Advertisement
ಪಂಚಾಯತ್ ಮಟ್ಟದಲ್ಲಿ ನಡೆದ ಕಾರ್ಯಕ್ರಮವನ್ನು ಬಸ್ ನಿಲ್ದಾಣ ಪರಿಸರದಲ್ಲಿ ಪಂಚಾಯತ್ ಅಧ್ಯಕ್ಷರಾದ ಕೆ.ಎನ್.ಕೃಷ್ಣ ಭಟ್ ಬದಿಯಡ್ಕ ಉದ್ಘಾಟಿಸಿ ಮಾತನಾಡಿ, ಮಳೆಗಾಲದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸುವ ಸಲುವಾಗಿ ಈ ಶುಚೀಕರಣ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು ಆರೋಗ್ಯವಂತ ಸಮಾಜದ ಸƒಷ್ಟಿಗಾಗಿ ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಕೈಜೋಡಿಸಬೇಕು. ಮಾತ್ರವಲ್ಲದೆ ಜನರಲ್ಲಿ ಈ ಬಗ್ಗೆ ಜಾಗƒತಿ ಮೂಡಿಸುವಂತೆ ಕೇಳಿಕೊಂಡರು. ಮನೆ ಹಾಗೂ ಪರಿಸರ, ಪೇಟೆ ಪಟ್ಟಣಗಳಲ್ಲಿ ಶುಚಿತ್ವ ಕಾರ್ಯವು ಭರದಿಂದ ಸಾಗುತ್ತಿದ್ದು ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಮಾತ್ರ ಇದು ಸಂಪೂರ್ಣವಾಗಿ ಯಶಸ್ವಿಯಾಗಲು ಸಾಧ್ಯ ಎಂದವರು ಹೇಳಿದರು.
ಸ್ವತ್ಛತೆ ಕೇವಲ ಎನ್.ಎಸ್.ಎಸ್, ಕುಟುಂಬಶ್ರೀ, ಎಸ್. ಪಿ.ಸಿ. ಮುಂತಾದ ಸಂಘಟನೆಗಳ ಸದಸ್ಯರ ಹೊಣೆ ತಿಳಿಯದೇ ಎಲ್ಲ ನಾಗರಿಕರು ಸ್ವತ್ಛ ಗ್ರಾಮಕ್ಕೆ ಮುಂದಾಗಬೇಕು. ತ್ಯಾಜ್ಯ ವಿಲೇವಾರಿ
ಮದುವೆ ಮೊದಲಾದ ಸಮಾರಂಭಗಳ ಸಂದರ್ಭದಲ್ಲಿ ತ್ಯಾಜ್ಯ ಒಂದು ಸಮಸ್ಯೆಯೆ ಸರಿ. ಹೆಚ್ಚಾಗಿ ಈ ತ್ಯಾಜ್ಯಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆಯುತ್ತಾರೆ. ಇಲ್ಲವೇ ಹಳ್ಳ ತೋಡಿಗೆ ಹಾಕಿ ಸುಮ್ಮನಾಗುತ್ತಾರೆ. ಆದರೆ ಆಹಾರ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಇರುವ ಸಾಧ್ಯತೆಗಳ ಕಡೆ ಗಮನ ಹರಿಸುವವರಿಲ್ಲ. ಪ್ರತಿಯೊಂದು ಪಂಚಾಯತ್‌ಗಳು, ಮುನಿಸಿ ಪಾಲಿಟಿಗಳು ಈ ಬಗ್ಗೆ ಜಾಗರೂಕತೆ ವಹಿಸಬೇಕು.
Related Articles
Advertisement
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದಿನನಿತ್ಯ ಬದಿಯಡ್ಕ ಬಸ್ಸು ತಂಗುದಾಣವನ್ನು ಗುಡಿಸಿ ಶುಚಿಗೊಳಿಸುತ್ತಿರುವ ಪತ್ರಿಕಾ ವಿತರಕ ಬಾಲಕೃಷ್ಣ ಅವರು ಈ ಸಂದರ್ಭದಲ್ಲಿಯೂ ಜನಪ್ರತಿನಿಧಿಗಳೊಂದಿಗೆ ಪಾಲ್ಗೊಂಡು ಶುಚೀಕರಣದಲ್ಲಿ ಸಹಕರಿಸಿದರು.
