Advertisement

EVM ತಿರುಚುವಿಕೆ: ಮತ್ತೆ ಮತ ಪತ್ರ ಬಳಕೆಗೆ ಕೇಜ್ರಿ, ಕೈ ನಾಯಕರ ಆಗ್ರಹ

05:40 PM Apr 01, 2017 | udayavani editorial |

ಹೊಸದಿಲ್ಲಿ : ಈಚಿನ ಪಂಚರಾಜ್ಯ ಚುನಾವಣೆಗಳಲ್ಲಿ ಮತ ಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪಗಳಿಗೆ ಕಳವಳ ವ್ಯಕ್ತಪಡಿಸಿರುವ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಮತ್ತು ಕಾಂಗ್ರೆಸ್‌ ನಾಯಕರನ್ನು ಒಳಗೊಂಡ ನಿಯೋಗವೊಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಝಾಯಿದಿ ಅವರನ್ನು ಭೇಟಿಯಾಗಿ ತಿರುಚುವಿಕೆಯಿಂದ ಮಕ್ತವಾಗಿರುವ ಚುನಾವಣೆಗಳನ್ನು ಆಗ್ರಹಿಸಿದ್ದಾರೆ. 

Advertisement

“ಆರಂಭದಿಂದಲೇ ನಾನು ವಿದುನ್ಮಾನ ಮತ ಯಂತ್ರ (ಇವಿಎಂ)ಗಳನ್ನು ನಂಬುತ್ತಿರಲಿಲ್ಲ. ಇಡಿಯ ಜಗತ್ತೇ ಚುನಾವಣೆಗೆ ಮತ ಪತ್ರಗಳನ್ನು ಬಳಸುತ್ತಿರುವಾಗ ನಾವು ಕೂಡ ಮತಪತ್ರಗಳನ್ನು ಬಳಸುವುದಕ್ಕೆ ಏನು ತೊಂದರೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರೆ. 

ಇದಕ್ಕೆ ಮೊದಲು ಆಮ್‌ ಆದ್ಮಿ ಪಕ್ಷ ಪಂಜಾಬ್‌ನಲ್ಲಿ ಮತ ಯಂತ್ರಗಳನ್ನು ತಿರುಚಲಾಗಿದೆ ಎಂಬ ಬಗ್ಗೆ ಚುನಾವಣಾ ಆಯೋಗವನ್ನು ಸಂಪರ್ಕಿಸಿ ವಿವಿಪಿಟಿ ಯಂತ್ರಗಳ ಮೂಲಕ ಕೊಡಲಾಗಿರುವ ಮತದಾನದ ಚೀಟಿಗಳನ್ನು ಚುನಾವಣಾ ಫ‌ಲಿತಾಂಶಗಳೊಂದಿಗೆ ತಾಳೆ ಹಾಕಲು ಆಗ್ರಹಿಸಿತು. 

ಸಭೆಯ ಬಳಿಕ ಆಪ್‌ ನಾಯಕ ರಾಘವ ಛಡ್ಡಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಕ್ಷವು ಬೂತ್‌ ಮಟ್ಟದ ಮತದಾನದ ನಮೂನೆಯ ಬಗ್ಗೆ ನಡೆಸಿದ ಪ್ರಾಥಮಿಕ ವಿಶ್ಲೇಷಣೆಯು ಇವಿಎಂ ತಿರುಚುವಿಕೆ ನಡೆದಿರುವುದನ್ನು ತೋರಿಸಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next