Advertisement

ಕರಕುಶಲ ಉತ್ಪನ್ನಕ್ಕೆ ವಿನಾಯ್ತಿ?

08:30 AM Jan 18, 2018 | Team Udayavani |

ಬೆಂಗಳೂರು: ಕರಕುಶಲ ಉತ್ಪನ್ನಗಳಿಗೆ ಜಿಎಸ್‌ಟಿಯಡಿ ತೆರಿಗೆ ವಿನಾಯ್ತಿ ನೀಡಬೇಕೆಂಬ ಒತ್ತಾಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗುರುವಾರ ದೆಹಲಿಯಲ್ಲಿ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಈ ವಿಷಯ ಕುರಿತು ಚರ್ಚೆ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರ ತಂಡದ ಮುಖ್ಯಸ್ಥ ಸುಶೀಲ್‌ ಮೋದಿ, ಕರಕುಶಲ ಹಾಗೂ ಕೈಯಿಂದ ತಯಾರಾದ ಉತ್ಪನ್ನಗಳ ತೆರಿಗೆ ಕುರಿತ ವಿಚಾರ ಗುರುವಾರದ ಜಿಎಸ್‌ಟಿ ಕೌನ್ಸಿಲ್‌ ಸಭೆಯ ವಿಷಯ ಸೂಚಿಯಲ್ಲಿದೆ. ಈ ಉತ್ಪನ್ನಗಳಿಗೆ ತೆರಿಗೆ ವಿನಾಯ್ತಿ
ನೀಡುವಂತೆ ಕೃಷಿ ಸಚಿವ ಕೃಷ್ಣ ಬೈರೇಗೌಡರು ಹಲವು ಬಾರಿ ಪ್ರಸ್ತಾಪಿಸಿದ್ದಾರೆ ಎಂದರು. ಇದಕ್ಕೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಅವರು ಈಚೆಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

Advertisement

ರಿಯಲ್‌ ಎಸ್ಟೇಟ್‌ ಹಾಗೂ ಮುಂದ್ರಾಂಕ ಮತ್ತು ನೋಂದಣಿ ವ್ಯವಸ್ಥೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಸಂಬಂಧ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಪ್ರಾತ್ಯಕ್ಷಿಕೆ ಮಂಡನೆಯಾಗುವ ಸಾಧ್ಯತೆಯಿದೆ. ಕಳೆದ ಕೌನ್ಸಿಲ್‌ ಸಭೆಯ ಅಜೆಂಡಾದಲ್ಲೂ ಈ ವಿಷಯವಿದ್ದರೂ ನಂತರ ಮಂಡನೆಯಾಗಿರಲಿಲ್ಲ. ಒಮ್ಮೆ ಸಭೆಯಲ್ಲಿ ಪ್ರಾತ್ಯಕ್ಷಿಕೆ ಮಂಡನೆಯಾದ ಬಳಿಕ ಚರ್ಚೆ ಆರಂಭವಾಗಲಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಸಾಕಷ್ಟು ಸಮಯಾ ವಕಾಶ ಬೇಕಾಗಬಹುದು ಎಂದು ತಿಳಿಸಿದರು. 

ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪೆಟ್ರೋಲಿಯಂ ಉತ್ಪನ್ನಗಳು ಕೂಡ ಜಿಎಸ್‌ಟಿ ವ್ಯಾಪ್ತಿಗೆ ಒಳಪಡಲಿವೆ. ಆದರೆ ಪೆಟ್ರೋಲಿಯಂ ಉತ್ಪನ್ನಗಳಿಗೆ ಜಿಎಸ್‌ಟಿ ಅನ್ವಯಿಸುವ ಬಗ್ಗೆ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಇನ್ಫೋಸಿಸ್‌ ಸೇವೆ ತೃಪ್ತಿಕರ
ಜಿಎಸ್‌ಟಿ ನೆಟ್‌ವರ್ಕ್‌ಗೆ ಇನ್ಫೋಸಿಸ್‌ ಒದಗಿಸುತ್ತಿರುವ ಸೇವೆ ತೃಪ್ತಿಕರವಾಗಿದೆ. ಜಿಎಸ್‌ ಟಿಎನ್‌ ಅಡಿ 47 ಸೇವೆಗಳನ್ನು ಒದಗಿಸಲು ಇನ್ಫೋಸಿಸ್‌ಗೆ ಸೂಚಿಸಲಾಗಿತ್ತು. ಅದರಂತೆ ಶೇ.93ರಷ್ಟು ಸೇವೆ ಒದಗಿಸಿದ್ದು, ಉಳಿದದ್ದನ್ನು ಸದ್ಯದಲ್ಲೇ ನೀಡ ಲಿದೆ. ಈವರೆಗೆ ಜಿಎಸ್‌ ಟಿಎನ್‌ ಅಡಿ 5.25 ಕೋಟಿ ಮಂದಿ ರಿಟರ್ನ್ಸ್ ಸಲ್ಲಿಸಿದ್ದಾರೆ. 154 ಕೋಟಿಗೂ ಹೆಚ್ಚು “ಇನ್‌ ವಾಯ್ಸ’ ಪ್ರಕ್ರಿಯೆ ಪೂರ್ಣಗೊಳಿಸಿದೆ. ಆಗಾಗ್ಗೆ ತಲೆದೋರುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದು, ಸಂಸ್ಥೆಯ ಸೇವೆಯಲ್ಲಿ ಸಾಕಷ್ಟು
ಸುಧಾರಣೆಯಾಗಿದೆ ಎಂದು ಸುಶೀಲ್‌ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next