ಘಾಜಿಪುರ (ಯುಪಿ): ಕಾಂಗ್ರೆಸ್ ಮುಖಂಡ ಅಜಯ್ ರಾಯ್ ಅವರ ಸಹೋದರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ನ್ಯಾಯಾಲಯವು ದರೋಡೆಕೋರ, ರಾಜಕಾರಣಿ ಮುಕ್ತಾರ್ ಅನ್ಸಾರಿ ಮತ್ತು ಸಹಚರನಿಗೆ ದರೋಡೆಕೋರರ ಕಾಯಿದೆಯಡಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದುರ್ಗೇಶ್ ಅವರು ಗುರುವಾರ ಅನ್ಸಾರಿ ಮತ್ತು ಅವರ ಸಹಚರ ಭೀಮ್ ಸಿಂಗ್ ದರೋಡೆಕೋರರ ಕಾಯಿದೆಯಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿ ತಲಾ 5 ಲಕ್ಷ ರೂ.ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ (ಎಡಿಜಿಸಿ) ನೀರಜ್ ಕುಮಾರ್ ಹೇಳಿದರು.
ಪ್ರಕರಣದ ಕುರಿತು ವಿವರಿಸಿದ ಕುಮಾರ್, ಆಗಸ್ಟ್ 3, 1991 ರಂದು ಬೆಳಗಿನ ಜಾವ 1 ಗಂಟೆಗೆ ಕಾಂಗ್ರೆಸ್ ಮುಖಂಡ ಅಜಯ್ ರಾಯ್ ಮತ್ತು ಅವರ ಸಹೋದರ ಅವಧೇಶ್ ವಾರಾಣಸಿಯ ತಮ್ಮ ಮನೆಯ ಗೇಟ್‌ನಲ್ಲಿ ನಿಂತಿದ್ದಾಗ ಅನ್ಸಾರಿ ಸೇರಿದಂತೆ ಕಾರಿನಲ್ಲಿ ಬಂದ ಕೆಲವು ದುಷ್ಕರ್ಮಿಗಳು ಅವಧೇಶ್ ಗೆ ಗುಂಡು ಹಾರಿಸಿದ್ದರು.
ಎಲ್ಲಾ ದಾಳಿಕೋರರ ಕೈಯಲ್ಲಿ ಶಸ್ತ್ರಾಸ್ತ್ರಗಳಿದ್ದವು. ಅಜಯ್ ರಾಯ್ ಅವರು ತಮ್ಮ ಪರವಾನಿಗೆ ಪಡೆದ ಪಿಸ್ತೂಲ್‌ನಿಂದ ಪ್ರತಿಯಾಗಿ ಗುಂಡು ಹಾರಿಸಿದ್ದು, ದಾಳಿಕೋರರು ತಮ್ಮ ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಅಜಯ್ ರಾಯ್ ತನ್ನ ಸಹೋದರನನ್ನು ಕಬೀರಚೌರಾದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.ಈ ಸಂಬಂಧ ಅನ್ಸಾರಿ ಮತ್ತು ಸಿಂಗ್ ವಿರುದ್ಧ ಗಾಜಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಐದು ಬಾರಿ ಮಾಜಿ ಶಾಸಕ, 59 ವರ್ಷದ ಅನ್ಸಾರಿ ನಾಲ್ಕು ಡಜನ್ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು. ಸದ್ಯ ಉತ್ತರ ಪ್ರದೇಶದ ಬಂದಾ ಜೈಲಿನಲ್ಲಿ ಇರಿಸಲಾಗಿದೆ. ಬಿಎಸ್ ಪಿ ಯಲ್ಲಿ ಸಕ್ರಿಯಯವಾಗಿದ್ದ ಅನ್ಸಾರಿ ಎರಡು ಬಾರಿ ಪಕ್ಷೇತರನಾಗಿ, ಒಂದು ಬಾರಿ ಕ್ವಾಮಿ ಏಕತಾ ದಳದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ.