ಕೆಂಭಾವಿ: ಪಟ್ಟಣದಲ್ಲಿ ದಸರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಪಟ್ಟಣದ ಮಾಲಿಗೌಡರು, ಪೊಲೀಸ್‌ಗೌಡರು, ಕುಲಕರ್ಣಿ ಹಾಗೂ ಜೋಶಿ ಮನೆತನದ ಪ್ರಮುಖರು ಸೇರಿದಂತೆ ಪಟ್ಟಣದ ಜನತೆ ಭೋಗೇಶ್ವರ ದೇವಸ್ಥಾನದಲ್ಲಿ ಬನ್ನಿ
ಮರಕ್ಕೆ ಪೂಜೆ ಸಲ್ಲಿಸಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಐತಿಹಾಸಿಕ ಜಾತ್ರೆ: ಐತಿಹಾಸಿಕ ಮಲ್ಲಯ್ಯನ ಬಂಡಿ ಉತ್ಸವ ಶನಿವಾರ ಪಟ್ಟಣದಲ್ಲಿ ಜಸಾಗರದ ಮಧ್ಯೆ ವಿಜೃಂಭಣೆಯಿಂದ ನಡೆಯಿತು. ಸಿಂಗರಿಸಿದ್ದ ರಥದಲ್ಲಿ ಕೂಡಿಸಿದ ಮಲ್ಲಯ್ಯ ದೇವರ ಬಂಡಿಯನ್ನು ಯುವಕರು ಎಳೆಯುವ ಮೂಲಕ ಉತ್ಸವಕ್ಕೆ ಮೆರಗು ನೀಡಿದರು.
ಮಲ್ಲಯ್ಯನ ಬಂಡಿ ಜಾತ್ರೆಯ ಅಂಗವಾಗಿ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾವಳಿಯನ್ನು ಪಿಎಸ್‌ಐ ಅಜೀತಕುಮಾರ, ಉದ್ಯಮಿ ಶಿವಶರಣಪ್ಪ ಸೊನ್ನದ ಹಾಗೂ ಕಾಳಪ್ಪ ಪತ್ತಾರ ಉದ್ಘಾಟಿಸಿದರು. ಕುಸ್ತಿ ಪಂದ್ಯಾವಳಿಯಲ್ಲಿ ಪಟ್ಟಣ ಸೇರಿದಂತೆ ಸುತ್ತಮತ್ತಲಿನ ಗ್ರಾಮದ ಕುಸ್ತಿ ಪಟುಗಳಲ್ಲದೇ, ಕಲಬುರಗಿ, ವಿಜಯಪುರ, ಸೋಲಾಪುರ ಜಿಲ್ಲೆಯ ನೂರಾರು ಕುಸ್ತಿಪಟುಗಳು ಭಾಗವಹಿಸಿ ಪಟ್ಟಣದ ಜನರಿಗೆ ಕುಸ್ತಿ ಪಂದ್ಯಗಳ ಸವಿರುಚಿ ಉಣ ಬಡಿಸಿದರು.
ಅರುಣೋದಯ ಸೊನ್ನದ, ಮಲಕನಗೌಡ ಪೊಲೀಸ್ ಪಾಟೀಲ, ದೇವಿಂದ್ರಪ್ಪ ಜಾಲಿಬೆಂಚಿ, ಸುಭಾಸ ಮ್ಯಾಗೇರಿ, ಚನ್ನಯ್ಯಸ್ವಾಮಿ ಚಿಕ್ಕಮಠ, ಮೋಹನರೆಡ್ಡಿ ಡಿಗ್ಗಾವಿ, ಶಿವಪುತ್ರಪ್ಪ ಸೊನ್ನದ, ಶರಣಪ್ಪ ಗುಗ್ಗರಿ, ಗುರುಮೂರ್ತಿ ಪತ್ತಾರ, ಈರಣ್ಣ ಸೊನ್ನದ, ಪ್ರಭು ಅಂಗಡಿ, ಪ್ರಕಾಶ ಸೊನ್ನದ, ರಮೇಶ ಸೊನ್ನದ, ಶರಣಪ್ಪ ನಗನೂರ, ಸಂಗಣ್ಣ ತುಂಬಗಿ, ನಾಗರಾಜ ಮಾಲಗತ್ತಿ, ಮಹಿಪಾಲರೆಡ್ಡಿ ಡಿಗ್ಗಾವಿ, ವಿಶ್ವನಾಥ ಲೋಣಿ, ಮಲ್ಲನಗೌಡ ಪಾಟೀಲ, ಮಲ್ಲು ಸೊನ್ನದ, ರೆಹಮಾನ ಪಟೇಲ ಇದ್ದರು.