Advertisement

Dunki;ಶಾರುಖ್-ರಾಜು ಯಾವ ಮ್ಯಾಜಿಕ್ ಮಾಡಿದ್ದಾರೆನ್ನುವ ಕುತೂಹಲ:ಅಮೀರ್ ಖಾನ್

05:47 PM Dec 20, 2023 | Team Udayavani |

ಮುಂಬಯಿ :ಬಹುನಿರೀಕ್ಷಿತ ‘ಡಂಕಿ’ ಚಿತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಅಮೀರ್ ಖಾನ್ ”ರಾಜ್ ಕುಮಾರ್ ಹಿರಾನಿ ಮತ್ತು ಶಾರುಖ್ ಖಾನ್ ಏನು ಮ್ಯಾಜಿಕ್ ಮಾಡಿದ್ದಾರೆ ಎಂದು ನೋಡಲು ನಾವೆಲ್ಲರೂ ಬಹಳಷ್ಟು ಉತ್ಸುಕರಾಗಿದ್ದೇವೆ” ಎಂದು ಹೇಳಿದ್ದಾರೆ.

Advertisement

ಖ್ಯಾತ ನಿರ್ದೇಶಕ-ನಿರ್ಮಾಪಕ ರಾಜ್‌ಕುಮಾರ್ ಹಿರಾನಿ ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸಿದ ಸಂಭ್ರಮದ ವೇಳೆ ಶುಭಕೋರಿರುವ ಅಮೀರ್ ಖಾನ್, ”ಹಿರಾನಿ ನನ್ನ ಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಅಭಿನಂದನೆಗಳು, ರಾಜು, 20 ವರ್ಷಗಳನ್ನು ಪೂರೈಸಿದ ನಿಮ್ಮ ಮುಂದಿನ ಚಿತ್ರ ‘ಡಂಕಿ’. ನೀವು ಮತ್ತು ಶಾರುಖ್ ಏನು ಮ್ಯಾಜಿಕ್ ಮಾಡಿದ್ದೀರಿ ಎಂದು ನೋಡಲು ನಾವೆಲ್ಲರೂ ತುಂಬಾ ಉತ್ಸುಕರಾಗಿದ್ದೇವೆ. ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ.ನಿರಂತರ ಯಶಸ್ಸು ನಿಮಗೆ ಸಿಗಲಿ” ಎಂದು ಪ್ರೀತಿಯಿಂದ ಹಾರೈಸಿದ್ದಾರೆ.

ಹಿರಾನಿ ಅವರು ಸಂಜಯ್ ದತ್, ಅರ್ಷದ್ ವಾರ್ಸಿ ಮತ್ತು ಬೊಮನ್ ಇರಾನಿ ನಟಿಸಿದ್ದ ಸೂಪರ್ ಹಿಟ್ ಚಲನಚಿತ್ರ “ಮುನ್ನಾ ಭಾಯಿ ಎಂಬಿಬಿಎಸ್” ಮೂಲಕ ಗಮನ ಸೆಳೆದಿದ್ದರು. 2003, ಡಿಸೆಂಬರ್ 19 ರಂದು ಬಿಡುಗಡೆಯಾಗಿತ್ತು.

ಅಕ್ರಮ ವಲಸೆ ತಂತ್ರ ‘ಡಾಂಕಿ ಫ್ಲೈಟ್’ ಆಧಾರಿತ ಹಾಸ್ಯ ಚಿತ್ರ “ಡಂಕಿ” ಗುರುವಾರ(ಡಿ.21) ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ಹಿರಾನಿ ಅವರಿಗೆ ಶಾರುಖ್ ಖಾನ್ , ವಿದ್ಯಾ ಬಾಲನ್, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಆರ್. ಮಾಧವನ್ ಸೇರಿ ಖ್ಯಾತ ನಟ ನಟಿಯರು ಶುಭ ಹಾರೈಸಿದ್ದಾರೆ.

ಹಿರಾನಿ ನಿರ್ದೇಶಿಸಿರುವ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರದಲ್ಲಿ ಶಾರುಖ್ ಅವರೊಂದಿಗೆ ತಾಪ್ಸಿ ಪನ್ನು, ಬೊಮನ್ ಇರಾನಿ, ವಿಶೇಷ ಪಾತ್ರದಲ್ಲಿ ವಿಕ್ಕಿ ಕೌಶಲ್ ಸೇರಿ ಇತರರು ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next