ಮಳೆ ಮೊದಲೇ ಸ್ವತ್ಛತೆ ಆರಂಭವಾಗಲಿಮಳೆ ಪ್ರಾರಂಭವಾಗುತ್ತಿದ್ದಂತೆ ಮಳೆನೀರಲ್ಲಿ ಕೊಚ್ಚಿಕೊಂಡು ಬರುವ ಬಟ್ಟೆಬರೆ, ಪ್ಲಾಸ್ಟಿಕ್, ಆಹಾರ ತ್ಯಾಜ್ಯಗಳು ಎಲ್ಲೆಲ್ಲೂ ದುರ್ಗಂಧ ಬೀರುವುದಲ್ಲದೆ ಹಲವಾರು ರೋಗಗಳಿಗೆ ಕಾರಣವಾಗಲಿವೆೆ. ಹಾಗೆಯೇ ಭೂಮಿಗೆ ಇಂಗುವ ನೀರಿನ ಮಟ್ಟದಲ್ಲಿ ಉಂಟಾಗಬಹುದಾದ ಕುಸಿತ ಅಂತರ್ಜಲಮಟ್ಟ ಕುಸಿಯಲು ಕಾರಣವಾಗುತ್ತದೆ. ಇನ್ನೊಂದೆಡೆ ಚರಂಡಿಗಳಲ್ಲಿ ಈಗಾಗಲೇ ತುಂಬಿರುವ ಬೇಡದ ವಸ್ತುಗಳೊಂದಿಗೆ ಮಳೆನೀರಲ್ಲಿ ಹರಿದು ಬಂದ ವಸ್ತುಗಳೂ ಸೇರಿ ಉಂಟಾಗುವ ಸಮಸ್ಯೆಯಿಂದ ಚರಂಡಿ ನೀರು ರಸ್ತೆಯಲ್ಲಿ ಹರಿಯುವ ಸಾಧ್ಯೆತೆಯೂ ಹೆಚ್ಚು. ಜಾಗೃತಿ ಮೂಡಲಿ
ಜನರ ಸಹಕಾರದಿಂದ ಮಾತ್ರ ಇಂತಹ ಕಾರ್ಯಗಳು ಸುಲಲಿತವಾಗಿ ನಡೆಯಲು ಸಾಧ್ಯ. ಕುಟುಂಬಶ್ರೀ, ವಿದ್ಯಾರ್ಥಿ ಪೋಲೀಸ್, ಸಾಮಾಜಿಕ ಕಾರ್ಯಕರ್ತರು ಪೂರ್ಣ ಸಹಕಾರ ನೀಡುವ ಮೂಲಕ ಬದಿಯಡ್ಕ ಪ್ರದೇಶವನ್ನು ಸ್ವತ್ಛವಾಗಿಸಲು ಸಾಧ್ಯವಾಯಿತು. ಮುಂದೆ ತ್ಯಾಜ್ಯಗಳನ್ನು ಕಂಡಲ್ಲಿ ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುವುದು.
- ಕೃಷ್ಣ ಭಟ್, ಬದಿಯಡ್ಕ ಪಂಚಾಯತ್ ಆಧ್ಯಕ್ಷರು. ಪ್ಲಾಸ್ಟಿಕ್ ಸಂಗ್ರಹಿಸಿ
ಸ್ವತ್ಛ ಪರಿಸರದಿಂದ ಆರೋಗ್ಯವಂತ ಸಮಾಜ ಸಷ್ಟಿಯಾಗುತ್ತದೆ. ಪ್ಲಾಸ್ಟಿಕ್ ಮುಂತಾದ ವಸ್ತುಗಳಲ್ಲಿ ಕಟ್ಟಿ ನಿಲ್ಲುವ ಮಳೆನೀರು ರೋಗಾಣುಗಳನ್ನುಂಟು ಮಾಡುವುದರಿಂದ ಅವುಗಳನ್ನು ಮಾರ್ಗದ ಬದಿ, ಚರಂಡಿಗಳಿಂದ ಸಂಗ್ರಹಿಸಿ ಸಂಸ್ಕರಣಕೇಂದ್ರಗಳಿಗೆ ಸಾಗಿಸುವ ಕಾರ್ಯ ಕೈಗೊಳ್ಳಲಾಗಿದೆ.
– ಶ್ಯಾಮ ಪ್ರಸಾದ್ ಮಾನ್ಯ, ಸ್ಥಾಯೀ ಸಮಿತಿ ಅಧ್ಯಕ್ಷರು