Advertisement
ವಂಚನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಮೇರೆಗೆ ಪುಲಿಕೇಶಿ ನಗರ ಉಪ ವಿಭಾಗದ ಎಸಿಪಿ ಕಚೇರಿಗೆ ಹಾಜರಾಗಿದ್ದ ವರ್ತೂರು ಪ್ರಕಾಶ್ ಅವರನ್ನು ಎಸಿಪಿ ಗೀತಾ ಅವರು ಸುಮಾರು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
Related Articles
Advertisement
ದುರ್ಬಳಕೆ ಮಾಡಿಕೊಂಡು ಶ್ವೇತಾಗೌಡ ಚಿನ್ನ ಖರೀದಿಸಿದ್ದು, ಈ ಕೃತ್ಯದಲ್ಲಿ ನನ್ನದು ಯಾವುದೇ ಪಾತ್ರವಿಲ್ಲ. ನನಗೆ ಐದಾರು ತಿಂಗಳ ಹಿಂದೆ ಶ್ವೇತಾಗೌಡ ಪರಿಚಯವಾಗಿದ್ದಳು. ರಾಜಕಾರಣಿಗಳ ಮನೆಗಳಿಗೆ ಪ್ರತಿ ದಿನ ನೂರಾರು ಜನ ಬಂದು ಹೋಗುತ್ತಾರೆ. ಅದೇ ರೀತಿ ನಮ್ಮ ಮನೆಗೆ ಆಕೆ ಸಹ ಬಂದು ಹೋಗಿದ್ದಳು. ಆದರೆ ಶ್ವೇತಾಗೌಡ ನನ್ನ ಸ್ನೇಹಿತೆ ಅಲ್ಲ. ನನ್ನ ಹೆಸರನ್ನು ಶ್ವೇತಾಗೌಡ ಬಳಸಿಕೊಂಡು ಚಿನ್ನಾಭರಣ ಖರೀದಿಸಿದ್ದಾಳೆ. ಇದರಲ್ಲಿ ನನ್ನದು ಎಳ್ಳಷ್ಟು ಪಾತ್ರವಿಲ್ಲ ಎಂದು ಹೇಳಿದ್ದಾರೆ.
ವರ್ತೂರು-ಶ್ವೇತಾ ಅಂಗಡಿಗೆ ಬಂದಿದ್ದರು: ವರ್ತಕ
ಮತ್ತೂಂದೆಡೆ ಜ್ಯುವೆಲ್ಲರಿ ಮಳಿಗೆ ಮಾಲಿಕ ಸಂಜಯ್ ಬಾಪ್ನಾ, ಆಭರಣ ವ್ಯಾಪಾರ ಮಾಡ ಬೇಕು ಎಂದು ಹೇಳಿ ಶ್ವೇತಾಗೌಡ ಒಡವೆ ಖರೀದಿಸಿ ದ್ದರು. ಮೊದಲ ಬಾರಿಗೆ ಆಭರಣ ಖರೀದಿಸಲು ನಮ್ಮ ಅಂಗಡಿಗೆ ಬಂದಾಗ ಶ್ವೇತಾಗೌಡ ಜತೆ ವರ್ತೂರು ಪ್ರಕಾಶ್ ಅವರು ಇದ್ದರು. ಅಂದು ಅಲ್ಪ ಪ್ರಮಾಣದ ಚಿನ್ನ ಖರೀದಿಸಿ ನಮಗೆ ಶ್ವೇತಾ ಪರಿಚಯವಾದರು. ಮೊದಲು ಚಿನ್ನ ಖರೀದಿಸಿದಾಗ ಶ್ವೇತಾಗೌಡ ಹಣ ಪಾವತಿಸಿದ್ದಳು. ನಮಗೂ ಸಹ ಬ್ಯುಸಿನೆಸ್ ಅನ್ನು ಆಕೆ ಮಾಡಿಕೊಟ್ಟಿದ್ದರು. ಆದರೆ ಸುಮಾರು 2 ಕೋಟಿ ರೂ. ಮೌಲ್ಯದ 2.950 ಗ್ರಾಂ ಆಭರಣ ಖರೀ ದಿ ಸಿದ ಬಳಿಕ ಆಕೆ ಹಣ ಪಾವತಿಸ ಲಿಲ್ಲ. ಈ ಹಣದ ಬಗ್ಗೆ ವಿಚಾರಿಸಿದಾಗ ಏನಾದರೂ ಸಬೂಬು ಹೇಳಿ ಆಕೆ ತಪ್ಪಿಸಿಕೊಳ್ಳುತ್ತಿದ್ದರು. ಹಲವು ಬಾರಿ ಅಂಗಡಿಗೆ ಬಂದು ಆಕೆ ಚಿನ್ನ ಖರೀದಿಸಿದ್ದು, ಒಂದು ಬಾರಿ ವರ್ತೂರು ಪ್ರಕಾಶ್ ಅವರ ಮನೆಗೆ ಒಡವೆಯನ್ನು ನಮ್ಮ ಅಂಗಡಿಯ ಮಾರಾಟ ವಿಭಾಗದ ಸಿಬ್ಬಂದಿ ಹೋಗಿ ಕೊಟ್ಟಿದ್ದ. ಆದರೆ ತಮ್ಮ ಮನೆಗೆ ಆಭರಣ ಕೊಟ್ಟಾಗ ವರ್ತೂರು ಪ್ರಕಾಶ್ ಅವರು ಮನೆಯಲ್ಲಿ ಇರಲಿಲ್ಲ ಎಂದರು.
