Advertisement

ಅಬಕಾರಿ ಪೊಲೀಸರ ಭೇಟೆ:10 ಲಕ್ಷ ರೂ ಮೌಲ್ಯದ ನಕಲಿ ಮದ್ಯ ವಶ;3 ಮಂದಿ ಬಂಧನ

07:15 PM Jan 22, 2022 | Team Udayavani |

ಕುಣಿಗಲ್ : ಪ್ರತ್ಯೇಕ ಎರಡು ಪ್ರಕರಣಗಳನ್ನು ಬೇಧಿಸಿದ ಕುಣಿಗಲ್ ಅಬಕಾರಿ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿ 10.93 ಲಕ್ಷ ರೂ ಬೆಲೆ ಬಾಳುವ 264 ಲೀಟರ್ ನಕಲಿ ಮದ್ಯ, ಮದ್ಯಕ್ಕೆ ಬಳಸುವ ಸಾಮಗ್ರಿ, ಸೀಲಿಂಗ್ ಮಶಿನ್‌ನನ್ನು ವಶಪಡಿಸಿಕೊಂಡಿದ್ದಾರೆ.

Advertisement

ಮೈಸೂರು ನಗರದ ವಾಸಿಗಳಾದ ಜನಾರ್ಧನ್ (೫೩), ಸುರೇಶ್ (೪೬) ಹಾಗೂ ಶ್ರೀನಿವಾಸ್ (೪೬) ಬಂಧಿತ ಆರೋಪಿಗಳು.

ಘಟನೆ ವಿವರ

ಅಬಕಾರಿ ಉಪ ಆಯುಕ್ತೆ ಶೈಲಜಾ.ಎ.ಕೋಟೆ, ನಿರ್ದೇಶನದಂತೆ ಅಬಕಾರಿ ಅಧೀಕ್ಷಕ ಕೆ.ಸಿ.ಸಿದ್ದಲಿಂಗಸ್ವಾಮಿ ಅವರ ನೇತೃತ್ವದಲ್ಲಿ ಕುಣಿಗಲ್ ಅಬಕಾರಿ ನೀರೀಕ್ಷಕ ಎ.ಕೆ.ನವೀನ್ ತಾಲೂಕಿನ ಎಡಿಯೂರು ಹೋಬಳಿ ರಾಷ್ಟ್ರೀಯಯ ೭೫ ರ ಸಿಂಗೋನಹಳ್ಳಿ ಅಗ್ರಹಾರ ಗೇಟ್ ಮೇನಕಾ ಫ್ಯಾಮಿಲಿ ಡಾಬ ಬಳಿ ಗಸ್ತಿನಲ್ಲಿ ಇದ್ದ ವೇಳೆ ಟಾಟಾ ಸುಮಾ ವಾಹನದಲ್ಲಿ ಬಂದ ಮೈಸೂರು ನಗರದ ವಾಸಿ ಜನಾರ್ಧನ್ ಅವರ ಬಗ್ಗೆ ಅನುಮಾನ ಬಂದು ಅಬಕಾರಿ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದ್ದಾಗ, ಅಕ್ರಮವಾಗಿ172  ಲೀಟರ್ ನಕಲಿ ಮಧ್ಯವನ್ನು ಮೈಸೂರಿನಿಂದ ನಾಗಮಂಗಲ ಮಾರ್ಗವಾಗಿ ನೆಲಮಂಗಲಕ್ಕೆ ಸರಬರಾಜು ಮಾಡುತ್ತಿರುವುದು ಪತ್ತೆ ಆಯಿತು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅಬಕಾರಿ ಪೊಲೀಸರು, ಆರೋಪಿ ಜನಾರ್ಧನನ್ನು ವಿಚಾರಣೆಗೆ ಒಳಪಡಿಸಿದರು, ಮತ್ತೊಬ್ಬ ಆರೋಪಿ ಸುರೇಶ್ ಇರದಲ್ಲಿ ಪಾಲ್ಗೊಂಡಿದ್ದಾನೆ ಎಂಬ ಸುಳಿವಿನ ಮೇರೆಗೆ ಮೈಸೂರು ಗುರೂರು ಪಡಿಂತ್ ದೀನ್ ದಯಾಳ್ ಉಪಾಧ್ಯಾಯ ನಗರ, 5 ನೇ ಹಂತ ಮನೆ ನಂ 266  ರರಲ್ಲಿರುವ ಆರ್‌ಸಿಸಿ ಮನೆಯ ಮೇಲೆ ದಾಳಿ ನಡೆಸಲಾಗಿ ಸುರೇಶ್ ಅವರ ಮನೆಯಲ್ಲಿ 7000 ಓಲ್ಡ್ ಟವರಿನ್ ವಿಸ್ಕಿ, ನಕಲಿ ಖಾಲಿ ಟೆಟ್ರಾಪ್ಯಾಕ್‌ಗಳು, 7905 ನಕಲಿ ಅಡೆಸಿವ್ ಲೇಬರ್‌ಗಳು, 4.5 ಲೀಟರ್ ನಕಲಿ ಮದ್ಯ,650  ಲೀಟರ್ ಮಧ್ಯಸಾರ, 125  ಖಾಲಿ ರಟ್ಟಿನ ಪೆಟ್ಟಿಗೆ, 5  ಕಬ್ಬಿಣದ ಹೀಟ್, ಸೀಲಿಂಗ್ ಮಶಿನ್, 45  ಲೀಟರ್ ನಕಲಿ ಬ್ಲೆಂಡ್ ಮದ್ಯ, ನಕಲಿ ಮಧ್ಯ ತಯಾರಿಕೆಗೆ ಬಳಸುವ ಇತರೆ ಸಾಮಗ್ರಿಳು ಹಾಗೂ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದರು.

