Advertisement

ಇವಿಎಂಗಿದೆ ರೋಚಕ ಇತಿಹಾಸ

12:56 PM Apr 18, 2019 | mahesh |

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ಇವಿಎಂಗಳು ಬೇಡವೇ ಬೇಡ ಎಂಬ ತರ್ಕ ಶುರುವಾಗಿತ್ತು. ಇದೀಗ ಮತ್ತೆ ಟಿಡಿಪಿ ಸೇರಿದಂತೆ ಹಲವು ಪ್ರತಿಪಕ್ಷಗಳು ಮತ್ತೆ ಸುಪ್ರೀಂಕೋರ್ಟ್‌ ಮೊರೆ ಹೋಗಲು ನಿರ್ಧರಿಸಿವೆ. ಹೀಗಾಗಿ ಇವಿಎಂಗಳ ಬಗೆಗಿನ ಪಕ್ಷಿ ನೋಟ ಇಲ್ಲಿದೆ.

  • ಇವಿಂ ವಿನ್ಯಾಸ:
    ಕಂಟ್ರೋಲ್‌ ಯೂನಿಟ್‌, ಬ್ಯಾಲೆಟ್‌ ಯೂನಿಟ್‌ ಎಂಬ 2ಉಪಕರಣಗಳು.

    Advertisement

    ಅದನ್ನು ಅಕ್ರಮವಾಗಿ ತಿರುಚಲು, ದುರ್ಬ ಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವುಗಳಲ್ಲಿ ಬಳಸಲಾಗುವ ಪ್ರೋಗ್ರಾಂಗಳನ್ನು ಬದಲಾಯಿ ಸಲು, ಅಕ್ರಮವಾಗಿ ತಿದ್ದಲು ಸಾಧ್ಯವಾಗದಂತೆ “ಒನ್‌ ಟೈಮ್‌ ಪ್ರೋಗ್ರಾಮೇಬಲ್‌’ (ಒಟಿಪಿ) ಮತ್ತು ಮ್ಯಾಸ್ಕ್ಡ್‌ ಚಿಪ್‌ನಲ್ಲಿ ಸಂಯೋಜಿತ ಗೊಳಿಸಲಾಗಿದೆ.

    ಅವುಗಳನ್ನು ಇತರ ಯಂತ್ರ, ಸಿಸ್ಟಮ್‌ಗೆ ಸಂಪರ್ಕಿಸಲು ಸಾಧ್ಯವಿಲ್ಲ. ಏಕೆಂದರೆ, ಇಂಟರ್‌ನೆಟ್‌ ಸಂಪರ್ಕ ಇರುವುದಿಲ್ಲ.

    ಹೆಚ್ಚಿನ ಸುರಕ್ಷತೆ:
    ಉನ್ನತ ದರ್ಜೆಯ ಭದ್ರತೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
    ಇವಿಎಂಗಳ ಪ್ರಾಥಮಿಕ ಹಂತದ ತಪಾಸಣೆ ನಡೆಯುತ್ತದೆ.
    ಈ ಪ್ರಕ್ರಿಯೆಗಳಲ್ಲಿ ಪಕ್ಷಗಳ ಪ್ರತಿನಿಧಿಗಳು ಭಾಗಿ ಯಾಗಿರುತ್ತಾರೆ. ಇವಿಎಂಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿರುತ್ತದೆ. ಯಾವ ಇವಿಎಂ ಯಾವ ಮತಗಟ್ಟೆಗೆ ಹಂಚಿಕೆಯಾ ಗಲಿದೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ.

