Advertisement

ಕಾಂಗ್ರೆಸ್‌ ಮಾಜಿ ಶಾಸಕಿ ಶಕುಂತಲಾ ಖಾತಿಕ್‌ ಗೆ ಜೈಲು

09:51 AM Dec 02, 2019 | Team Udayavani |

ಭೋಪಾಲ್‌: 2017ರಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚುವಂತೆ ತಮ್ಮ ಬೆಂಬಲಿಗರಿಗೆ ಪ್ರೇರೇಪಣೆ ನೀಡಿದ್ದ ಕಾರಣಕ್ಕಾಗಿ, ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕರೇರಾ ವಿಧಾನಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್‌ ಶಾಸಕಿ ಶಕುಂತಲಾ ಖಾತಿಕ್‌ವರಿಗೆ ಭೋಪಾಲ್‌ನ ಜಿಲ್ಲಾ ನ್ಯಾಯಾಲಯ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿದೆ.

Advertisement

2017ರಲ್ಲಿ ಮಧ್ಯಪ್ರದೇಶದ ಮಂಡಸಾರ್‌ನಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಗೋಲಿಬಾರ್‌ ನಡೆದಿತ್ತು. ಆ ಘಟನೆಗೆ ಪ್ರತೀಕಾರವಾಗಿ, ಸ್ಥಳೀಯ ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದ ಶಕುಂತಲಾ, ಆ ವೇಳೆ, ಠಾಣೆಯೊಳಗೆ ನುಗ್ಗಿ ಅಲ್ಲಿದ್ದ ಠಾಣಾಧಿಕಾರಿ ಸಂಜೀವ್‌ ತಿವಾರಿ ಹಾಗೂ ಸಿಬಂದಿಯನ್ನು ಥಳಿಸಿದ್ದೇ ಅಲ್ಲದೆ, ಠಾಣೆಗೆ ಬೆಂಕಿಯಿಡಲು ತಮ್ಮೊಂದಿಗಿದ್ದ ಪ್ರತಿಭಟನಾಕಾರರಿಗೆ ಪ್ರಚೋದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next