Advertisement

ಪಾರದರ್ಶಕ ಚುನಾವಣೆಗೆ ಎಲ್ಲರೂ ಶ್ರಮಿಸಿ

05:46 PM Nov 23, 2020 | Suhan S |

ಮಂಡ್ಯ: ಪಾರದರ್ಶಕ ಚುನಾವಣೆಗೆ ಬಿಎಲ್‌ಒಗಳು ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ನಿರ್ವಹಿಸಬೇಕು. ಗ್ರಾಮಮಟ್ಟದ ಕಣ್ಣು, ಕಿವಿಯಾಗಿರುವ ಬಿಎಲ್‌ಒಗಳು ಚುರುಕಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಡೀಸಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

Advertisement

ನಗರದ ಡಾ.ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಉಪವಿಭಾಗಾಧಿಕಾರಿಗಳ ಕಚೇರಿ, ತಾಲೂಕುದಂಡಾಧಿಕಾರಿಗಳ ಕಚೇರಿಯಿಂದ ನಡೆದ ಮತಗಟ್ಟೆಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ವಿಶ್ವದಲ್ಲೇ ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. 75 ವರ್ಷದಿಂದ ಭಾರತ ಪ್ರಜಾಪ್ರಭುತ್ವ ಸ್ಥಿರವಾಗಿದೆ ಎಂದರೆ ಅದಕ್ಕೆ ಕಾರಣ ಕಾಲಕಾಲಕ್ಕೆನಡೆಯುತ್ತಿರುವ ಮುಕ್ತ, ನ್ಯಾಯಸಮ್ಮತ, ಪಾರದರ್ಶಕವಾದ ಚುನಾವಣೆ ಎಂದರು.

ದೋಷರಹಿತ ಮತದಾರರ ಪಟ್ಟಿ ಅವಶ್ಯ: ಪಾರದರ್ಶಕವಾದ ಚುನಾವಣೆ ನಡೆಯಬೇಕಾದರೆ ಪರಿಶುದ್ಧ, ದೋಷ ರಹಿತ ಮತದಾರರ ಪಟ್ಟಿ ಅವಶ್ಯ. ಮತದಾರರ ಪಟ್ಟಿ ತಯಾರಿಸುವ ಜವಾಬ್ದಾರಿಯುತ ಕೆಲಸವನ್ನು ಇಆರ್‌ಒ ಮತ್ತು ಎಆರ್‌ಒಗಳು, ಗ್ರಾಮ ಮಟ್ಟದಲ್ಲಿ ಬಿಎಲ್‌ಒಗಳ ಕಾರ್ಯವಾಗಿದೆ. ಯಾರು ದಕ್ಷತೆಯಿಂದ, ನಿಷ್ಪಕ್ಷಪಾತ, ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಾರೋ ಅವರಿಗೆ ಮಾತ್ರ ಸಂವಿಧಾನಾತ್ಮಕ ಹುದ್ದೆಯನ್ನು ಸರ್ಕಾರ ನೀಡುತ್ತದೆ. ಜವಾಬ್ದಾರಿಯುತ ಕೆಲಸವನ್ನು ಬಿಎಲ್‌ಒಗಳು ನಿಭಾಯಿಸಬೇಕು ಎಂದು ಹೇಳಿದರು.

