Advertisement
2011ರ ವಿಶ್ವಕಪ್ ಬಳಿಕ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ನಾಯಕನಾಗಲು ಆಯ್ಕೆ ಸಮಿತಿ ಬಯಸುತ್ತಿರಲಿಲ್ಲ.
Related Articles
Advertisement
ಧೋನಿ ಅವರನ್ನು ತೆಗೆದುಹಾಕಲು ಕಾರಣ?28 ವರ್ಷಗಳ ಬಳಿಕ ಭಾರತ ವಿಶ್ವಕಪ್ ಗೆದ್ದಿತ್ತು. ಆದರೆ ಬಳಿಕ ನಾವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡೆವು. ಆದ್ದರಿಂದ ಆಯ್ಕೆ ಸಮಿತಿ ಸಭೆಯಲ್ಲಿ ಧೋನಿ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲು ಒತ್ತಾಯಗಳು ಕೇಳಿಬಂದಿದ್ದವು. ಆದರೆ ನಾನು ಅದಕ್ಕೆ ಸೊಪ್ಪು ಹಾಕಿಲ್ಲ. ನೀವು ಅವರನ್ನು ಏಕದಿನ ತಂಡದ ನಾಯಕತ್ವದಿಂದ ಹೇಗೆ ತೆಗೆದು ಹಾಕುತ್ತೀರಿ? ಎಂದು ಪ್ರಶ್ನಿಸಿದ್ದೆ ಎಂದರು. ಧೋನಿಯನ್ನು ನಾಯಕತ್ವ ಸ್ಥಾನದಿಂದ ತೆಗೆದುಹಾಕಲು ಅವರಲ್ಲಿ ಬಲವಾದ ಕಾರಣಗಳು ಇರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಧೋನಿ ಅವರ ಬದಲಿ ಯಾರು ಎಂಬುದಕ್ಕೆ ಆಯ್ಕೆದಾರರು ಯೋಚಿಸಿರಲಿಲ್ಲ ಎಂದರು. ಬಿಸಿಸಿಐನ ಹಳೆಯ ಸಂವಿಧಾನದ ಪ್ರಕಾರ, ತಂಡವನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯು ಮಂಡಳಿಯ ಅಧ್ಯಕ್ಷರ ಅನುಮೋದನೆ ಪಡೆಯಬೇಕಾಗಿತ್ತು. ಆದರೆ ಲೋಧಿ ಸಮಿತಿಯ ಶಿಫಾರಸುಗಳು ಜಾರಿಗೆ ಬಂದ ಬಳಿಕ ಆಯ್ಕೆ ಪ್ರಕರಣದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಹಕ್ಕನ್ನು ಮುಖ್ಯ ಆಯ್ಕೆಗಾರನಿಗೆ ನೀಡಲಾಗಿತ್ತು. ಇದೀಗ ಶ್ರೀನಿವಾಸನ್ ಅವರ ಈ ಹೇಳಿಕೆಯು ಧೋನಿ ಅವರನ್ನು 2011ರಲ್ಲಿ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕುವ ಯೋಚನೆಯಲ್ಲಿ ಬಿಸಿಸಿಐ ಹೊಂದಿತ್ತು ಎಂಬ ಊಹಾಪೋಹಗಳನ್ನು ಖಚಿತಪಡಿಸುತ್ತದೆ. ಬಿಸಿಸಿಐ ಅಧ್ಯಕ್ಷರಾಗಿ ಮತ್ತು ಐಪಿಎಲ್ ಚೆನ್ನೆç ಸೂಪರ್ ಕಿಂಗ್ಸ್ ಮಾಲಕರಾಗಿದ್ದ ಶ್ರೀನಿವಾಸನ್ ಅವರು ಮಧ್ಯಪ್ರವೇಶಿಸಿ ಧೋನಿ ನಾಯಕತ್ವವನ್ನು ಉಳಿಸಿದ್ದನ್ನು ಇದು ಖಚಿತಪಡಿಸುತ್ತದೆ. ಬಳಿಕದ ಬೆಳವಣಿಗೆಯಲ್ಲಿ ಮೊಹಿಂದರ್ ಅಮರನಾಥ್ ಅವರನ್ನು ಆಯ್ಕೆ ಸಮಿತಿಯಿಂದ ತೆಗೆದುಹಾಕಲಾಗಿತ್ತು. ಯಾಕೆಂದರೆ ಅವರು ಶ್ರೀಕಾಂತ್ ಅವರನ್ನು ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲು ತೆರೆಮರೆಯಲ್ಲಿ ಕೆಲಸಮಾಡುತ್ತಿದ್ದರು. ಆ ಸಮಯದಲ್ಲಿ ಧೋನಿ ಅವರನ್ನು ನಾಯಕತ್ವದಿಂದ ತೆಗೆದುಹಾಕಬೇಕೆಂದು ಪ್ರತಿಪಾದಿಸುವವರ ಸಾಲಿನಲ್ಲಿ ಅಮರನಾಥ್ ಮುಂಚೂಣಿಯಲ್ಲಿದ್ದರು.