Advertisement

ಬ್ರೇಕ್‌ಫಾಸ್ಟ್‌ಗೂ ಮುನ್ನ ವ್ಯಾಯಾಮ

11:13 PM Jan 13, 2020 | mahesh |

ದೇಹದ ತೂಕ ಕಡಿಮೆ ಮಾಡಿಕೊಳ್ಳಬಯಸುವವರು ಬೆಳಗ್ಗೆ ಉಪಹಾರಕ್ಕೆ ಮೊದಲು ಕೆಲವು ವ್ಯಾಯಾಮ ಮಾಡುವುದರಿಂದ ಫಿಟ್‌ನೆಸ್‌ ಕಾಯ್ದುಕೊಳ್ಳಬಹುದಾಗಿದೆ. ಆರೋಗ್ಯ ಎನ್ನುವುದು ಎಲ್ಲರಿಗೂ ಮುಖ್ಯ ಅದರಲ್ಲೂ ಫಿಟ್‌ನೆಸ್‌ ಕಾಯ್ದುಕೊಳ್ಳುವುದು ಇನ್ನೂ ಮುಖ್ಯ. ಮೂಳೆಗಳು ಬಲಿಷ್ಠವಾಗಿ, ಒಳ್ಳೆಯ ಮೈಕಟ್ಟು ಹೊಂದಲು ಜನರು ಬೇರೆ ಬೇರೆ ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಬೆಳಗ್ಗೆ ಎದ್ದ ಕೂಡಲೇ ಸ್ವಲ್ಪ ಬಿಸಿ ನೀರನ್ನು ಕುಡಿದು ನೆನೆಸಿಟ್ಟ ಬಾದಾಮಿ ತಿಂದು ವ್ಯಾಯಾಮ ಶುರು ಮಾಡಿದಲ್ಲಿ ಉತ್ತಮ ಬದಲಾವಣೆ ಕಾಣಬಹುದು.

Advertisement

ನಿಮ್ಮ ಅನುಕೂಲಕ್ಕೆ ತಕ್ಕನಾಗಿ ವ್ಯಾಯಾಮ ಮಾಡುವವರೂ ಕೆಲವು ವ್ಯಾಯಾಮ ಸೂತ್ರ ಅನುಸರಿಸಬೇಕಾಗುತ್ತದೆ. ಬೆಳಗ್ಗಿನ ಹೊತ್ತಿನಲ್ಲಿ ಬ್ಯೂಸಿ ಇರುವವರು ಸಂಜೆ ಸಮಯ ಕೂಡ ವ್ಯಾಯಾಮಗಳನ್ನು ಮಾಡಬಹುದು ಆದರೆ ಬೆಳಗ್ಗಿನ ಹೊತ್ತಿನಲ್ಲಿ ಮಾಡುವ ವ್ಯಾಯಾಮದಿಂದ ಸಿಗುವಷ್ಟು ಫ‌ಲಿತಾಂಶ ದೊರಕಲಾರದಿದ್ದರೂ ಅಧಿಕ ಶಕ್ತಿ ಬಳಸಿಕೊಳ್ಳುವುದಿಂದ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ.

ರಕ್ತದೊತ್ತಡ ನಿವಾರಣೆ
ಏರೋಬಿಕ್ಸ್‌, ಜಾಗಿಂಗ್‌, ವಾಕಿಂಗ್‌ ಇವೆಲ್ಲವೂ ನೀವು ಉಪಹಾರಕ್ಕೆ ಮೊದಲು ಮಾಡಬೇಕಾದ ವ್ಯಾಯಾಮಗಳಾಗಿದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸಿ, ಸಮತೋಲನಕ್ಕೆ ತರುತ್ತದೆ.

ಒತ್ತಡ ನಿವಾರಣೆ
ಬೆಳಗ್ಗಿನ ಹೊತ್ತಿನಲ್ಲಿ ಮಾಡುವ ವ್ಯಾಯಾಮ ನಿಮಗೆ ವಿಶೇಷ ಚೈತನ್ಯ ನೀಡಿ ದಿನವಿಡಿ ಉಲ್ಲಾಸವಾಗಿರಲು ಸಹಾಯ ಮಾಡುತ್ತದೆ. ದಿನಕ್ಕೆ ಬೇಕಾದ ಅಗತ್ಯ ಶಕ್ತಿಯನ್ನು ನೀಡಿ ನಿಮ್ಮ ಒತ್ತಡವನ್ನು ನಿವಾರಿಸಿ ರಾತ್ರಿ ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ಅಲ್ಲದೆ ಇದು ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಸಿ ಮೆದುಳಿನ ರಕ್ತ ಹರಿವನ್ನು ಸಮತೋಲನದಲ್ಲಿಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಳ
ಹಗುರವಾದ ವ್ಯಾಯಾಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ. ಯಾವುದೇ ರೀತಿಯ ಸೊಂಕುಗಳು ನಿಮ್ಮನ್ನು ಆವರಿಸದಂತೆ ರಕ್ಷಿಸಿ ನಿಮ್ಮನ್ನು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

Advertisement

ತೂಕ ಕಡಿಮೆಯಾಗುತ್ತದೆ
ಖಾಲಿ ಹೊಟ್ಟೆಯಲ್ಲಿ ಮಾಡುವ ವ್ಯಾಯಾಮ ದೇಹದ ಕೊಬ್ಬು ಕರಗಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಹಾರ್ಮೋನ್‌ ಬದಲಾವಣೆಯಿಂದ ಹೆಚ್ಚು ಕೊಬ್ಬು ಬರ್ನ್ ಆಗಿ ಅನಾವಶ್ಯಕ ಕೊಬ್ಬು ಸಂಗ್ರಹವಾಗಿರುವುದು ಕರಗುತ್ತದೆ. ನೀವು ವ್ಯಾಯಾಮ ಮಾಡಿದ ಅನಂತರ ಆರೋಗ್ಯಕರ ಉಪಹಾರ ಸೇವಿಸುವು ದರಿಂದ ಫಿಟ್‌ನೆಸ್‌ ಕಾಯ್ದುಕೊಳ್ಳಲು ನೇರವಾಗುತ್ತದೆ.

– ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next