ನಕಲಿ ಮತದಾರರಿಗೆ ಅವಕಾಶ ಬೇಡ: ನಮೂನೆ-6ರಲ್ಲಿ ಮತದಾರರ ಪಟ್ಟಿಯ ಸೇರ್ಪಡೆ ಕಾಲಾನುಕಾಲಕ್ಕೆ ಸಮರ್ಪಕವಾಗಿದ್ದರೆ ಮತದಾರರ ಪಟ್ಟಿ ಪರೀಕ್ಷಿತಗೊಳಿಸಲು ಮತ್ತು ದೋಷ ರಹಿತಗೊಳಿಸಲು ಸಾಧ್ಯವಿದೆ. ಬಿಎಲ್‌ಒಗಳು ಚುನಾವಣಾ ಆಯೋಗ ನೀಡುವ ನಿರ್ದೇಶನ, ಜವಾಬ್ದಾರಿಗಳನ್ನು ಕಾಲಕಾಲಕ್ಕೆ ತಿಳಿದುಕೊಳ್ಳಬೇಕು. ಗ್ರಾಮ ಮಟ್ಟದಲ್ಲಿ ಮರಣ ಹೊಂದಿದ ವ್ಯಕ್ತಿಗಳ ಪಟ್ಟಿಯನ್ನು ತೆಗೆದುಕೊಂಡು ನಮೂನೆ-17ರಲ್ಲಿ ಅವರನ್ನು ಮತದಾರರ ಪಟ್ಟಿಯಿಂದ ರದ್ದುಗೊಳಿಸಬೇಕು. ಇಲ್ಲದಿದ ªರೆ ನಕಲಿ ಮತದಾರರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದಕ್ಕೆ ಬಿಎಲ್‌ ಒಗಳು ಅನುವು ಮಾಡಿಕೊಡಬಾರದು ಎಂದು ಹೇಳಿದರು.

ಎರಡು ಕಡೆ ಹೆಸರಿದ್ದರೆ ಅಪರಾಧ: ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಸೆಕ್ಷನ್‌ ಐಪಿಸಿ 180, 189, 190ರಂತೆ ಮತಪಟ್ಟಿಯಲ್ಲಿ ಎರಡು ಕಡೆ ಹೆಸರಿದ್ದರೆ ಅಪರಾಧ.6ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಿದೆ. ಆದ್ದರಿಂದ ಪುನರಾವರ್ತನೆಗೊಂಡಿರುವ ಮತದಾರರನ್ನು ತೆಗೆದು ಹಾಕಬೇಕು. ಮತದಾರರ ಪಟ್ಟಿಯಲ್ಲಿ ಕೆಲವು ವ್ಯಕ್ತಿಗಳ ಭಾವಚಿತ್ರ, ಹೆಸರಿನ ಅಕ್ಷರ ದೋಷ, ವಯಸ್ಸು ಮತ್ತು ಲಿಂಗ, ತಪ್ಪಾಗಿರುವುದರಿಂದ ಅವುಗಳನ್ನು ಸರಿಪಡಿಸಲು ಯೋಜನೆ ರೂಪಿಸಿಕೊಳ್ಳಬೇಕು ಎಂದು ಸೂಚಿಸಿದರು.

Advertisement

ಸ್ಪೀಕಿಂಗ್‌ ಆರ್ಡರ್‌ ಮಾಡಿ: ವಿಶೇಷ ನೋಂದಣಿ ಪ್ರಕ್ರಿಯೆಯು ನಡೆಯುತ್ತಿದ್ದು, ನ.18ರಂದು ಕರಡು ಮತದಾರರ ಪಟ್ಟಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳಿಗೆ ಕಾಲಾವಕಾಶವಿದ್ದು, ಆಕ್ಷೇಪಣೆಗಳನ್ನು ಸ್ವೀಕಾರ ಮಾಡಿ ಅಲ್ಲಿ ಸ್ಪೀಕಿಂಗ್‌ ಆರ್ಡರ್‌ ಮಾಡಬೇಕು. ದೋಷ ರಹಿತವಾದ ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲು 2021ರ ಜ.14 ಕೊನೆ ದಿನ. ಅಂತಿಮ ಪಟ್ಟಿಯನ್ನು 18ರಂದು ಪ್ರಚುರಪಡಿಸಲಾಗುವುದುಎಂದರು. ಗರುಡು ಆ್ಯಪ್‌ ಅನ್ನು ಬಿಡುಗಡೆಮಾಡಲಾಯಿತು. ಉಪವಿಭಾಗಾಧಿಕಾರಿ ನೇಹಾಜೈನ್‌, ನಗರಸಭೆ ಆಯುಕ್ತ ಲೋಕೇಶ್‌, ತಹಶೀಲ್ದಾರ್‌ ಚಂದ್ರಶೇಖರ್‌ ಶಂ.ಗಾಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next