Advertisement

ಶಿಕ್ಷಣ ಪ್ರತಿಯೊಬ್ಬರ ಸೊತ್ತಾಗಬೇಕು

12:50 PM Nov 13, 2017 | Team Udayavani |

ಬೆಂಗಳೂರು: ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳ ಸಮನ್ವಯದಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವಂತಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಹೇಳಿದರು. ಬ್ರೈನ್‌ ಫೀಡ್‌ ಸಂಸ್ಥೆ ಭಾನುವಾರ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಮತ್ತು ಶಾಲಾ ಶ್ರೇಷ್ಠತಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

Advertisement

ಸಮಾಜದ ಪ್ರತಿ ಮಗುವಿಗೂ ಶಿಕ್ಷಣ ಸಿಗಬೇಕು. ಬಡವ, ಶ್ರೀಮಂತ ಎನ್ನುವುದು ಅಳಿಸಿ, ಶಿಕ್ಷಣದ ಎಲ್ಲ ಆಯಾಮಗಳಲ್ಲೂ ಪ್ರತಿಭೆಯನ್ನು ಗುರುತಿಸುವ ಕೆಲಸ ಆಗಬೇಕು ಎಂದರು.  ಸಾಮಾಜಿಕ-ಆರ್ಥಿಕ ಸ್ಥಾನಮಾನ ಶಿಕ್ಷಣ ಕ್ಷೇತ್ರದಲ್ಲಿ ಪರಿಗಣಿಸಬಾರದು.

ಹೊಸ ಆವಿಷ್ಕಾರಗಳು ಮತ್ತು ಶಿಕ್ಷಣದ ಗುಣಮಟ್ಟವನ್ನು ಅಪ್‌ಡೇಟ್‌ ಮಾಡುತ್ತಿರಬೇಕು. ಶೂನ್ಯ ಫ‌ಲಿತಾಂಶ ಪಡೆದ ಶಾಲೆಗಳಿಗೆ ನಾವು ನೋಟಿಸ್‌ ನೀಡಿದ್ದೇವೆ. ಶಿಕ್ಷಕರ ವೇತನದ ವಿಳಂಬದ ವದಂತಿಗೆ ಆತಂಕಪಡಬೇಕಿಲ್ಲ ಎಂದು ಹೇಳಿದರು. ಸುಪ್ರೀಂ ಕೋಟ್‌ ನ್ಯಾಯವಾದಿ ಬ್ರಿಜೇಶ್‌ ಕಾಳಪ್ಪ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next