ಅಣಕು ಮತದಾನ ಹೇಗಿರುತ್ತದೆ:
ತಾಂತ್ರಿಕತೆಯನ್ನು ಖಾತರಿಗೆ ಮತದಾನದ ದಿನ ಅಧಿಕೃತ ಮತದಾನ ಪ್ರಕ್ರಿಯೆ ಆರಂಭ ವಾಗುವ ಅರ್ಧ ಗಂಟೆ ಮೊದಲು ಅಭ್ಯರ್ಥಿ ಅಥವಾ ಅವರ ಏಜೆಂಟ್‌ ಸಮ್ಮುಖದಲ್ಲಿ 50 ಅಣಕು ಮತ ಗಳನ್ನು ಹಾಕಲಾಗುತ್ತದೆ. ಮತದಾನ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿದೆ ಎಂದು ಖಾತರಿಪಡಿಸಿಕೊಂಡ ಬಳಿಕ ಎಲ್ಲರ ಸಮ್ಮುಖದಲ್ಲಿ ಅಣಕು ಮತದಾನದ ದತ್ತಾಂಶ ಗಳನ್ನು ಅಳಿಸಿ ಹಾಕಲಾಗುತ್ತದೆ.

Advertisement

ತಕರಾರು ಇದ್ದಾಗ:
45: ಫ‌ಲಿತಾಂಶ ಪ್ರಕಟಗೊಂಡು ಇಷ್ಟು ದಿನಗಳ ಬಳಿಕ ತಕರಾರು ಅರ್ಜಿಗೆ ಅವಕಾಶ
nಇವಿಎಂ-ವಿವಿಪ್ಯಾಟ್‌ಗಳನ್ನು ವಿವಾದ ಇತ್ಯರ್ಥಗೊಳ್ಳುವ ವರೆಗೆ ಜಿಲ್ಲಾ ಚುನಾವಣಾಧಿಕಾರಿಗೆ ಒಪ್ಪಿಸಲಾಗುತ್ತದೆ.

ವಿವಿಪ್ಯಾಟ್‌ ಎಂದರೇನು?:
ಹಕ್ಕು ಚಲಾವಣೆಯ ನಂತರ ಅದು ಸರಿಯಾಗಿದೆಯೇ ಎಂದು ಪರಿಶೀಲಿಸಲು “ಮತದಾರ ಪರಿಶೀಲಿಸಬಹುದಾದ ಕಾಗದ ಲೆಕ್ಕಪರಿಶೋಧನಾ ಪರೀಕ್ಷೆ (ವಿವಿಪಿಎಟಿ)’
ಬ್ಯಾಲೆಟ್‌ ಯುನಿಟ್‌ನಲ್ಲಿ ಮತ ಹಾಕಿದ ಬಳಿಕ ಕಂಟ್ರೋಲ್‌ ಯುನಿಟ್‌ನಲ್ಲಿ ಅಭ್ಯರ್ಥಿ ಹೆಸರು, ಚಿಹ್ನೆ ಇರುವ ಚೀಟಿ ಕಾಣುತ್ತದೆ.
ಸುಪ್ರೀಂ ಕೋರ್ಟ್‌ನಿಂದಲೂ ಒಪ್ಪಿಗೆ.

ಕೋರ್ಟ್‌ ತೀರ್ಪುಗಳು:
ಇವಿಎಂ ಪರವಾಗಿ ಮದ್ರಾಸ್‌, ಕರ್ನಾಟಕ, ಕೇರಳ, ಬಾಂಬೆ, ಮಧ್ಯಪ್ರದೇಶ ಹೈಕೋರ್ಟ್‌ ಗಳೂ ತೀರ್ಪು ನೀಡಿವೆ.
1999ರಲ್ಲಿ ಕರ್ನಾಟಕ ಹೈಕೋರ್ಟ್‌ ತೀರ್ಪು ಪ್ರಕಾರ “ಈ ಆವಿಷ್ಕಾರವು ವಿದ್ಯುನ್ಮಾನ ಮತ್ತು ಗಣಕ ಯಂತ್ರ ತಂತ್ರಜಾnನ ಕ್ಷೇತ್ರದಲ್ಲಿ ನಿಸ್ಸಂದೇಹವಾಗಿಯೂ ಬಹು ದೊಡ್ಡ ಸಾಧನೆ, ಇದೊಂದು ರಾಷ್ಟ್ರವು ಹೆಮ್ಮೆ ಪಡುವ ವಿಷಯವಾಗಿದೆ’.

