ಪಾಟ್ನಾ: ಸುಮಾರು ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಶಾಸಕ ರಂಜನ್ ತಿವಾರಿಯನ್ನು ಭಾರತ-ನೇಪಾಳ ಗಡಿ ಸಮೀಪದ ರಕ್ಸೌಲ್ ನಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮುಂಬೈ: ಬೊರಿವಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ರಕ್ಷಣಾ ಕಾರ್ಯಾಚರಣೆ
1998ರಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪಿ ಶಾಸಕ ರಂಜನ್ ವಾಂಟೆಡ್ ಪಟ್ಟಿಯಲ್ಲಿದ್ದು, ಈತನ ಕುರಿತು ಮಾಹಿತಿ ಕೊಟ್ಟವರಿಗೆ 25 ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು.
ಬಿಹಾರ ಮತ್ತು ಉತ್ತರಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ರಂಜನ್ ನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಉತ್ತರಪ್ರದೇಶದ ಗೋರಖ್ ಪುರ್ ನಲ್ಲಿ ಪಶ್ಚಿಮ ಬಿಹಾರದ ಜಂಪಾರಣ್ ಜಿಲ್ಲೆಯ ಗೋವಿಂದ್ ರಾಜ್ ಕ್ಷೇತ್ರದ ಮಾಜಿ ಶಾಸಕ ಪೊಲೀಸರ ಮೇಲೆ ಸಾರ್ವಜನಿಕವಾಗಿ ಗುಂಡು ಹಾರಿಸಿದ್ದ.
ಹೀಗೆ ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ರಂಜನ್ ಗಾಗಿ ಪೊಲೀಸ್ ಇಲಾಖೆ ಮಾಹಿತಿ ಕಲೆ ಹಾಕುತ್ತಿತ್ತು. ಪ್ರಾಥಮಿಕ ಕಾನೂನು ಪ್ರಕ್ರಿಯೆ ನಂತರ ರಂಜನ್ ನನ್ನು ಉತ್ತರಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿ ವಿವರಿಸಿದೆ.