Advertisement

ಅತಿಯಾದ ಯೂರಿಯಾ ಬಳಕೆ

06:31 PM Jan 12, 2020 | Sriram |

ನಾನು ಭತ್ತ ಬೆಳೆಯುತ್ತಿದ್ದೇನೆ. ಯೂರಿಯಾ ಗೊಬ್ಬರಕ್ಕೆ ತುಂಬಾ ಖರ್ಚಾಗುತ್ತಿದೆ. ಅದನ್ನು ಉಳಿಸುವುದು ಹೇಗೆ? ಅಲ್ಲದೆ, ಯೂರಿಯಾ ನೀಡುವ ಪ್ರಯೋಜನವನ್ನು ಕಡಿಮೆ ಖರ್ಚಿನಲ್ಲಿ ಪಡೆಯುವ ಬದಲಿ ಮಾರ್ಗ ಇದೆಯೇ?

Advertisement

ಇದೆ. ಈ ಸಮಸ್ಯೆಗೆ ಪರಿಹಾರ “ಅಜೋಲಾ’. “ಹಸಿರು ಗೊಬ್ಬರ’ ಎಂದೇ ಹೆಸರಾಗಿರುವ ಇದು, ನೀರಿನ ಮೇಲೆ ತೇಲಾಡಿಕೊಂಡು ಬೆಳೆಯುವ ಸಸ್ಯ.

ಇದರಲ್ಲಿನ “ಅನಾಬಿನ’ ಎಂಬ ನೀಲಿ ಹಸಿರು ಪಾಚಿಯು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿ, ಭತ್ತದ ಬೆಳೆಗೆ ಲಭ್ಯವಾಗಿಸುತ್ತದೆ. ಅಜೋಲಾ ಬೆಳೆಗೆ ಅಗತ್ಯವಿರುವ ಸಾರಜನಕವನ್ನು ಒದಗಿಸುತ್ತದೆ. ಅಜೋಲಾದಲ್ಲಿ ಶೇ 4ರಿಂದ 6ರಷ್ಟು ಸಾರಜನಕ ಹಾಗೂ ಶೇ 24 ರಿಂದ 26ರಷ್ಟು ಸಸಾರಜನಕ ಮತ್ತು ಬೆಳೆಗೆ ಬೇಕಾದ ಹಲವಾರು ಲಘುಪೋಷಕಾಂಶಗಳು ಅಡಗಿವೆ. ಒಂದು ಎಕರೆಗೆ ಬೆಳೆಯನ್ನು ನಾಟಿ ಮಾಡುವುದಕ್ಕಿಂತ ಮುಂಚಿತವಾಗಿ ಇದನ್ನು ಮಣ್ಣಿನಲ್ಲಿ ಸೇರಿಸುವುದರಿಂದ 16 ರಿಂದ 18 ಕಿ.ಗ್ರಾಂ. ಸಾರಜನಕವನ್ನು ಒದಗಿಸುವುದರ ಜೊತೆಗೆ 1600-1800 ಕಿ.ಗ್ರಾಂ ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರಿಸಿದಂತಾಗಿ, ರಾಸಾಯನಿಕ ಗೊಬ್ಬರವಾದ ಯೂರಿಯಾವನ್ನು ಮೇಲು ಗೊಬ್ಬರವಾಗಿ ಕೊಡುವ ಅವಶ್ಯಕತೆ ಇರುವುದಿಲ್ಲ. ಇದರ ಇನ್ನೊಂದು ಉಪಯೋಗ ಎಂದರೆ, ಅಜೋಲಾವು ಗದ್ದೆಯಲ್ಲಿ ಚಾಪೆಯ ರೀತಿ ಹರಡುವುದರಿಂದ ಕಳೆಗಳು ಉತ್ಪತ್ತಿಯಾಗುವುದಿಲ್ಲ. ಅಲ್ಲದೇ, ಭತ್ತದ ಕಟಾವಿನ ನಂತರ ಭೂಮಿಗೆ ಸೇರುವುದರಿಂದ ಉತ್ತಮ ಸಾವಯವ ಗೊಬ್ಬರವಾಗುತ್ತದೆ. ಅಜೋಲಾವನ್ನು ಜಾನುವಾರುಗಳಿಗೆ ಮೇವಿನ ರೂಪದಲ್ಲಿಯೂ ನೀಡಬಹುದು. ಅಜೋಲಾವನ್ನು ಮನೆಗಳಲ್ಲಿಯೇ ತೊಟ್ಟಿಗಳನ್ನು ನಿರ್ಮಿಸಿಕೊಂಡು ಬೆಳೆಯಬಹುದು. ತೊಟ್ಟಿಯಂತೆ ಬಳಕೆ ಮಾಡಬಹುದಾದ ಪಿ.ವಿ.ಸಿ ಶೀಟುಗಳೂ ಮಾರುಕಟ್ಟೆಯಲ್ಲಿ ಸಿಗುತ್ತದೆ.

– ರುದ್ರಗೌಡ

Advertisement

Udayavani is now on Telegram. Click here to join our channel and stay updated with the latest news.

Next