Advertisement

ರಾಜ್ಯಸಭೆ ಸೆಕ್ರೆಟರಿ-ಜನರಲ್‌ ಹುದ್ದೆಗೆ ಪಿ.ಸಿ ಮೋದಿ ನೇಮಕ

07:25 PM Nov 12, 2021 | Team Udayavani |

ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯ ನಿವೃತ್ತ ಮುಖ್ಯಸ್ಥ ಪಿ.ಸಿ.ಮೋದಿ ಅವರು ರಾಜ್ಯ ಸಭೆಯ ಸೆಕ್ರೆಟರಿ-ಜನರಲ್‌ ಆಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

Advertisement

ಶುಕ್ರವಾರವಷ್ಟೇ ಮೋದಿ ಅವರನ್ನು ಹುದ್ದೆಗೆ ನೇಮಕ ಮಾಡಿ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು  ಆದೇಶ ಹೊರಡಿಸಿದ್ದರು. ಹಾಲಿ ಸೆಕ್ರೆಟರಿ ಜನರಲ್‌ ಪಿ.ಪಿ.ಕೆ.ರಾಮಾಚಾರ್ಯಲು ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಈ ಬಗ್ಗೆ ಯಾವುದೇ ಕಾರಣಗಳನ್ನು ನೀಡಲಾಗಿಲ್ಲ. ಅವರನ್ನು ಸೆ.1ರಂದು ನೇಮಿಸಲಾಗಿತ್ತು.

ನ.29ರಿಂದ ಸಂಸತ್‌ನ ಚಳಿಗಾಲದ ಅಧಿವೇಶನ ಶುರುವಾಗಲಿರುವಂತೆಯೇ ಈ ನೇಮಕ ನಡೆದಿದೆ. ಮೋದಿ ಅವರು ನ.12ರಿಂದ 2022ರ ಆ.10ರ ವರೆಗೆ ಹುದ್ದೆಯಲ್ಲಿ ಇರಲಿದ್ದಾರೆ. 1982ನೇ ಸಾಲಿನ ಭಾರತೀಯ ಕಂದಾಯ ಸೇವೆ (ಐಆರ್‌ಎಸ್‌) ಅಧಿಕಾರಿಯಾಗಿ ಪ್ರಮೋದ್‌ ಚಂದ್ರ ಮೋದಿ (ಪಿ.ಸಿ) ಸಿಬಿಡಿಟಿ ಮುಖ್ಯಸ್ಥರಾಗಿ ನಿವೃತ್ತಿಯಾಗಿದ್ದಾರೆ. ಈ ಕ್ರಮದ ಬಗ್ಗೆ ಕಾಂಗ್ರೆಸ್‌ ಸಂಸದ ಜೈರಾಮ್‌ ರಮೇಶ್‌ ಆಕ್ಷೇಪ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next