Advertisement

ಸುದೀರ್ಘ‌ ಅನಾರೋಗ್ಯದಿಂದ ಬೇಸತ್ತ ಮಾಜಿ ಪೊಲೀಸ್‌ ಆತ್ಮಹತ್ಯೆ

12:29 PM May 23, 2018 | udayavani editorial |

ಬಲ್ಲಿಯಾ, ಉತ್ತರ ಪ್ರದೇಶ : ತನ್ನ ದೀರ್ಘ‌ಕಾಲೀನ ಅನಾರೋಗ್ಯದಿಂದ ಬೇಸತ್ತ  78ರ ಹರೆಯದ ಮಾಜಿ ಪೊಲೀಸ್‌ ಓರ್ವರು ಜಿಲ್ಲೆಯ ನವರತ್ನಪುರ ಗ್ರಾಮದಲ್ಲಿ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಠಾಕೂರ್‌ ಪ್ರಸಾದ್‌ ಭಾರದ್ವಾಜ್‌ ಅವರು ಹೆಡ್‌ ಕಾನ್‌ಸ್ಟೆಬಲ್‌ ಹುದ್ದೆಯಿಂದ ನಿವೃತ್ತರಾಗಿದ್ದರು. ತನ್ನ ದೀರ್ಘ‌ಕಾಲೀನ ಅನಾರೋಗ್ಯದಿಂದ ಅವರು ಬೇಸತ್ತಿದ್ದರು. ನಿನ್ನೆ ಸಂಜೆ ಅವರು ತಮಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡರು. 

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಠಾಕೂರ್‌ ಅವರನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅವರು ಅದಾಗಲೇ ಕೊನೆಯುಸಿರೆಳೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next