ಧಾರವಾಡ : ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆಯಾಗುವುದು ಖಚಿತವಾಗುತ್ತಿದ್ದಂತೆ ಅವರ ಬೆಂಬಲಿಗರು ಅದ್ದೂರಿ ಸ್ವಾಗತಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ.
ನಾಳೆ ಬೆಳಿಗ್ಗೆ ೧೦ :೦೦ ಗಂಟೆಗೆ ಹಿಂಡಲಗಾ ಜೈಲಿನಿಂದ ಹೊರಗಡೆ ಬರಲಿರುವ ವಿನಯ್ ಮೊದಲು ಕಿತ್ತೂರಿಗೆ ಆಗಮಿಸುವ ಸಾಧ್ಯತೆ ಇದ್ದು, ಅಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪನೆ ಮಾಡಲಿದ್ದಾರೆ. ನಂತರ ಸವದತ್ತಿ ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ವಿನಯ್ ಸಹೋದರ ವಿಜಯ್ ಕುಲಕರ್ಣಿ, ಶುಕ್ರವಾರ ಬೆಳಗಾವಿಯಿಂದ ವಿನಯ್ ಅವರು ಸವದತ್ತಿಗೆ ಹೋಗುತ್ತಾರೆ. ಸಹೋದರನಿಗೆ ಜಾಮೀನು ಸಿಕ್ಕಿದ್ದು ಬಹಳ ಖುಷಿಯಾಗಿದೆ. ಬಹಳ ದಿನಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೆವು. ಅವರಿಗೆ ಕೆಲ ಷರತ್ತು ವಿಧಿಸಿ ಜಾಮೀನು ಸಿಕ್ಕಿದೆ.ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಿಲ್ಲ.ಹಿಗಾಗೇ ಬೆಂಗಳೂರಿನಲ್ಲಿ ಇರ್ತಾರೆ ಎಂದರು.
ಅವರ ರಾಜಕೀಯ ಹಿನ್ನಡೆ ಆಯಿತು ಎನ್ನೋರು ಸ್ವಲ್ಪ ಕಾಯಬೇಕು ಎಂದು ವಿನಯ್ ವಿರೋಧಿಗಳಿಗೆ ತೀರುಗೇಟು ನೀಡಿದ ಸಹೋದರ ವಿಜಯ್, ಅದು ವಿರೋಧಿಗಳ ಮೂರ್ಖತನ ಅವರ ರಾಜಕೀಯ ಭವಿಷ್ಯ ಮುಗಿತು ಎನ್ನೋರು ಕಾದು ನೋಡಲಿ ಅವರು ಸಕ್ರಿಯ ರಾಜಕೀಯಲ್ಲಿ ಇರ್ತಾರೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಯಲ್ಲೂ ತೊಡಿಗಿಸಿಕೊಳ್ತಾರೆ ಎಂದರು.
ಸಿಬಿಐ ತನೀಖೆಗೆ ನಾವು ಸಹಕಾರ ನೀಡಿದ್ದೇವೆ. ಅವೆಲ್ಲಾ ವಿಚಾರಣೆ ನಡೆಸಿಯೇ ನ್ಯಾಯಾಲಯ ಜಾಮೀನು ನೀಡಿದೆ. ನಮಗೆಲ್ಲಾ ಬಹಳ ಖುಷಿಯಾಗಿದೆ ಎಂದು ವಿನಯ್ ಸಹೋದರ ವಿಜಯ್ ಕುಲಕರ್ಣಿ ಹೇಳಿದ್ದಾರೆ.