೆ ಕೆಳಮುಖವಾಗಿ ಭುಜವನ್ನು

ಕೈಪ್‌ ರೇಜ್‌
ನಿಮ್ಮ ಚೇರ್‌ ಹಿಂಬದಿಲ್ಲಿ ನಿಂತು ಚೇರ್‌ ಸಹಾಯ ಪಡೆದು ಕಾಲಬೆರಳಲ್ಲಿ ನಿಲ್ಲುವ ರೀತಿಯಲ್ಲಿ ಮೇಲಾºಗವಾಗಿ ಮತ್ತು ಯಥಾಸ್ಥಿತಿ ಹೀಗೆ 5/6 ಬಾರಿ ಮಾಡುವ ವಿಧಾನವಾಗಿದೆ.

Advertisement

ಡೆಸ್ಕ್ ಪುಶ್‌ ಆಪ್‌, ವಾಲ್‌ ಪುಶ್‌ ಆಪ್‌
ಡೆಸ್ಕ್ ಟೇಬಲ್‌ ಬಳಸಿ ಮಾಡಬಹುದಾದ ವ್ಯಾಯಾಮ. ಮುಖ್ಯವಾಗಿ ಈ ಟೇಬಲ್‌ ನಿಮ್ಮ ದೇಹದ ತೂಕ ಕ್ಕೆ ಹೊಂದಿಕೊಳ್ಳುತ್ತದೆ ಎಂಬುವುದನ್ನು ಪರಿಶೀಲಿಸಿಕೊಳ್ಳಿ. ಟೇಬಲ್‌ನಿಂದ ಸ್ವಲ್ಪ ಹಿಂದಕ್ಕೆ ಸರಿದು ಅನಂತರ ಎರಡು ಕೈಗಳನ್ನು ಟೇಬಲ್‌ನಲ್ಲಿ ಚಾಚಿ ಪುಶ್‌ ಅಪ್‌ ಮಾದರಿಯಲ್ಲಿ ಕೆಳಮುಖ ಮತ್ತೆ ಕೈಗಳನ್ನು ನೇರ ಮಾಡುವ ವ್ಯಾಯಾಮ ಇದಾಗಿದೆ.

ಗೋಡೆಯನ್ನು ಬಳಸಿ ಕೈಗಳನ್ನು ಸ್ವಲ್ಪ ವಿಸ್ತಾರವಾಗಿ ಗೋಡೆಯ ಸಹಾಯದ ಮೂಲಕ ಪುಶ್‌ ಅಪ್‌ ಮಾದರಿಯಲ್ಲಿ ಮತ್ತೆ ಯಥಾಸ್ಥಿತಿಗೆ ಬರುವಂತೆ ನೋಡಿಕೊಳ್ಳಬೇಕು.

-   ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next