ಹೊಸದಿಲ್ಲಿ: ರಾಜ್ಯದ ಮೈತ್ರಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡ್ಯಾನಿಶ್ ಅಲಿ ಅವರು ಬಹುಜನ ಸಮಾಜವಾದಿ ಪಕ್ಷದ ಲೋಕಸಭಾ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು ಡ್ಯಾನಿಶ್ ಅಲಿ ಅವರಿಗೆ ಭಾನುವಾರ ನಾಯಕತ್ವ ವಹಿಸಿದ್ದಾರೆ.
ಸಹೋದರ ಆನಂದ್ ಕುಮಾರ್ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಯಾವತಿ ನೇಮಿಸಿದ್ದಾರೆ. 24 ರ ಹರೆಯದ ತಮ್ಮನ ಮಗ ಆಕಾಶ್ ಆನಂದ್ ಮತ್ತು ರಾಮ್‌ಜಿ ಗೌತಮ್ ಅವರನ್ನು ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿದ್ದಾರೆ.
ಜೆಡಿಎಸ್‌ನಲ್ಲಿದ್ದ ಡ್ಯಾನಿಶ್ ಅಲಿ ರಾಜ್ಯಸಭಾ ಸದಸ್ಯರಾಗಿದ್ದರು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಅನುಮತಿ ಪಡೆದು ಬಿಎಸ್‌ಪಿ ಸೇರಿ ಅವ್ರೋಹಾ ಕ್ಷೇತ್ರದಲ್ಲಿ ಬಿಎಸ್‌ಪಿ-ಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು.
ಬಿಎಸ್‌ಪಿ 10 ಲೋಕಸಭಾ ಸದಸ್ಯರನ್ನು ಹೊಂದಿದೆ.