Advertisement
ಕಳೆದ ಶೈಕ್ಷಣಿಕ ವರ್ಷದ ಅಂತ್ಯದ ವೇಳೆ ಕೋವಿಡ್ ಕಾಣಿಸಿ ಕೊಂಡು, ಬಳಿಕ ಲಾಕ್‌ಡೌನ್ ಘೋಷಣೆಯಾಗಿತ್ತು. 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ನಡೆದಿರಲಿಲ್ಲ.
Related Articles
Advertisement
ಶಿಕ್ಷಣ ಹಕ್ಕು ಕಾಯ್ದೆಯನ್ವಯ 1-9ರ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಗೊಳಿಸುವಂತಿಲ್ಲ. ಹೀಗಾಗಿ ಪರೀಕ್ಷೆ ನಡೆಸಿ, ಎಲ್ಲರನ್ನೂ ತೇರ್ಗಡೆ ಮಾಡಿ, ಕಲಿಕಾ ನ್ಯೂನತೆ ಆಧಾರದಲ್ಲಿ ಮುಂದೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದು ಮುಖ್ಯ ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ.
ಖಾಸಗಿ ಶುಲ್ಕ ವಿನಾಯಿತಿ? :
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಖಾಸಗಿ ಶಾಲಾ ಮಕ್ಕಳ ಶುಲ್ಕದಲ್ಲಿ ಶೇ. 30ರಿಂದ ಶೇ. 35ರಷ್ಟು ವಿನಾಯಿತಿ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ಸೂಚನೆ ನೀಡುವ ಸಾಧ್ಯತೆಯಿದೆ. ಸೋಮವಾರ ಅಥವಾ ಮಂಗಳವಾರ ಸರಕಾರ ಈ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
1ರಿಂದ 9ನೇ ತರಗತಿ ಮಕ್ಕಳಿಗೆ ಈ ಬಾರಿ ಕಲಿಕಾ ಮೌಲ್ಯ ಮಾಪನ ಇರಲಿದೆ. ದ.ಕ. ಜಿಲ್ಲೆಯಲ್ಲಿ ಸಿದ್ಧತೆ ನಡೆಯುತ್ತಿದೆ. ವಿದ್ಯಾಗಮ ಮೂಲಕ ಮಕ್ಕಳಿಗೆ ಅಭ್ಯಾಸ ಮಾಡಿಸಲಾಗುತ್ತಿದೆ. -ಮಲ್ಲೇಸ್ವಾಮಿ, ವಿದ್ಯಾಂಗ ಉಪನಿರ್ದೇಶಕರು, ದ.ಕ.
ಉಡುಪಿ ಜಿಲ್ಲೆಯಲ್ಲಿ ವಿದ್ಯಾಗಮಕ್ಕೆ ಶೇ.75ರಷ್ಟು ಮಂದಿ ಮಕ್ಕಳು ಹಾಜರಾಗುತ್ತಿದ್ದಾರೆ. 1ರಿಂದ 9ನೇ ತರಗತಿಯ ಮಕ್ಕಳಿಗೆ ಈ ಬಾರಿ ಕಲಿಕಾ ಮೌಲ್ಯಮಾಪನ ಇರಲಿದೆ. -ಎನ್.ಎಚ್. ನಾಗೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಡುಪಿ