Advertisement

ಯಾಚೇನಹಳ್ಳಿಯಲ್ಲಿ ಅದ್ಧೂರಿ ಕಾವೇರಿ ಸಂಭ್ರಮ

12:29 PM Aug 04, 2018 | |

ತಿ.ನರಸೀಪುರ: ಜೀವಗಂಗೆ ಕಾವೇರಿ ಮಾತೆಯನ್ನು ಪೂಜಿಸಿ ಗೌರವಿಸುವ ಕಾವೇರಿ ಸಂಭ್ರಮ ಎಂಬ ವಿಶಿಷ್ಟ ಕಾರ್ಯಕ್ರಮ ತಾಲೂಕಿನ ಯಾಚೇನಹಳ್ಳಿಯಲ್ಲಿ ಅದ್ಧೂರಿಯಾಗಿ ನಡೆಯಿತು. 

Advertisement

 ನೆರೆಯ ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿರುವ ತಾಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ಮಿನಿ  ದಸರಾ ಮಾದರಿಯಲ್ಲಿ ನಡೆದಂತಹ ಕಾವೇರಿ ಸಂಭ್ರಮದ ಪ್ರಯುಕ್ತ ಬೆಳ್ಳಿ ರಥದಲ್ಲಿ ವಿರಾಜಮಾನಳಾಗಿದ್ದ ಕಾವೇರಿ ಮಾತೆಯ ಉತ್ಸವದ ಮೆರವಣಿಗೆಗೆ ಸಾಂಸ್ಕೃತಿಕ ಕಲಾ ತಂಡಗಳು ಮೆರಗು ನೀಡಿತು. ಎತ್ತಿನ ಗಾಡಿ, ನಾಡ ಎಮ್ಮೆ, ಯಂತ್ರೋಪಕರಣಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳ ವೇಷಭೂಷಣಗಳು ಕಳೆ ತಂದಿದ್ದವು.

ಸುಲ್ತಾನ್‌ ರೋಡ್‌ ವೃತ್ತದಿಂದ ವಿದ್ಯುಕ್ತವಾಗಿ ಆರಂಭಗೊಂಡ ಕಾವೇರಿ ಪ್ರತಿಮೆ ಮೆರವಣಿಗೆಗೆ ಗ್ರಾಮದ ಶ್ರೀ ಸಿದ್ದೇಶ್ವರ ದೇವಾಲಯ ಆವರಣವನ್ನು ತಲುಪಿತು. ಪೂರ್ಣಕುಂಭ ಸೇರಿದಂತೆ ಪೂಜಾ ಕುಣಿತ, ವೀರೆಗಾಸೆ, ಮಂಗಳವಾದ್ಯ, ವೀರಮಕ್ಕಳ ಕುಣಿತ, ತಮಟೆ ವಾದನ, ಚಿಲಿಪಿಲಿ ಗೊಂಬೆ, ಡೊಳ್ಳು ಕುಣಿತ, ಪಟಕುಣಿತ, ಕೋಲಾಟ, ಮಳೆಯರ ಸೋಬಾನೆ ಪದ, ಜೋಡಿ ಎತ್ತಿನ ಮೆರವಣಿಗೆ, ಎತ್ತಿನಗಾಡಿ ಪ್ರದರ್ಶನ, ಟ್ರಾಕ್ಟರ್‌-ಕೃಷಿ ಪರಿಕರ ಪ್ರದರ್ಶನ ಹಾಗೂ ವಿವಿಧ ವೇಷಭೂಷಣಗಳ ಕಲಾಕೃತಿಗಳು ಸಾಥ್‌ ನೀಡಿದವು.

ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವರಣದಲ್ಲಿ ರಾಶಿ ಪೂಜೆ ಮಾಡಲಾಯಿತು. ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಯುವತಿಯರು ಮತ್ತು ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಉತ್ಸವದಲ್ಲಿ ಭಾಗಿಯಾಗಿದ್ದ ಕಲಾ ತಂಡಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. 

ಪಿಎಸಿಸಿಎಸ್‌ ಅಧ್ಯಕ್ಷ ವೈ.ಎನ್‌.ಶಂಕರೇಗೌಡ ಮಾತನಾಡಿ, ಐವತ್ತು ವರ್ಷಗಳ ನಂತರ ಜುಲೈನಲ್ಲೇ ನಾಡಿನ ಜೀವನದಿಗಳಾದ ಕಾವೇರಿ, ಕಪಿಲಾ ಹಾಗೂ ಹೇಮಾವತಿ ನದಿಗಳೆಲ್ಲವೂ ತುಂಬಿ ಹರಿದು ಜಲಾಶಯಗಳು ಭರ್ತಿಯಾಗಿವೆ. ಜೀವಗಂಗೆ ಕಾವೇರಿ ಮಾತೆಯನ್ನು ಪೂಜಿಸಿ, ಗೌರವಿಸಲು ಗ್ರಾಮದಲ್ಲಿ ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಾಜಣ್ಣ, ಶ್ರೀ ರಾಮಕೃಷ್ಣ ಸೇವಾಕೇಂದ್ರದ ನಾದನಂದನಾಥ ಸ್ವಾಮೀಜಿ, ನಾಡಗೌಡ, ಹನುಮಂತೇಗೌಡ, ಗ್ರಾಪಂ ಅಧ್ಯಕ್ಷೆ ಚನ್ನಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪುಟ್ಟರಾಜು, ಉಪಾಧ್ಯಕ್ಷ ಚಂದ್ರು, ಪಿಎಸಿಸಿಎಸ್‌ ನಿರ್ದೇಶಕ ವೈ.ಜಿ.ಮಹೇಂದ್ರ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next