ಮತ್ತೊಂದು ಪ್ರಕರಣವನ್ನು ಭೇದಿಸಿದ ಅಬಕಾರಿ ಪೊಲೀಸರು ತಾಲೂಕಿನ ಎಡಿಯೂರು ಹೋಬಳಿ ಹೇಮಾವತಿ ಸರ್ಕಲ್‌ನ ಪಾಕಶಾಲ ಹೋಟೆಲ್ ಮುಂಭಾಗದ ರಸ್ತೆ ಪಕ್ಕದಲ್ಲಿ ಮೈಸೂರು ನಗರದ ಶ್ರೀನಿವಾಸ್ ಎಂಬುವನ್ನು ಆಟೋ ರಿಕ್ಷಾದಲ್ಲಿ ೮೬ ಲೀಟರ್ ನಕಲಿ ಮಧ್ಯ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ವಾಹನ ಜಪ್ತಿ ಮಾಡಿಕೊಂಡು, ಅಬಕಾರಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

Advertisement

ಕಾರ್ಯಾಚರಣೆಯಲ್ಲಿ ಉಪ ನಿರೀಕ್ಷಕ ಕೆ.ಮಲ್ಲಿಕಾರ್ಜುನಯ್ಯ, ನಿರೀಕ್ಷಕರಾದ ಟಿ.ಜಿ.ದಿವ್ಯಶ್ರೀ, ಅರುಣ್‌ಕುಮಾರ್, ಮುಖ್ಯಪೇದೆಗಳಾದ ಕೆ.ಶಿವರಾಮ್, ಪ್ರಭಾಕರ್, ಲೀಲಾ, ಪೇದೆಗಳಾದ ಬಿ.ಎಂ.ಗಂಗಾಧರಯ್ಯ, ಜಿ.ವಿ.ತಿರುಮಲೇಗೌಡ, ವೈಜುನಾಥ ಮಲಘಾಣ, ಮಂಜುನಾಥ್, ಯೋಗಿಶ್, ಸಂತೋಷಕುಮಾರ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next