Advertisement

Madhya Pradesh; 3 ವರ್ಷದಲ್ಲಿ 3238 ಸಸಿ ನೆಟ್ಟ ಮ.ಪ್ರ. ಮಾಜಿ ಸಿಎಂ ಚೌಹಾಣ್‌

07:48 PM Feb 20, 2024 | Team Udayavani |

ಭೋಪಾಲ್‌: ಮೂರು ವರ್ಷಗಳವರೆಗೆ ನಿತ್ಯವೂ ಸಸಿ ನೆಡುವ ಸಂಕಲ್ಪ ಮಾಡಿದ್ದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮಂಗಳವಾರ ತಮ್ಮ ಸಂಕಲ್ಪ ಪೂರ್ಣಗೊಳಿಸಿದ್ದಾರೆ.

Advertisement

ಮಂಗಳವಾರ ಚೌಹಾಣ್‌ ಹಾಗೂ ಮಧ್ಯಪ್ರದೇಶ ಸಿಎಂ ಮೋಹನ್‌ ಯಾದವ್‌ ಸೇರಿ 108 ಸಸಿಗಳನ್ನು ನೆಡುವ ಮೂಲಕ ಸಂಕಲ್ಪ ಪೂರ್ಣಗೊಳಿಸಿದ್ದಾರೆ.

ಕಳೆದ 1,095 ದಿನಗಳಲ್ಲಿ ಚೌಹಾಣ್‌ ದೇಶಾದ್ಯಂತ 16 ರಾಜ್ಯಗಳಲ್ಲಿ ಒಟ್ಟು 3,238 ಸಸಿಗಳನ್ನು ನೆಟ್ಟಿದ್ದಾರೆ. ಈ ಕುರಿತು ಮಾತನಾಡಿರುವ ಚೌಹಾಣ್‌, 3 ವರ್ಷದ ಹಿಂದೆ ನೆಟ್ಟಂಥ ಸಸಿಗಳು ಈಗ ಮರವಾಗಿ ಬೆಳೆದಿರುವುದನ್ನು ನೋಡಿದಾಗ ನನಗೆ ಹಮ್ಮೆ ಮತ್ತು ಸಂತಸವಾಗುತ್ತಿದೆ, ಸಂತೃಪ್ತಿ ಸಿಗುತ್ತಿದೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next