Advertisement
ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಡಾ. ರಾಜಕುಮಾರ್ ಕಲಾಮಂದಿರದಲ್ಲಿ ಶ್ರೀ ಸಿದ್ದಮಲ್ಲೇಶ್ವರ ಕಲಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ್ ರವರ ಸ್ಮರಣಾರ್ಥ ಗುರುವಾರ ನಡೆದ ದಕ್ಷಯಜ್ಞ ನಾಟಕ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಜಾನಪದ ಕಲೆಗಳ ತವರೂರು. ಅದೇ ರೀತಿ ನಾಟಕ ಕಲೆಗೂ ಹೆಚ್ಚು ಪ್ರಸಿದ್ಧಿಯಾಗಿದೆ ಎಂದರು. ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ರಾಘವೇಂದ್ರ ರಾಜಕುಮಾರ್, ಮಂಗಳಾ ರಾಘವೇಂದ್ರ ರಾಜಕುಮಾರ್ ಅವರಿಗೆ ಬಸವೇಶ್ವರ ವಿಗ್ರಹ ನೀಡಿ ಸನ್ಮಾನಿಸಲಾಯಿತು. ಸಿದ್ದಮಲ್ಲೇಶ್ವರ ಕಲಾ ಬಳಗ ಅಧ್ಯಕ್ಷ ಎನ್.ಆರ್ .ಪುರುಷೋತ್ತಮ್, ಕಾರ್ಯದರ್ಶಿ ಬಸವರಾಜು, ಹಿರಿಯ ಕಲಾವಿದೆ ಪಂಕಜಾ ರವಿಶಂಕರ್, ಚಾಮುಲ್ ಅಧ್ಯಕ್ಷ ನಾಗೇಂದ್ರ, ನಿರ್ದೇಶಕರಾದ ಎಚ್.ಎಸ್.ಬಸವರಾಜು, ಸದಾಶಿವಮೂರ್ತಿ, ನಗರಸಭಾ ಸದಸ್ಯರಾದ ಮಮತಾ ಬಾಲಸುಬ್ರಹ್ಮಣ್ಯ, ರಾಜಪ್ಪ, ಮುಖಂಡರಾದ ಉಮೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕ ಗುರುಲಿಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನ ಡಾ.ಎ.ಆರ್.ಬಾಬು, ಪಿ.ಮರಿಸ್ವಾಮಿ, ಎಂ.ರಾಮಚಂದ್ರ, ಪಿ.ರಾಜಣ್ಣ, ಎಪಿಎಂಸಿ ಅಧ್ಯಕ್ಷ ಮನೋಜ್‌ಪಟೇಲ್, ಮಾಜಿ ಅಧ್ಯಕ್ಷ ಡಿ. ನಾಗೇಂದ್ರ, ಗುರುಸ್ವಾಮಿ, ಇದ್ದರು.
ನಮ್ಮೂರಲ್ಲಿ ಮಾತಾಡುವುದು ಹೆಚ್ಚು ಖುಷಿ ಕೊಡುತ್ತದೆಚಾಮರಾಜನಗರ ನಮ್ಮ ಹುಟ್ಟೂರು. ಇಲ್ಲಿಗೆ ಬಂದರೆ ನಮಗೆ ಬಹಳ ಸಂತೋಷವಾಗುತ್ತದೆ. ನಾನು ಎಲ್ಲೆಲ್ಲೋ ವೇದಿಕೆಯಲ್ಲಿ ಮಾತನಾಡಬಹುದು. ಆದರೆ, ನಮ್ಮೂರಿನ ವೇದಿಕೆಯಲ್ಲಿ ನಿಂತು ಮಾತನಾಡುತ್ತಿರುವುದು ನನಗೆ ಹೆಚ್ಚು ಖುಷಿ ಕೊಡುತ್ತದೆ. ಅಪ್ಪಾಜಿ ಅವರ ಹೆಸರಿನಲ್ಲಿರುವ ಡಾ. ರಾಜಕುಮಾರ್ ರಂಗಮಂದಿರದಲ್ಲಿ ದಕ್ಷ ಯಜ್ಞ ನಾಟಕವನ್ನು ಉದ್ಘಾಟನೆ ಮಾಡಿದ್ದು ನನ್ನ ಪುಣ್ಯ. ಕರುನಾಡಿನ ಕಲಾಪ್ರೇಮಿಗಳು ನಮ್ಮ ಕುಟುಂಬವನ್ನು ಬೆಳೆಸಿದ್ದಾರೆ. ಅವರಿಗೆ ನಮ್ಮ ಜನ್ಮ ಇರುವವರಿಗೆ ಋಣ ತಿಳಿಸಲು ಸಾಧ್ಯವಿಲ್ಲ. ಅಪ್ಪು ಭಾವಚಿತ್ರಕ್ಕೆ ನಾನು ಹೂವು ಹಾಕಲಿಲ್ಲ. ಕಾರಣ ಅವನು ನನ್ನ ತಮ್ಮ. ತಮ್ಮ ನನಗೆ ಹೂವು ಹಾಕಬೇಕಾಗಿತ್ತು ಎಂದು ಭಾವುಕರಾದರು. ತನ್ನ ಕೊನೆಯ ಚಿತ್ರ ಗಂಧದಗುಡಿಯಲ್ಲಿ ಅಪ್ಪು ಅನೇಕ ಸಂದೇಶ ಬಿಟ್ಟು ಹೋಗಿದ್ದಾನೆ. ಕಾಡು ಉಳಿಸಿ, ಕಾಡಿನಲ್ಲಿ ಪ್ಲಾಸ್ಟಿಕ್ ಬಳಸಬೇಡಿ. ನೀರನ್ನು ವ್ಯರ್ಥ ಮಾಡಬೇಡಿ ಎಂಬ ಸಂದೇಶಗಳನ್ನು ನೀಡಿದ್ದಾನೆ. ಇವುಗಳನ್ನು ಪಾಲಿಸುವುದು ಅವನಿಗೆ ನಾವು ನೀಡುವ ಗೌರವ ಎಂದರು.