Advertisement

ನನ್ನದೂ ಸೇರಿ ಎಲ್ಲರ ಫೋನ್‌ ಟ್ಯಾಪ್‌ ಆಗಿದೆ: ಶಾಮನೂರು

11:23 PM Sep 15, 2019 | Lakshmi GovindaRaju |

ದಾವಣಗೆರೆ: “ನಾಡಿನ ಸ್ವಾಮೀಜಿಗಳ ಫೋನ್‌ ಅಷ್ಟೇ ಅಲ್ಲ, ನನ್ನದೂ ಒಳಗೊಂಡಂತೆ ಎಲ್ಲರ ಫೋನ್‌ ಟ್ಯಾಪಿಂಗ್‌ ಆಗಿದೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿದರು. ಭಾನುವಾರ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಶರನ್ನವರಾತ್ರಿ ಧರ್ಮ ಸಮ್ಮೇಳನದ ಮಹಾ ಮಂಟಪದ ಹಂದರಗಂಬ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, “ಒಕ್ಕಲಿಗರ ಸ್ವಾಮೀಜಿ ಮಾತ್ರವಲ್ಲ, ರಂಭಾಪುರಿ ಸ್ವಾಮೀಜಿಯವರ ಫೋನ್‌ ಕೂಡ ಟ್ಯಾಪಿಂಗ್‌ ಆಗಿದೆ ಎಂದು ಹೇಳುತ್ತಾರೆ.

Advertisement

ರಿಯಲ್‌ ಎಸ್ಟೇಟ್‌ನವರ ಫೋನ್‌ ಟ್ಯಾಪಿಂಗ್‌ ಮಾಡುವುದರಿಂದ ಏನಾದರೂ ಸಿಗುತ್ತದೆ. ಸ್ವಾಮೀಜಿಗಳ ಫೋನ್‌ ಟ್ಯಾಪಿಂಗ್‌ನಿಂದ ಏನೂ ಸಿಗುವುದಿಲ್ಲ’ ಎಂದರು. ನಮ್ಮದೂ ಫೋನ್‌ ಟ್ಯಾಪಿಂಗ್‌ ಮಾಡಲಾಗಿದೆ. ಅದಕ್ಕೆ ಏನು ಮಾಡಲಾಗಲ್ಲ. ಫೋನ್‌ ಟ್ಯಾಪಿಂಗ್‌ ಮಾತ್ರ ಅಲ್ಲ, ಐಟಿ ರೇಡ್‌ ಸಹ ಆಗಿದೆ. ಯಾರು ಏನು ಮಾಡಲಿಕ್ಕಾಗುತ್ತದೆ? ಎಂದರು.

Advertisement

Udayavani is now on Telegram. Click here to join our channel and stay updated with the latest news.

Next