Advertisement
ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ನೇತೃತ್ವದಲ್ಲಿ ಬೈಂದೂರು ತಾಲೂಕಿನ ಶಿರೂರು ಅಳ್ವೆಗದ್ದೆ ಮೀನುಗಾರಿಕಾ ಲಂಗರು ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಮತದಾನ ಜಾಗೃತಿಯನ್ನು ಅವರು ಉದ್ಘಾಟಿಸಿ, ಚುನಾವಣ ದಿನವೆಂದರೆ ರಜಾ ದಿನವಲ್ಲ. ನಮ್ಮ ಹಕ್ಕನ್ನು ಚಲಾಯಿಸಿ ಶೇ. 100 ಮತದಾನದ ಗುರಿ ತಲುಪಬೇಕು ಎಂದರು.
Related Articles
Advertisement
ಮತದಾನ ಜಾಗೃತಿಗೆ ಸಂಬಂಧಿಸಿ ಶಿರೂರಿನ ಮಹಿಳೆಯರು ಬಂದರು ಪ್ರದೇಶದಲ್ಲಿ ವಿವಿಧ ರಂಗೋಲಿಗಳನ್ನು ಬಿಡಿಸಿದರು. ಜಿಲ್ಲಾಧಿಕಾರಿಗಳು ರಂಗೋಲಿ ಹಾಕುವ ಮೂಲಕ ಚಾಲನೆ ನೀಡಿದ ರಲ್ಲದೇ ಜಾಥಾ ಉದ್ಘಾಟಿಸಿದರು. ಆ ಬಳಿಕ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ನಾಯ್ಕನಕಲ್ಲು ಸ್ಕೂಬಾ ಡೈವಿಂಗ್ ಪ್ರದೇಶಕ್ಕೆ ತೆರಳಿ ವಿನೂತನವಾಗಿ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡರು. ಸಮುದ್ರದ ಮಧ್ಯೆಯೇ ಜಿಲ್ಲಾಧಿ ಕಾರಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು. ಜಿ. ಪಂ. ಸಿಇಒ ಮತ್ತಿತರರು ಸ್ಕೂಬಾ ಡೈವಿಂಗ್ ಮೂಲಕ ತೆರಳಿ ಮತದಾನ ಜಾಗೃತಿ ಮೂಡಿಸಿದರು.