ಹೈದರಾಬಾದ್: ಆ ಹುಡುಗಿ ಮನೆಯಿಂದ ಹೊರಬಂದ ಕೂಡಲೇ ಮನೆಯ ಅಂಗಳದಲ್ಲಿದ್ದ ಬ್ಯಾಂಡ್ ಸೆಟ್ ವಾದ್ಯಗಳು ಜೋರಾಗಿ ಮೊಳಗಲಾರಂಭಿಸಿದವು.
ಆಕೆಯ ತಂದೆ ಖುದ್ದಾಗಿ ಆ ಹುಡುಗಿಯನ್ನು ಕರೆದುಕೊಂಡು ಬಂದು ಕಾರಿನ ಬಾಗಿಲು ತೆಗೆದು ಕಾರಿನಲ್ಲಿ ಆಕೆಯನ್ನು ಕೂರಿಸಿ ಬೀಳ್ಕೊಟ್ಟರು. ಅದು ಮದುವೆ ಸಂಭ್ರಮವಾ, ಆಕೆ ಹೋಗಿದ್ದು ಗಂಡನ ಮನೆಗಾ ಎಂದು ಕೇಳಬೇಡಿ…ಆಕೆ ಹೋಗಿದ್ದು ಶಾಲೆಗೆ!
ಖೈತರಾಬಾದ್‌ನ ಮಾಜಿ ಶಾಸಕ ವಿಷ್ಣುವರ್ದನ್ ರೆಡ್ಡಿ ಅವರ ಪುತ್ರಿ ಜನಶ್ರೀ ರೆಡ್ಡಿಯವರಿಗೆ ಮಾಡಿದ್ದ ವ್ಯವಸ್ಥೆಯಿದು. ನಗರದ ಚಿರೆಕ್ ಇಂಟರ್‌ನ್ಯಾಶನಲ್ ಶಾಲೆಯ ವಿದ್ಯಾರ್ಥಿನಿಯಾದ ಜನಶ್ರೀ ಕೊರೊನಾ ಸಾಂಕ್ರಾಮಿಕ ತಡೆ ನಿಯಮಗಳಿಂದಾಗಿ ಸತತವಾಗಿ ಮೂರು ವರ್ಷ ಮನೆಯಲ್ಲೇ ಆನ್‌ಲೈನ್ ಕ್ಲಾಸ್‌ನಲ್ಲಿ ಭಾಗವಹಿಸಿ 5, 6 ಮತ್ತು 7ನೇ ತರಗತಿ ತೇರ್ಗಡೆಯಾಗಿದ್ದಾಳೆ.
ಇದನ್ನೂ ಓದಿ:ಲಾಲು ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ; ಏಮ್ಸ್ ಆಸ್ಪತ್ರೆಗೆ ದಾಖಲು
ಈಗ, ಶಾಲೆ ಪುನರಾರಂಭವಾಗಿರುವ ಹಿನ್ನೆಲೆಯಲ್ಲಿ ಆಕೆ ಮೂರು ವರ್ಷಗಳ ಅನಂತರ ಮೊದಲ ಬಾರಿಗೆ ಶಾಲೆಗೆ ಹೊರಟಿದ್ದರಿಂದ ಆಕೆಯನ್ನು ಭವ್ಯವಾಗಿ ಕಳುಹಿಸಲಾಗಿದೆ.