ವರ್ತೂರು ಪ್ರಕಾಶ್ ನಂಬರ್ ಅನ್ನು “ಗುಲಾಬ್ ಜಾಮೂನು’ ಎಂದು ಸೇವ್ ಮಾಡಿದ್ದ ಶ್ವೇತಾ:
ಫೇಸ್‌ಬುಕ್ ಮೂಲಕ ವರ್ತೂರು ಪ್ರಕಾಶ್ ಮತ್ತು ಶ್ವೇತಾಗೌಡ ಪರಸ್ಪರ ಪರಿಚಯವಾಗಿದ್ದಾರೆ. ಬಳಿಕ ಮೊಬೈಲ್ ನಂಬರ್ ಬದಲಾಯಿಸಿಕೊಂಡು ಮಾತನಾಡುತ್ತಿದ್ದರು. ವರ್ತೂರು ಪ್ರಕಾಶ್ ಅವರ ನಂಬರ್ ಅನ್ನು ಗುಲಾಬ್ ಜಾಮೂನು ಎಂದು ಸೇವ್ ಮಾಡಿಕೊಂಡಿದ್ದಳು. ಇಬ್ಬರೂ ಹಲವು ಬಾರಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಬಂದಿದ್ದಾರೆ. ಜತೆಗೆ ವರ್ತೂರು ಪ್ರಕಾಶ್‌ಗೆ ಶ್ವೇತಾ ಗೌಡ ಒಂದು ಉಂಗುರ ಗಿಫ್ಟ್ ನೀಡಿದ್ದಳು. ಅದರ ಫೋಟೋವನ್ನು ಇಟ್ಟುಕೊಂಡು ಇಬ್ಬರಿಗೂ ವಿವಾಹ ನಿಶ್ಚಯ ಆಗಿರುವ ರೀತಿ ಕ್ರಿಯೇಟ್ ಮಾಡಿದ್ದಳು. ಶ್ವೇತಾ ಮೊಬೈಲ್‌ನಲ್ಲಿ ಹಲವು ಫೋಟೋಗಳು ಸಿಕ್ಕಿವೆ. 3 ಚಿನ್ನದ ಅಂಗಡಿ ಮಾಲಿಕರ ಜ್ಯುವೆಲ್ಲರಿ ಶಾಪ್‌ಗೆ ಶ್ವೇತಾ ಜತೆ ವರ್ತೂರು ಪ್ರಕಾಶ್ ಹೋಗಿರುವುದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ವರ್ತೂರು ಪುತ್ರನಿಗೂ ನೋಟಿಸ್:
ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಪುತ್ರನ ಜತೆಗೂ ಆರೋಪಿ ಮಹಿಳೆಯು ಸುತ್ತಾಟ ನಡೆಸಿರುವುದು ಗೊತ್ತಾಗಿದೆ. ಹೀಗಾಗಿ ವಿಚಾರಣೆಗೆ ಬರುವಂತೆ ಅವರಿಗೂ ಪೊಲೀಸ್ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಕೊಟ್ಟ ಗಿಫ್ಟ್ ಪೊಲೀಸರಿಗೆ ವಾಪಸ್:
ಆರೋಪಿ ಮಹಿಳೆ ನೀಡಿದ್ದ ಚಿನ್ನದ ಉಡುಗೊರೆಗಳನ್ನು ವರ್ತೂರು ಪ್ರಕಾಶ್ ಪೊಲೀಸರಿಗೆ ಒಪ್ಪಿಸಿದ್ದಾರೆ. ನಗದು, 100 ಗ್ರಾಂ ಚಿನ್ನಾಭರಣ, 1 ಉಂಗುರ ವಾಪಸ್ ನೀಡಿದ್ದಾರೆ. ಅದರ ಲೆಕ್ಕ ಮೌಲ್ಯ ಅಂದಾಜಿಸಲಾಗುತ್ತಿದೆ. ವಾಪಸ್ ನೀಡಿದ ಚಿನ್ನವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.