ಅನುಮಾನ ಪರಿಹರಿಸಲು ಅವಕಾಶ:
ಈ ವ್ಯವಸ್ಥೆಯಲ್ಲಿ ಮತ ಚಲಾಯಿಸಿದ ಬಳಿಕ ಅನುಮಾನ ಉಂಟಾದರೆ ಎರಡನೇ ಬಾರಿಗೆ ಮತ ಹಾಕಲು ಅವಕಾಶ ನೀಡಲಾಗುತ್ತದೆ. ಮತದಾರ ನಿಗೆ ಅದನ್ನು ಕೇಳಲು ಅಧಿಕಾರ ಉಂಟು.
ಚುನಾವಣಾ ಕಾಯ್ದೆ 1961ರ ಸೆಕ್ಷನ್‌ 49 (ಎಂ) ಪ್ರಕಾರ ಎರಡನೇ ಬಾರಿಗೆ ಮತ ಹಾಕಲು ಅವಕಾಶ ನೀಡಬಹುದು.
ಅನುಮಾನ ಸುಳ್ಳಾದರೆ ಆತನಿಗೆ ಐಪಿಸಿ ಸೆಕ್ಷನ್‌ 170ರ ಪ್ರಕಾರ 6 ತಿಂಗಳು ಜೈಲು ಶಿಕ್ಷೆ.

07 ಇಷ್ಟು ನಿಮಿಷಗಳ ಕಾಲ ವೀಕ್ಷಣೆ ಸಾಧ್ಯ
2013 ವಿವಿಪ್ಯಾಟ್‌ ಬಳಕೆಗೆ ಅನುಮೋದನೆ
2000 ಪಕ್ಷಗಳ ಜತೆಗಿನ ಸಮಾಲೋಚನೆ ಬಳಿಕ ಪಾರದರ್ಶಕತೆಗಾಗಿ ಈ ವ್ಯವಸ್ಥೆ ಜಾರಿ
18 ಇಷ್ಟಕ್ಕೂ ಅಧಿಕ ದೇಶಗಳಲ್ಲಿದೆ ಬಳಕೆ

ಇವಿಎಂ ಇತಿಹಾಸ
40 ಸದ್ಯದ ಇವಿಎಂಗೆ ವರ್ಷದ ಹಿನ್ನೆಲೆ
1977 ಮೊದಲ ಬಾರಿಗೆ ಚರ್ಚೆ
1983 ಮೊದಲ ಬಾರಿಗೆ ಬಳಕೆ
2018 ಮತಪತ್ರದ ಚುನಾವಣಾ ವ್ಯವಸ್ಥೆ ಅರ್ಜಿ ತಿರಸ್ಕರಿಸಿದ ಸುಪ್ರೀಂ
1980-81 ಇಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾ, ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಿಂದ ಇವಿಎಂ ತಯಾರಿಕೆ
1984 ಜನ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರದ ಹೊರತು ಬಳಕೆ ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌
1990 ಏಪ್ರಿಲ್‌ ಚುನಾವಣಾ ಸಮಿತಿಯ ತಾಂತ್ರಿಕ ಸಮಿತಿ ಇವಿಎಂ ಸುರಕ್ಷಿತ ಎಂದು ಸ್ಪಷ್ಟನೆ
1989 ಜನ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ
1990 ಜನವರಿ ಕೇಂದ್ರದಿಂದ ರಾಜಕೀಯ ಪಕ್ಷಗಳ ಚುನಾವಣಾ
ಸುಧಾರಣಾ ಸಮಿತಿ ರಚನೆ
2000 ಈ ವರ್ಷದ ಬಳಿಕ ಎಲ್ಲಾ ಚುನಾ ವಣೆಗೆ ಹೆಚ್ಚಿನ ಸಂದರ್ಭಗಳಲ್ಲಿ ಇವಿಎಂ ಬಳಕೆ

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next