ಮಂಗಳೂರು: ಕಳೆದ 10 ವರ್ಷಗಳಿಂದ ನೀಟ್‌ಗೆ ಕೋಚಿಂಗ್ ನೀಡುತ್ತ ಸುಮಾರು 500 ವಿದ್ಯಾರ್ಥಿ
ಗಳಿಗೆ ಸರಕಾರಿ ಮೆಡಿಕಲ್ ಸೀಟ್ ದೊರಕಿಸಿಕೊಟ್ಟಿರುವ ಮಂಗಳೂರಿನ ಎಕ್ಸಾಮ್ 24ಗಿ7 ಮತ್ತೊಮ್ಮೆ ದಾಖಲೆ ಸೃಷ್ಟಿಸಿದೆ.
2023ನೇ ಸಾಲಿನಲ್ಲಿ ಸಂಸ್ಥೆಯಲ್ಲಿ ನೀಟ್ ಲಾಂಗ್ ಟರ್ಮ್ ಕೋಚಿಂಗ್ ಪಡೆದ 29 ವಿದ್ಯಾರ್ಥಿಗಳಲ್ಲಿ 17 ಮಂದಿಗೆ ಸರಕಾರಿ ಎಂಬಿಬಿಎಸ್ ಸೀಟ್ ದೊರೆತಿದೆ. ಉಳಿದೆಲ್ಲ ವಿದ್ಯಾರ್ಥಿಗಳಿಗೆ ಬಿಡಿಎಸ್ ಮತ್ತು ಆಯುಷ್ ಸೀಟು ದೊರೆಯಲಿದೆ.
ಸರಕಾರಿ ಮೆಡಿಕಲ್ ಸೀಟು ಪಡೆದವರಲ್ಲಿ ಅಲೆನ್ ಟಿ. ಗೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಹರೀಶ್ ಮತ್ತು ತೇಜಸ್ವಿನಿಗೆ ಬೆಳಗಾವಿ, ವಿದ್ಯಾಲಕ್ಷ್ಮೀಗೆ ಕೊಪ್ಪಳ, ಅಕ್ಷತಾಗೆ ಕಾರವಾರ, ಕುಮಾರ್‌ಗೆ ಚಿಕ್ಕಾಬಳ್ಳಾಪುರ ಮತ್ತು ವೀರೇಶ್‌ಗೆ ಯಾದಗಿರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ದೊರೆತಿದೆ. ಇದಲ್ಲದೆ ಜಸ್ಟಿನ್ ಜಾನ್ ಕಂಕನಾಡಿ ಮತ್ತು ಲವಿಟಾ ಫೆರ್ನಾಂಡಿಸ್ ಸುರತ್ಕಲ್‌ಗೆ ಯೆನಪೋಯ, ಸುಮುಖ ರಾವ್ ಮಣ್ಣಗುಡ್ಡೆ ಮತ್ತು ನಾಗರಾಜ್ ಎನ್. ಸುರತ್ಕಲ್‌ಗೆ ಎಜೆ, ಸಿಂಧುರಾಣಿಗೆ ಸಪ್ತಗಿರಿ ಮತ್ತು ದೇವಿಪ್ರಸಾದ್ ಬಿ.ಜೆ.ಗೆ ಶ್ರೀನಿವಾಸ ಮೆಡಿಕಲ್ ಕಾಲೇಜಿನಲ್ಲಿ ಸರಕಾರಿ ಸೀಟು ದೊರೆತಿದೆ.
ಕಳೆದ 5 ವರ್ಷಗಳಲ್ಲಿ ಸತತ ಶೇ. 100 ಫಲಿತಾಂಶ ಪಡೆಯುವುದರ ಜತೆಗೆ ಶೇ. 80 ವಿದ್ಯಾರ್ಥಿಗಳಿಗೆ ಸರಕಾರಿ ಮೆಡಿಕಲ್ ಸೀಟು ದೊರಕಿಸಿಕೊಟ್ಟು ದಾಖಲೆ ಬರೆದಿರುವ ಎಕ್ಸಾಮ್ 24ಗಿ7ನಲ್ಲಿ ನೀಟ್ ಲಾಂಗ್ ಟರ್ಮ್ನ ನೂತನ ಬ್ಯಾಚ್ ಶೀಘ್ರ ಆರಂಭವಾಗಲಿದೆ. ಕೇವಲ 25 ವಿದ್ಯಾರ್ಥಿಗಳ ಈ ಬ್ಯಾಚ್‌ನಲ್ಲಿ ಕಲಿಯಲಿರುವ ಎಲ್ಲ ವಿದ್ಯಾರ್ಥಿ ಗಳಿಗೂ ಸರಕಾರಿ ಸೀಟು ದೊರಕಿಸು ವಂತಾಗಲು ಪ್ರಯತ್ನಿಸಲಾಗುವುದು. ನೋಂದಣಿ ಆರಂಭಗೊಂಡಿದ್ದು ಕೆಲವೇ ಸೀಟುಗಳು ಉಳಿದಿವೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಲಭ್ಯವಿದೆ. ಮಾಹಿತಿಗೆ ಎಕ್ಸಾಮ್ 24ಗಿ7, ಕೊಟ್ಟಾರ, ಮಂಗಳೂರು ಸಂಪರ್ಕಿಸಲು ಕೋರಲಾಗಿದೆ.