Advertisement

EXAM; ಎಸೆಸೆಲ್ಸಿ, ಪಿಯುಸಿ ಪರೀಕ್ಷಾ ವೇಳಾಪಟ್ಟಿ; ಯಾವ ದಿನ? ಯಾವ ಪರೀಕ್ಷೆ? ಇಲ್ಲಿದೆ ವಿವರ

01:09 AM Feb 22, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಾರ್ಚ್‌ 1ರಿಂದ 22ರ ವರೆಗೆ ದ್ವಿತೀಯ ಪಿಯುಸಿ ಹಾಗೂ ಮಾರ್ಚ್‌ 25ರಿಂದ ಎಪ್ರಿಲ್‌ 6ರ ವರೆಗೆ ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ವೇಳಾಪಟ್ಟಿ ಇಂತಿದೆ.

Advertisement

ಎಸೆಸೆಲ್ಸಿ
ಮಾ. 25: ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌)
ಮಾ. 27: ಸಮಾಜ ವಿಜ್ಞಾನ
ಮಾ. 30: ವಿಜ್ಞಾನ, ರಾಜ್ಯಶಾಸ್ತ್ರ
ಎ. 2:ಗಣಿತ, ಸಮಾಜ ಶಾಸ್ತ್ರ
ಎ.3:ಅರ್ಥಶಾಸ್ತ್ರ
ಎ. 4: ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲೀಷ್‌, ಅರೆಬಿಕ್‌, ಪರ್ಶಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು)
ಎ. 6:ದ್ವಿತೀಯ ಭಾಷೆ (ಇಂಗ್ಲೀಷ್‌, ಕನ್ನಡ)
(ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 ರ ವರೆಗೆ)

ದ್ವಿತೀಯ ಪಿಯುಸಿ
ಮಾ. 1: ಕನ್ನಡ, ಅರೆಬಿಕ್‌ ಪರೀಕ್ಷೆ
ಮಾ. 4: ಗಣಿತ
ಮಾ. 5: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾ.6: ಮಾಹಿತಿ ತಂತ್ರಜ್ಞಾನ, ರೀಟೈಲ್ ಆಟೋ ಮೊಬೈಲ್
ಮಾ.7: ಇತಿಹಾಸ, ಭೌತಶಾಸ್ತ್ರ
ಮಾ. 9: ಐಚ್ಛಿಕ ಕನ್ನಡ,ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ,ಗೃಹ ವಿಜ್ಞಾನ
ಮಾ.11: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮಾ. 13: ಇಂಗ್ಲಿಷ್‌
ಮಾ.15: ಹಿಂದೂಸ್ಥಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ
ಮಾ. 16: ಅರ್ಥಶಾಸ್ತ್ರ
ಮಾ. 18: ಭೂಗೋಳ ಶಾಸ್ತ್ರ, ಜೀವಶಾಸ್ತ್ರ
ಮಾ. 20: ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಮಾ.21: ಸಂಸ್ಕೃತ, ತಮಿಳು, ತೆಲುಗು, ಮಲಯಳಂ, ಮರಾಠಿ, ಉರ್ದು, ಫ್ರೆಂಚ್‌
ಮಾ. 22: ಹಿಂದಿ
(ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ)

ಎಸೆಸೆಲ್ಸಿ ಪರೀಕ್ಷೆಗೆ ಶೇ. 75 ಹಾಜರಾತಿ ಕಡ್ಡಾಯ
ಬೆಂಗಳೂರು: ಮೊದಲ ಬಾರಿಗೆ ಎಸೆಸೆಲ್ಸಿ ಪರೀಕ್ಷೆಗೆ ಅಂತರಿಕ ಅಂಕಗಳನ್ನು ನೀಡುವ ಪದ್ಧತಿ ಆರಂಭಿಸಿರುವ ಶಾಲಾ ಶಿಕ್ಷಣ ಇಲಾಖೆ, ಈಗ ಅಂತರಿಕ ಅಂಕಗಳಿಗೆ ಪೋಷಕರ ಸಹಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಈ ವರ್ಷ ಮೊದಲ ಬಾರಿಗೆ ಮೂರು ವಾರ್ಷಿಕ ಪರೀಕ್ಷೆಯ ಜತೆಗೆ 80 ಅಂಕಗಳ ಲಿಖಿತ ಪರೀಕ್ಷೆ ಮತ್ತು 20 ಅಂಕಕ್ಕೆ ಆಂತರಿಕ ಪರೀಕ್ಷೆಯ ಪದ್ಧತಿ ಜಾರಿಗೊಳಿಸಿದೆ. ಆಂತರಿಕ ಅಂಕಗಳನ್ನು ನೀಡುವ ಅಧಿಕಾರ ಹೊಂದಿರುವ ಶಿಕ್ಷಕರು ಅದನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂಬ ಕಾಳಜಿ ವಹಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಆಂತರಿಕ ಅಂಕಗಳ ಮಾಹಿತಿಯನ್ನು ತನಗೆ ಸಲ್ಲಿಸುವ ಮುನ್ನ ವಿದ್ಯಾರ್ಥಿಯ ಪೋಷಕರ ಸಹಿಯನ್ನು ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ.

Advertisement

ಶೇ. 75 ಹಾಜರಿ ಕಡ್ಡಾಯ: ಕನಿಷ್ಠ ಶೇ.75ರ ಹಾಜರಾತಿ ಹೊಂದಿರುವ ಮಕ್ಕಳಿಗೆ ಮಾತ್ರ ಅಂತರಿಕ ಅಂಕಗಳನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಶೇ.75 ಅಂಕಗಳನ್ನು ಹೊಂದಿಲ್ಲದಿದ್ದರೆ ಆ ವಿದ್ಯಾರ್ಥಿ 2024ರ ಎಸೆಸೆಲ್ಸಿ ಪರೀಕ್ಷೆ-1, ಪರೀಕ್ಷೆ-2 ಮತ್ತು ಪರೀಕ್ಷೆ-3 ಅನ್ನು ಬರೆಯಲು ಅನರ್ಹನಾಗಿರುತ್ತಾನೆ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಅಂತಹ ವಿದ್ಯಾರ್ಥಿ 2024-25ರ ಸಾಲಿನಲ್ಲಿ ಶಾಲೆಗೆ ಮರು ದಾಖಲಾಗಿ ಪರೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next