Advertisement

“ತಾರತಮ್ಯವಿಲ್ಲದೆ ಒಗ್ಗೂಡಿಸುವ ಸಂಭ್ರಮ’

01:03 AM Dec 25, 2019 | Team Udayavani |

ನಗರ: ದೇವರು ಲೋಕೋ ದ್ಧಾರಕ್ಕಾಗಿ ಮಾನವನಾಗಿ ಹುಟ್ಟಿ ಬಂದ ದಿನವನ್ನು ಕ್ರಿಸ್‌ಮಸ್‌ ಹಬ್ಬವಾಗಿ ವಿಶ್ವದಾದ್ಯಂತ ಅತ್ಯಂತ ಶ್ರದ್ಧೆ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ. ಜಾತಿ, ಮತ, ಧರ್ಮಗಳ ತಾರತಮ್ಯವಿಲ್ಲದೆ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಸಂಭ್ರಮಿಸುವುದು ಈ ಹಬ್ಬದ ವೈಶಿಷ್ಟé ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್‌ ನಿರ್ದೇಶಕ ಡಾ| ಆ್ಯಂಟನಿ ಪ್ರಕಾಶ್‌ ಮೊಂತೆರೊ ಹೇಳಿದರು.

Advertisement

ಸಂತ ಫಿಲೋಮಿನಾ ಪದವಿ ಮತ್ತು ಪ.ಪೂ. ಕಾಲೇಜುಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಆಯೋಜಿಸಲಾದ ಕ್ರಿಸ್ಮಸ್‌ ಸಹಮಿಲನದಲ್ಲಿ ಸಂದೇಶ ನೀಡಿ ಮಾತನಾಡಿದರು. ಪ್ರಾಣಿಗಳು ಇತರ ಪ್ರಾಣಿಗಳೊಂದಿಗೆ ವ್ಯಕ್ತಪಡಿಸುವ ಪ್ರಾಣಿ ಪ್ರೀತಿ ಎಲ್ಲೆಡೆ ಕಂಡು ಬರುತ್ತದೆ. ಆದರೆ ಮಾನವರಲ್ಲಿ ಈ ರೀತಿಯ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದು ಅತ್ಯಂತ ವಿಷಾದನೀಯ. ಸಮಾಜದಲ್ಲಿ ಶಾಂತಿ, ಸಹನೆ, ನೆಮ್ಮದಿ, ಸಮಾನತೆ, ಪ್ರೀತಿ, ವಿಶ್ವಾಸ, ಸಮೃದ್ಧಿಯನ್ನು ಸಾಧಿಸುವುದೇ ಕ್ರಿಸ್ಮಸ್‌ ಹಬ್ಬದ ಆಚರಣೆಯ ಮೂಲ ಉದ್ದೇಶ ಎಂದರು.

ದೇವರು ಒಬ್ಬನೇ ನಾಮ ಹಲವು ಎಂಬ ತತ್ತಾ$Ìದರ್ಶಗಳೊಂದಿಗೆ ಸಮಾಜದ ಎಲ್ಲ ವರ್ಗದ ಜನರು ಹಬ್ಬಗಳ ಆಚರಣೆಯಲ್ಲಿ ಒಮ್ಮತದಿಂದ ಪಾಲ್ಗೊಳ್ಳಬೇಕು. ಹಬ್ಬಗಳ ಆಚರಣೆ ಬಾಳಿಗೆ ಬೆಳಕನ್ನು ನೀಡುವಂತಾಗಲಿ. ಸಮಾಜದಲ್ಲಿ ಶಾಂತಿ ಪಸರಿಸಲಿ. ಜೀವನ ಸುಖಮಯವಾಗಿರಲಿ ಎಂದು ಡಾ| ಎ.ಪಿ. ರಾಧಾಕೃಷ್ಣ ಹೇಳಿದರು.

ವಿದ್ಯಾರ್ಥಿನಿ ಅನುರಾಧಾ ಭಾರದ್ವಾಜ್‌ ಬಿ.ಆರ್‌. ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ| ಲಿಯೋ ನೊರೊನ್ಹಾ ಸ್ವಾಗತಿಸಿದರು. ಪ.ಪೂ. ಕಾಲೇಜಿನ ಪ್ರಾಚಾರ್ಯ ವಿಜಯ್‌ ಲೋಬೋ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರಶಾಂತ್‌ ರೈ ನಿರೂಪಿಸಿದರು.

ಬಾಳಿಗೆ ಬೆಳಕು ನೀಡಲಿ
ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ| ಎ.ಪಿ. ರಾಧಾಕೃಷ್ಣ ಮಾತನಾಡಿ, ಜನರು ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿರುವ ಸಂದರ್ಭ ಏಸು ಕ್ರಿಸ್ತರು ದೇವ ಮಾನವರಾಗಿ ಈ ಭೂಮಿಗೆ ಅವತರಿಸಿದರು. ಇದರ ದ್ಯೋತಕವಾಗಿ ಕ್ರಿಸ್ಮಸ್‌ ಹಬ್ಬವನ್ನು ಜಾತಿ, ಮತ, ಧರ್ಮಗಳ ಕಟ್ಟುಪಾಡುಗಳನ್ನು ಮೀರಿ ಪ್ರಪಂಚದಾದ್ಯಂತ ಅತ್ಯಂತ ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next