Advertisement

ವಿವಿಧ ಪಕ್ಷದ ಏಜೆಂಟರಿಗೆ ಇವಿಎಂ -ವಿವಿ ಪ್ಯಾಟ್‌ ಮಾಹಿತಿ

05:05 PM May 02, 2018 | |

ಸಂಡೂರು: ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರದಲ್ಲಿ ಎಲ್ಲಾ ಪಕ್ಷದ ಏಜೆಂಟರ್‌ಗಳಿಗೆ ಇವಿಎಂ ಮತ್ತು ವಿವಿ ಪ್ಯಾಟ್‌ಗಳ ಕುರಿತು ಚುನಾವಣಾ ಜನರಲ್‌ ವೀಕ್ಷಕ ಸೋಯಿಲ್‌ ಅಲಿ ಉಪಯುಕ್ತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್‌ ಎಚ್‌.ಎಂ.ರಮೇಶ್‌ ಮಾತನಾಡಿ, ಮತದಾನಕ್ಕೂ ಪೂರ್ವದಲ್ಲಿ ಎಲ್ಲಾ ಏಜೆಂಟರ್‌ಗಳಿಗೆ ಮತಯಂತ್ರಗಳ ಸೀಲ್‌ ಹೊಡೆಯುವುದು, ಅವುಗಳ ಕ್ರಮಬದ್ಧತೆ ಮತ್ತು ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತೇವೆ, ಅಲ್ಲದೇ ವಿವಿ ಪ್ಯಾಟ್‌ಗಳಲ್ಲಿ ಯಾವ ರೀತಿಯಾಗಿ ಮಾಹಿತಿ ಸಿಗುತ್ತದೆ ಎನ್ನುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

Advertisement

ಮತದಾನದ ದಿನದಂದು ಯಾವುದೇ ಕಾರಣಕ್ಕೂ ಗೊಂದಲ ಉಂಟು ಮಾಡಬಾರದು. ಅಲ್ಲದೇ ಸರಿಯಾದ ಸಮಯಕ್ಕೆ ಹಾಜರಾಗಿ ಪರಿಶೀಲಿಸಿಕೊಳ್ಳಬೇಕು. ತಡವಾಗಿ ಬಂದವರಿಗೆ ಮತ್ತೆ ತೋರಿಸುವುದಿಲ್ಲ. ಆದ್ದರಿಂದ ಇಂದು ನಿಮ್ಮ ಅನುಮಾನಗಳನ್ನು ಪರಿಶೀಲಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಜೆಡಿಎಸ್‌ ನಿಂದ ಗೌರೀಶ್‌, ಕಾಂಗ್ರೆಸ್‌ನಿಂದ ವಲಿಸಾಬ್‌, ಪಕ್ಷೇತರ ಅಭ್ಯರ್ಥಿ ಪರವಾಗಿ ಎಂ.ಅಂಜಿನಪ್ಪ, ಬಿಜೆಪಿಯಿಂದ ಎನ್‌.ಉಜ್ಜಿನಪ್ಪ , ಎಂಇಪಿಯಿಂದ ಶಬ್ಬೀರ್‌ ಹಾಗೂ ಚುನಾವಣಾಧಿಕಾರಿ ಜಿ.ಮುನಿಯಪ್ಪ ಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next