Advertisement

ಪಾಠವಿಲ್ಲದೆ ಪರೀಕ್ಷೆ!: ವಿದ್ಯಾರ್ಥಿಗಳ ಬಹಿಷ್ಕಾರ

12:02 PM May 21, 2017 | Team Udayavani |

ನಂಜನಗೂಡು: ಪಾಠವನ್ನೇ ಮಾಡದಿದ್ದರೂ ಪರೀಕ್ಷೆ ಮಾಡಲು ಹೊರಟ ಕಾಲೇಜಿನ ಧೋರಣೆ ಖಂಡಿಸಿದ ವಿದ್ಯಾರ್ಥಿಗಳು, ಪರೀಕ್ಷೆ ಬಹಿಷ್ಕರಿಸಿದ ಘಟನೆ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

Advertisement

ಕಾಲೇಜಿನಲ್ಲಿ ಕಂಟ್ಯೂಟರ್‌ ಅಪ್ಲಿಕೇಶನ್‌ ವಿಷಯ ಬೋಧಿಸುವ ಪ್ರಾಧ್ಯಾಪಕರೇ ಇಲ್ಲ. ಬೋಧನೆಗೆ ಪರ್ಯಾಯ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಆದರೂ, ಈ ವಿಷಯದ ಪರೀಕ್ಷೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ಪ್ರತಿಭಟನೆಯ ದಾರಿ ತುಳಿದರು.

ಪರೀಕ್ಷೆಗೆ ಬಹಿಷ್ಕಾರ: ಮೊದಲು ಪಾಠ ಮಾಡಿ, ನಂತರ ಪರಕ್ಷೆ ನಡೆಸಿ ಎಂದು ಆಗ್ರಹಿಸಿದ ದ್ವಿತೀಯ ಪದವಿ ವಿದ್ಯಾರ್ಥಿಗಳು ಶನಿವಾರದ ಕಂಪ್ಯೂಟರ್‌ ಪರೀಕ್ಷೆ ಬಹಿಷ್ಕರಿಸಿ ಹೊರಬಂದು ಕಾಲೇಜಿನ ಮುಂಭಾಗ ಪ್ರತಿಭಟನೆ ಪ್ರಾರಂಭಿಸಿದರು. “ಮಾಡದ ಪಾಠಕ್ಕಾಗಿ ಪರೀಕ್ಷೆ ನಡೆಸಿದರೆ ನಾವೇನು ಬರೆಯಬೇಕು’ ಎಂದು ವಿದ್ಯಾರ್ಥಿಗಳು ಉಪನ್ಯಾಸಕರನ್ನು ಪ್ರಶ್ನಿಸಿದರು.

ಶನಿವಾರ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದ್ದ ಕಂಪ್ಯೂಟರ್‌ ಪರೀಕ್ಷೆಗೆ ಕಲಾ ವಿಭಾಗದ ನಾಲ್ಕು ಸೆಕ್ಷನ್‌ನ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿಲ್ಲ. ಅಲ್ಲದೇ, ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲದೇ, ಕಾಲೇಜಿನಲ್ಲಿ ಆಂತರಿಕ ವಿಷಯದಲ್ಲಿ ತಮಗೆ ಕಡಿಮೆ ಅಂಕ ನೀಡುವ ಮೂಲಕ ಅನ್ಯಾಯ ಎಸಗಲಾಗಿದೆ ಎಂದೂ ವಿದ್ಯಾರ್ಥಿಗಳು ಆರೋಪಿಸಿದರು.

