Advertisement

ಸೃಜನಶೀಲತೆ, ಕ್ರಿಯಾಶೀಲತೆ ಬೆಳೆಸುವ ಶಿಕ್ಷಣ ಎಲ್ಲರಿಗೂ ಸಿಗಲಿ

10:37 PM May 22, 2019 | mahesh |

ಕೊಂಬೆಟ್ಟು: ಸೃಜನಶೀಲತೆ ಹಾಗೂ ಕ್ರಿಯಾಶೀಲತೆಯನ್ನು ಬೆಳೆಸುವ ಶಿಕ್ಷಣ ಮಕ್ಕಳಿಗೆ ಸಿಗಬೇಕು. ಭಾವನಾದ ಕಿಲಕಿಲ ಮಕ್ಕಳ ಕೂಟ ಶಿಬಿರವು ಇಂತಹ ಚಟುವಟಿಕೆಯನ್ನು ಮಕ್ಕಳಿಗೆ ನೀಡುತ್ತಿದೆ ಎಂದು ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಸಿಂಚನಲಕ್ಷ್ಮೀ ಹೇಳಿದರು.

Advertisement

ವಿಶ್ವಕರ್ಮ ಯುವಸಮಾಜ, ವಿಶ್ವಬ್ರಾಹ್ಮಣ ಸೇವಾ ಸಂಘ ಹಾಗೂ ವಿಶ್ವಕರ್ಮ ಮಹಿಳಾ ಮಂಡಳಿಯ ಆಶ್ರಯದಲ್ಲಿ ಬೊಳುವಾರು ಭಾವನಾ ಕಲಾ ಆರ್ಟ್ಸ್ನ ನೇತೃತ್ವದಲ್ಲಿ ನಡೆದ “ಕಿಲ ಕಿಲ-2019′ ಮಕ್ಕಳ ಕೂಟವನ್ನು ಬುಧವಾರ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಅವರು ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್‌. ಎನ್‌. ಜಗದೀಶ್‌ ಆಚಾರ್ಯ ಮಾತನಾಡಿ, ಭಾವನ ಕಲಾ ಆರ್ಟ್ಸ್ ಪ್ರತಿ ವರ್ಷ ನಡೆಸುವ ಮಕ್ಕಳ ಕೂಟವು ಮಕ್ಕಳ ಪ್ರತಿಭೆಗಳು ಅರಳಲು ಪೂರಕವಾಗಿವೆ ಎಂದರು.

ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ವಾಣಿಶ್ರೀ ನವೀನ್‌, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಚಿತ್ರಕಲಾ ಶಿಕ್ಷಕ ಶಿವಗಿರಿ, ಭಾವನ ಕಲಾ ಆರ್ಟ್ಸ್ನ ವಿಘ್ನೇಶ್‌ ವಿಶ್ವಕರ್ಮ ಉಪಸ್ಥಿತರಿದ್ದರು.

ಸಮ್ಮಾನ
ಎಸೆಸೆಲ್ಸಿಯಲ್ಲಿ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿವೇಕಾನಂದ ಆಂ.ಮಾ. ಶಾಲಾ ವಿದ್ಯಾರ್ಥಿನಿ ಸಿಂಚನಲಕ್ಷ್ಮೀ ಅವರನ್ನು ಸಮ್ಮಾನಿಸಲಾಯಿತು. ಪತ್ರಕರ್ತ ಮೌನೇಶ್‌ ವಿಶ್ವಕರ್ಮ ಸ್ವಾಗತಿಸಿ, ವಂದಿಸಿದರು. ಬಳಿಕ ನಡೆದ ಮಕ್ಕಳ ಕೂಟದಲ್ಲಿ ವಿವಿಧ ರಂಗಾಟಗಳು, ಪೇಪರ್‌ ಕ್ರಾಫ್ಟ್‌, ನಾಟಕ, ಬರ್ತ್‌ಡೇ ಕ್ಯಾಪ್‌ ತಯಾರಿ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳಾದ ಶಿವಗಿರಿ ಕಲ್ಲಡ್ಕ, ರೋಹಿಣಿ ರಾಘವಾಚಾರ್‌, ಮೌನೇಶ ವಿಶ್ವಕರ್ಮ ಪ್ರಾತ್ಯಕ್ಷಿಕೆಯ ತರಗತಿಗಳನ್ನು ನಡೆಸಿಕೊಟ್ಟರು.

Advertisement

ಸಂಜೆ ನಡೆದ ಸಮಾರೋಪದ ಅಧ್ಯಕ್ಷತೆಯನ್ನು ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಎನ್‌. ಸುರೇಶ್‌ ಆಚಾರ್ಯ ವಹಿಸಿದ್ದರು. ರೋಟರ್ಯಾಕ್ಟ್ ಸಭಾಪತಿ ಶ್ರೀಧರ ಆಚಾರ್ಯ, ಚಲನಚಿತ್ರ ನಟಿ ನಿರೀಕ್ಷಾ ಶೆಟ್ಟಿ, ಭಾವನಾ ಕಲಾ ಆರ್ಟ್ಸ್ನ ಮಾಲಕ ವಿಘ್ನೇಶ್‌ ವಿಶ್ವಕರ್ಮ ವೇದಿಕೆಯಲ್ಲಿದ್ದರು. ರಂಗ ನಿರ್ದೇಶಕ ಮೌನೇಶ ವಿಶ್ವಕರ್ಮ, ಜಯಶ್ರೀ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಭಾವನಾ ಬಳಗದ ಗಣೇಶ್‌ ಆಚಾರ್ಯ ಬನ್ನೂರು, ಸೀಮಾ, ದಿವ್ಯಾ, ಮೀನಾಕ್ಷಿ, ಮಮತಾ, ಚೈತ್ರಾ, ಜಯಂತಿ, ಭವ್ಯಾ, ದಿವ್ಯಶ್ರೀ, ಅಕ್ಷತಾ, ಲೀಲಾವತಿ, ವಸಂತ್‌, ವಿಶಾಲ್‌, ಪ್ರದೀಪ್‌, ದಿನೇಶ್‌ ವಿಶ್ವಕರ್ಮ, ವನಿತಾ ವಿಘ್ನೇಶ್‌, ಮುರಳೀಧರ ಆಚಾರ್ಯ ಸಂಪ್ಯ ಸಹಕರಿಸಿದರು.

100 ಮಕ್ಕಳು ಭಾಗಿ
ಈ ಬಾರಿಯ ಭಾವನಾ ಕಿಲಕಿಲ ಮಕ್ಕಳ ಕೂಟದಲ್ಲಿ 30 ಶಾಲೆಗಳ 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು. ವಿಶೇಷವಾಗಿ ಬೆಂಗಳೂರು ಹಾಗೂ ಚೆನ್ನೈನಿಂದ ಇಬ್ಬರು ವಿದ್ಯಾರ್ಥಿಗಳು ಆಗಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next