Advertisement

ಬಯಲಲ್ಲೇ ಪರೀಕ್ಷೆ ಬರೆದ ಪದವಿ ವಿದ್ಯಾರ್ಥಿಗಳು

06:40 AM Nov 24, 2018 | Team Udayavani |

ಹರಪನಹಳ್ಳಿ: ದಾವಣಗೆರೆ ವಿಶ್ವ ವಿದ್ಯಾಲಯದ ಪದವಿ ಸೆಮಿಸ್ಟರ್‌ ಪರೀಕ್ಷೆಗಳು ಶುಕ್ರವಾರದಿಂದ ಆರಂಭಗೊಂಡಿದ್ದು, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕೊಠಡಿಗಳ ಕೊರತೆಯಿಂದಾಗಿ ಕಾಲೇಜು ಆವರಣದಲ್ಲಿ ಹಾಕಲಾಗಿರುವ ಶಾಮಿಯಾನ ಕೆಳಗೆ ಕುಳಿತು ಪರೀಕ್ಷೆ ಬರೆದರು.

Advertisement

ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ ಪದವಿಯ ಪ್ರಥಮ, ತೃತೀಯ ಮತ್ತು 5ನೇ ಸೆಮಿಸ್ಟರ್‌ ಪರೀಕ್ಷೆಗಳು ನಡೆಯುತ್ತಿದ್ದು, ಕೊಠಡಿ ಸಮಸ್ಯೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಕಾಲೇಜಿನ ಆವರಣದಲ್ಲಿ ಶಾಮಿಯಾನ, ಟೇಬಲ್‌,ಬೆಂಚ್‌ ಹಾಕಿ ಅಧಿಕಾರಿಗಳು ಪರೀಕ್ಷೆ ಬರೆಸಿದರು. ಶಾಮಿಯಾನ ಕೆಳಗೆ ಕುಳಿತು 320 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕಾಲೇಜಿನಲ್ಲಿ ಬಿಎ ಇತಿಹಾಸ ವಿಷಯ-509 ವಿದ್ಯಾರ್ಥಿಗಳು,ಬಿಬಿಎಂ ಆದಾಯ ತೆರಿಗೆ ವಿಷಯ- 19, ಬಿಕಾಂ ಲೆಕ್ಕಶಾಸ್ತ್ರ,-147, ಬಿಎಸ್ಸಿಗಣಿತ ಶಾಸ್ತ್ರ ವಿಷಯ-102 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 40 ವಿದ್ಯಾರ್ಥಿಗಳಿಗೆ ಒಂದು ಕೊಠಡಿಯಂತೆ 8 ಕೊಠಡಿಗಳ ಕೊರತೆಯಿದೆ.

ನ. 23ರಿಂದ ಆರಂಭಗೊಂಡಿರುವ ಪರೀಕ್ಷೆಗಳು ಜ. 3ವರೆಗೆ ನಡೆಯಲಿವೆ.ಆದರೆ ವಿಷಯವಾರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಡಿ. 7ರವರೆಗೆ ಶಾಮಿಯಾನ ಅವಶ್ಯಕತೆಯಿದೆ. ಆದರೆ ಪರೀಕ್ಷೆ ಸಮಯದಲ್ಲಿ ಮಳೆ ಬಂದರೆ ಹೇಗೆ ನಿಭಾಯಿಸುವುದು ಎನ್ನುವ ಆತಂಕ ಉಪನ್ಯಾಸಕರನ್ನು ಕಾಡುತ್ತಿದೆ.

ಮಳೆ ಬಂದರೆ ಪರೀಕ್ಷೆಗೆ ತೊಂದರೆಯಾಗುವ ದೃಷ್ಟಿಯಿಂದ ಬೇರೆ ಕಾಲೇಜುಗಳಲ್ಲಿ ಕೊಠಡಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಅವರ ಕಾಲೇಜಿನ ತರಗತಿಗಳಿಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ನಮಗೆ ಕೊಠಡಿ ಕೊಟ್ಟಿಲ್ಲ. ಸ್ಥಳೀಯ ಶಾಸಕರಿಗೆ, ಇಲಾಖೆಯ ನಿರ್ದೇಶಕರಿಗೂ ಪತ್ರ ಬರೆದಿದ್ದೇವೆ.ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಪ್ರಾಚಾರ್ಯ ಎನ್‌.ಎಂ ನಾಗರಾಜ್‌ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next