Advertisement

Excise scam: ಸಿಸೋಡಿಯಾ ನ್ಯಾಯಾಂಗ ಬಂಧನ ಮೇ 30 ರವರೆಗೆ ವಿಸ್ತರಣೆ

03:25 PM May 15, 2024 | Team Udayavani |

ಹೊಸದಿಲ್ಲಿ: ಆಪಾದಿತ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಮೇ 30 ರವರೆಗೆ ವಿಸ್ತರಿಸಿದೆ.

Advertisement

ಸಿಬಿಐ ಮತ್ತು ಇಡಿ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಪ್ರಕರಣದ ಆರೋಪಗಳನ್ನು ರೂಪಿಸುವ ಕುರಿತು ಹೆಚ್ಚಿನ ವಾದಗಳನ್ನು ಮೇ 30 ರಂದು ನಿಗದಿಪಡಿಸುವುದಾಗಿ ಬುಧವಾರ ಘೋಷಿಸಿ, ಆರೋಪದ ಮೇಲಿನ ವಾದವನ್ನು ಮುಂದೂಡುವ ಅರ್ಜಿಯು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ ಎಂದರು.

ಸಿಸೋಡಿಯಾ ಮತ್ತು ಬಂಧಿತ ಆರೋಪಿಗಳನ್ನು ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸಿಬಿಐ ಮತ್ತು ಇಡಿ ಸಲ್ಲಿಸಿದ್ದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯವು ಏಪ್ರಿಲ್ 30 ರಂದು ವಜಾಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next