ಏನು ಬರೆಯಬೇಕು?: “ಈಗ ಕಂಪ್ಯೂಟರ್‌ ಲಿಖೀತ ಪರೀಕ್ಷೆ ಇದೆ. ವಿಷಯದ ಅರಿವೇ ಇಲ್ಲದೇ ಪರೀಕ್ಷೆಯನ್ನು ಹೇಗೆ ಬರೆಯಬೇಕು? ಇದಕ್ಕಾಗಿ ಏನು ಅಂಕ ಸಿಗುತ್ತದೆ? ಹಾಗಾಗಿ ಪರೀಕ್ಷೆಯನ್ನೇ ನಾವು ಬಹಿಷ್ಕರಿಸುತ್ತಿದ್ದೇವೆ. ಸ್ಥಳಕ್ಕೆ ಜಂಟಿ ನಿರ್ದೇಶಕರು ಬಂದು ನಮ್ಮ ಅಹವಾಲು ಸ್ವೀಕರಿಸಬೇಕು. ಕಾಲೇಜಿನಲ್ಲಿ ಗುಂಪುಗಾರಿಕೆ ನಡೆಸಿ ರಾಜಕಾರಣ ಮಾಡುತ್ತಿರುವ ಪ್ರಾಂಶುಪಾಲರನ್ನು ತಕ್ಷಣ ವರ್ಗಾವಣೆ ಮಾಡಿ ಕಾಲೇಜನ್ನು ರಕ್ಷಿಸಬೇಕು’ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದರು.

Advertisement

“ಕಂಪ್ಯೂಟರ್‌ ವಿಷಯದ ಪ್ರಶ್ನೆ ಪತ್ರಿಕೆಗೂ ನಮಗೆ ಇರುವ ಪಠ್ಯ ವಿಷಯಕ್ಕೂ ಸಂಬಂಧವೇ ಇಲ್ಲ. ಪಠ್ಯದಲ್ಲಿರುವ ¿åಾವುದೇ ವಿಷಯದ ಕುರಿತೂ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಇಲ್ಲ. ಇದರಿಂದ ನಾವು ಪರೀಕ್ಷೆ ಎದುರಿಸಲು ಕಷ್ಟವಾಗುತ್ತಿದೆ. ಈ ಬಗ್ಗೆ ಜಂಟಿ ನಿರ್ದೇಶಕರು ಕ್ರಮ ಕೈಗೊಳ್ಳುವರೆಗೂ ಸ್ಥಳದಿಂದ ಕದಲುವುದಿಲ್ಲ’ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.

ಮನವೊಲಿಕೆ ವಿಫ‌ಲ: ಪ್ರಾಂಶುಪಾಲ ಪ್ರೊ.ಎಸ್‌.ಬಿ. ಸಿದ್ದರಾಜು ಆಗಮಿಸಿ ವಿದ್ಯಾರ್ಥಿಗಳನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಆದರೂ ವಿದ್ಯಾರ್ಥಿಗಳು ಬಗ್ಗಲಿಲ್ಲ. ಮಾತಿನ ಚಕಮಕಿ ನಡೆಸಿದ್ದರಿಂದ ಪ್ರಾಂಶುಪಾಲರು ಬೇರೆ ದಾರಿ ಕಾಣದೆ ವಾಪಸ್‌ ಹೋದರು. ನಂತರ ಆಗಮಿಸಿದ ಪಟ್ಟಣ ಠಾಣೆ ಪಿಎಸ್‌ಐ ಆನಂದ್‌ ವಿದ್ಯಾರ್ಥಿಗಳನ್ನು ಮನವೊಲಿಸುವಲ್ಲಿ ಸಫ‌ಲರಾದರು. ನಂತರ 2.30 ಗಂಟೆಗೆ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎನ್ನಲಾಗಿದೆ. ಆದರೆ, ಈ ಕುರಿತು ಕಾಲೇಜು ಆಡಳಿತ ಮಂಡಳಿ 

ನಾಲ್ಕನೇ ಸೆಮಿಸ್ಟರ್‌ನ ಕಂಪ್ಯೂಟರ್‌ ವಿಷಯ ಕುರಿತು ಪಾಠವೇ ನಡೆದಿಲ್ಲ. ಈ ವಿಷಯದ ಪಾಠ ಮಾಡಲೆಂದು ನೇಮಿಸಿಕೊಂಡವರಿಗೆ ಪಾಠ ಮಾಡದಿದ್ದರೂ ಸಂಬಳ ಮಾತ್ರ ಪಾವತಿಯಾಗಿದೆ. ಹೀಗಾದರೆ ನಮ್ಮ ಕತೆ  ಹೇಗೆ? ಈಗ ಪರೀಕ್ಷೆ ಬರೆಯಿರಿ ಎಂದರೆ ಹೇಗೆ?
-ವಿದ್ಯಾರ್ಥಿಗಳು.

Advertisement

Udayavani is now on Telegram. Click here to join our channel and stay updated with the latest news.

Next